ಗಂಡ ಹೆಂಡಿರ ಜಗಳ ಬಿಡಿಸಲು ಬಂದ ಮಹಿಳೆ ತನ್ನ ಅಳಿಯನಿಂದಲೇ ಸಾವನ್ನಪ್ಪಿದ್ದಾರೆ . ಇಲ್ಲಿನ ಮಂಚಿ ಸಮೀಪ ನಾರಾಜೆ ಎಂಬಲ್ಲಿ ಮೇ.12ರಂದು ಘಟನೆ ನಡೆದಿದ್ದು, ಮಹಿಳೆ ಶನಿವಾರ ರಾತ್ರಿ ಸಾವನ್ನಪ್ಪಿದ್ದಾರೆ.
ಆರೋಪಿ ಜಯಪ್ರಸಾದ್(41) ಕೂಲಿ ಕೆಲಸ ಮಾಡಿಕೊಂಡಿದ್ದು, ಆತನ ಪತ್ನಿಯ ತಾಯಿ ಕುಸುಮಾ (54) ಸಾವನ್ನಪ್ಪಿದವರು. ಕುಸುಮಾ ಮಗಳ ಮನೆಗೆ ಬಂದಿದ್ದ ವೇಳೆ ಜಯಪ್ರಸಾದ್ ಮತ್ತು ಆತನ ಪತ್ನಿ ಉಮಾಕುಮಾರಿ ಜಗಳವಾಡುತ್ತಿದ್ದರು. ಅವರನ್ನು ಬಿಡಿಸಲು ಹೋದಾಗ ಅತ್ತೆಯ ಕಡೆಗೆ ಅಳಿಯನ ಕೋಪ ತಿರುಗಿತು. ಅವರನ್ನು ದೂಡಿದಾಗ ತಲೆ ಗೋಡೆಗೆ ಜಜ್ಜಿದ್ದು, ಬಿದ್ದು ತಪ್ಪಿಸಿಕೊಂಡು ಹೋಗುವ ಸಂದರ್ಭ ಆರೋಪಿ ಜಯಪ್ರಸಾದ್ ಅತ್ತೆಯನ್ನು ಮರದ ಸೋಂಟೆಯಿಂದ ಹೊಡೆದಿದ್ದಾನೆ ಎಂದು ಬಂಟ್ವಾಳ ಗ್ರಾಮಾಂತರ ಠಾಣೆಗೆ ಆತನ ಪತ್ನಿ ಉಮಾಕುಮಾರಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಮೇ 12ರಂದು ನಡೆದಿದ್ದು, ತೀವ್ರ ಗಾಯಗೊಂಡಿದ್ದ ಕುಸುಮಾ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ. ಜಯಪ್ರಸಾದ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಜಗಳ ಬಿಡಿಸಲು ಹೋದ ಅತ್ತೆಯನ್ನೇ ಕೊಂದ ಅಳಿಯ"
Be the first to comment on "ಜಗಳ ಬಿಡಿಸಲು ಹೋದ ಅತ್ತೆಯನ್ನೇ ಕೊಂದ ಅಳಿಯ"