ಕನ್ನಡಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಬಂಟ್ವಾಳ ‘ಚಿಣ್ಣರಲೋಕ ‘ಮೋಕೆದ ಕಲಾವಿದೆರ್ ಸೇವಾಟ್ರಸ್ಟ್ ಆಶ್ರಯದಲ್ಲಿ ಬಿ.ಸಿ.ರೋಡಿನ ಗಾಣದಪಡ್ಪು ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ತುಳು ನಾಟಕ ಸ್ಪರ್ಧೆಯಲ್ಲಿ ನವೋದಯ ಮಿತ್ರಕಲಾ ವ್ರಂದ ನೆತ್ತರಕೆರೆ ನಾಟಕ ತಂಡ ಪ್ರಥಮ ಸ್ಥಾನ ಪಡೆದಿದೆ.
ಹಾಗೆಯೇ ಬಿ.ಸಿ.ರೋಡಿನ ರಂಗಭೂಮಿ ಕಲಾವಿದರ ತಂಡ ದ್ವಿತೀಯ,ಬಂಟ್ವಾಳದ ವಗ್ಗ ಶ್ರೀ ಶಾರದಾ ಕಲಾವಿದರ ತಂಡ ತ್ರತೀಯ ತಂಡ ಪಡೆದುಕೊಂಡಿದೆ. ಉತ್ತಮ ನಾಯಕ ನಟನಾಗಿ ನಾವೂರು ಕಲಾನಿಧಿ ಕಲಾವಿದೆರ್ ತಂಡದ ಉಮೇಶ ಮಜಲೋಡಿ ಪ್ರಥಮ,ನವೋದಯ ಮಿತ್ರಕಲಾ ವ್ರಂದದ ದಾಮೋದರ ನೆತ್ತರಕೆರೆ ದ್ವಿತೀಯ ಸ್ಥಾನಗಳಿಸಿದ್ದಾರೆ.
ಉತ್ತಮ ನಾಯಕನಟಿಯಾಗಿ ಐಸಿರಿ ಕಲಾವಿದರು ಮಧ್ವ ತಂಡದ ಶಿಲ್ಪಾ ಪ್ರಥಮ,ಕಲಾನಿಧಿ ಕಲಾವಿದೆರ್ ನಾವೂರು ತಂಡದ ವೈಶಾಲಿ ಅಢ್ಯನಡ್ಕ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.ಖಳ ನಾಯಕರಾಗಿ ನಾವೂರು ಕಲಾನಿಧಿ ತಂಡದ ವಿನೋದ್ ರಾಜ್ ಹಾಗೂ ಬಿ.ಸಿ.ರೋಡ್ ರಂಗಭೂಮಿ ತಂಡದ ಅರುಣ್ ಚಂದ್ರ ಬಿ.ಸಿ.ರೋಡ್ ಪ್ರಥಮ ಸ್ಥಾನ ಹಂಚಿಕೊಂಡರೆ,ಐಸಿರಿ ಕಲಾವಿದರು ತಂಡದ ಸತೀಶ್ ದ್ವಿತೀಯ ಸ್ಥಾನ ಪಡೆದಿದ್ದಾರೆ.ಖಳನಾಯಕಿಯಾಗಿ ಪುಗರ್ತೆ ಕಲಾವಿದರು ವಿಟ್ಲ ತಂಡದ ಶ್ರೇಯಸ್ ಪಾಟಾಳಿ ಕೇಪು ಅವರು ಪಡೆದಿದ್ದಾರೆ.
ಉತ್ತಮ ಪೋಷಕ ನಟನಾಗಿ ವಗ್ಗ ಶಾರದಾ ಕಲಾವಿದರು ತಂಡದ ರಮಾ ಬಿಸಿ.ರೋಡ್ ಪ್ರಥಮ ಹಾಗೂ ಬಿ.ಸಿ.ರೊಇಡ್ ರಂಗಭೂಮಿ ತಂಡದ ರಾಜೇಶ್ ಆಚಾರ್ಯ ಫರಂಗೀಪೇಟೆ ದ್ವಿತೀಯ ಸ್ಥಾನ ಪಡೆದಿದ್ದಾರೆ.ಉತ್ತಮ ಪೋಷಕ ನಟಿಯಾಗಿ ಮಧ್ವ ಐಸಿರಿ ತಂಡದ ಸುರೇಶ್ ಸರಪಾಡಿ ಪ್ರಥಮ,ನವೋದಯ ಮಿತ್ರಕಲಾವ್ರಂದದ ರಮ್ಯ ದ್ವಿತೀಯ ಸ್ಥಾನ ಪಡೆದಿದ್ದಾರೆ.ಉತ್ತಮ ಹಾಸ್ಯ ನಟನಾಗಿ ಬಿ.ಸಿ.ರೋಡ್ ರಂಗಭೂಮಿ ತಂಡದ ಸಂದೀಪ್ ಶೆಟ್ಟಿ ರಾಯಿ ಪ್ರಥಮ,ನವೋದಯ ಮಿತ್ರಕಲಾವ್ರಂದದ ವರದರಾಜ್ ದ್ವಿತೀಯ ಸ್ಥಾನ ಪಡೆದಿದ್ದಾರೆ.ಉತ್ತಮ ಹಾಸ್ಯ ನಟಿಯಾಗಿ ನವೋದಯ ಕಲಾಮಿತ್ರವ್ರಂದದ ಅಕ್ಷಯ ಪ್ರಥಮ,ವಗ್ಗ ಶಾರದಾ ಕಲಾವಿದರು ತಂಡದ ರಮ್ಯ .ಎನ್ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಅತ್ಯತ್ತಮ ಕಥೆ,ಸಂಭಾಷಣೆ ಯಲ್ಲಿ ನೆತ್ತರಕೆರೆ ನವೋದಯ ಮಿತ್ರಕಲಾವ್ರಂದದ ‘ಅಪುಜಿಂದ್ ಪನೊಡ್ಚಿ’ ಪ್ರಥಮ,ಕೊಯಿಲ ಶ್ರೀ ವಿನಾಯಕ ಶಾರದಾ ಕುಸಲ್ದ ಕಲಾವಿದರ್ ತಂಡದ ‘ಮಂಡೆಡಿಪ್ಪಡ್’ ದ್ವಿತೀಯ ಸ್ಥಾನಪಡೆದಿದೆ.ಅತ್ಯತ್ತಮ ನಿರ್ದೇಶನ ವಗ್ಗ ಶಾರದಾ ಕಲಾವಿದರು ತಂಡದ’ ನಿರ್ದೇಶಕ ರಮಾ ಬಿ.ಸಿ.ರೋಡು ಪ್ರಥಮ ಹಾಗೂ ನವೋದಯ ಮಿತ್ರಕಲಾವ್ರಂದದ ನಿರ್ದೇಶಕ ಕೆ.ಆರ್ ದೇವದಾಸ್ ಮತ್ತು ಬಿ.ಸಿ.ರೋಡ್ ರಂಗಭೂಮಿ ತಂಡದ ನಿರ್ದೇಶಕ ಚೇತನ್ ರೈ ಮಾಣಿ ಅವರು ದ್ವಿತೀಯ ಸ್ಥಾನ ಹಂಚಿಕೊಂಡರೆ ಕೊಯಿಲ ಶ್ರೀ ವಿನಾಯಕ ಶಾರದಾ ಕುಸಲ್ದ ಕಲಾವಿದರುವತಂಡದ ನಿರ್ದೇಶಕ ಸುರೇಶ್ ಕುದ್ಕೋಳಿ ತ್ರತೀಯ ಸ್ಥಾನ ಪಡೆದಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ಉವಾರಿ ಸಚಿವ ರಮಾನಾಥ ರೈ, ಶಾಸಕಿ ಶಕುಂತಲಾ ಶೆಟ್ಟಿ,ಪ್ರಗತಿಪರ ಕ್ರಷಿಕ ರಾಜೇಶ್ ನಾಯ್ಕ ಉಳಿಪಾಡಿಗುತ್ತು,ಶ್ರೀ.ಕ್ಷೇ.ಧ.ಗ್ರಾ
ಸಂಗೀತ ನಿರ್ದೇಶಕ ಗುರುಕಿರಣ ವಿಜೇತರಿಗೆ ಬಹುಮಾನ ವಿತರಿಸಿದರು.ತೀರ್ಪುಗಾರರಾಗಿ ಸಹಕರಿಸಿದ್ದ ಪರಮಾನಂದ ಸಾಲ್ಯಾನ್,ರಮೇಶ ರೈ ಕುಕ್ಕುವಳ್ಳಿ,ಅರುಣ್ ಶೆಟ್ಟಿ ಪೇಜಾವರ ರವರನ್ನು ಈಸಂದರ್ಭದಲ್ಲಿ ಸನ್ಮಾನಿಸಲಾಯಿತು.
Be the first to comment on "ತುಳು ನಾಟಕ ಸ್ಪರ್ಧೆಯಲ್ಲಿ ನವೋದಯ ಮಿತ್ರಕಲಾ ವ್ರಂದ ನೆತ್ತರಕೆರೆ ನಾಟಕ ತಂಡ ಪ್ರಥಮ ಸ್ಥಾನ"