ಜಗಳ ಬಿಡಿಸಲು ಹೋದ ಅತ್ತೆಯನ್ನೇ ಕೊಂದ ಅಳಿಯ

ಗಂಡ ಹೆಂಡಿರ ಜಗಳ ಬಿಡಿಸಲು ಬಂದ ಮಹಿಳೆ ತನ್ನ ಅಳಿಯನಿಂದಲೇ  ಸಾವನ್ನಪ್ಪಿದ್ದಾರೆ . ಇಲ್ಲಿನ ಮಂಚಿ ಸಮೀಪ ನಾರಾಜೆ ಎಂಬಲ್ಲಿ ಮೇ.12ರಂದು ಘಟನೆ ನಡೆದಿದ್ದು, ಮಹಿಳೆ ಶನಿವಾರ ರಾತ್ರಿ ಸಾವನ್ನಪ್ಪಿದ್ದಾರೆ.

ಆರೋಪಿ ಜಯಪ್ರಸಾದ್(41) ಕೂಲಿ ಕೆಲಸ ಮಾಡಿಕೊಂಡಿದ್ದು, ಆತನ ಪತ್ನಿಯ ತಾಯಿ ಕುಸುಮಾ (54) ಸಾವನ್ನಪ್ಪಿದವರು. ಕುಸುಮಾ ಮಗಳ ಮನೆಗೆ ಬಂದಿದ್ದ ವೇಳೆ ಜಯಪ್ರಸಾದ್ ಮತ್ತು ಆತನ ಪತ್ನಿ ಉಮಾಕುಮಾರಿ ಜಗಳವಾಡುತ್ತಿದ್ದರು. ಅವರನ್ನು ಬಿಡಿಸಲು ಹೋದಾಗ ಅತ್ತೆಯ ಕಡೆಗೆ ಅಳಿಯನ ಕೋಪ ತಿರುಗಿತು. ಅವರನ್ನು ದೂಡಿದಾಗ ತಲೆ ಗೋಡೆಗೆ ಜಜ್ಜಿದ್ದು, ಬಿದ್ದು ತಪ್ಪಿಸಿಕೊಂಡು ಹೋಗುವ ಸಂದರ್ಭ ಆರೋಪಿ ಜಯಪ್ರಸಾದ್ ಅತ್ತೆಯನ್ನು ಮರದ ಸೋಂಟೆಯಿಂದ ಹೊಡೆದಿದ್ದಾನೆ ಎಂದು ಬಂಟ್ವಾಳ ಗ್ರಾಮಾಂತರ ಠಾಣೆಗೆ ಆತನ ಪತ್ನಿ ಉಮಾಕುಮಾರಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಮೇ 12ರಂದು ನಡೆದಿದ್ದು, ತೀವ್ರ ಗಾಯಗೊಂಡಿದ್ದ ಕುಸುಮಾ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ. ಜಯಪ್ರಸಾದ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ