ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 20.9 ಕಿ.ಮೀ. ದೂರದ ರಸ್ತೆಗಳನ್ನು ಸರ್ವಋತು ಸಂಚಾರಿ ರಸ್ತೆಗಳನ್ನಾಗಿ ಅಭಿವೃದ್ಧಿ ಪಡಿಸಲು ರಾಜ್ಯ ಸರಕಾರದ ಗಾಂಧಿಪಥ ಗ್ರಾಮಪಥ ಯೋಜನೆಯಲ್ಲಿ ರೂ.23ಕೋಟಿ 41 ಲಕ್ಷ ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದು ಕರ್ನಾಟಕ ಸರಕಾರದ ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.
ನಿನ್ನಿಪಡ್ಪು ನಾಟಿ ಬಿಕ್ರೋಡಿ ಕರ್ಬೆಟ್ಟು ನರಿಕೊಂಬು ರಸ್ತೆ ಅಭಿವೃದ್ಧಿಗೆ ರೂ.5 ಕೋಟಿ 92 ಲಕ್ಷ, ಮದಕ ತಾಳಿತ್ತನೂಜಿ ದಂಡೆಮಾರು ಬೋಳಂತೂರು ರಸ್ತೆ ಅಭಿವೃದ್ಧಿಗೆ ರೂ.5 ಕೋಟಿ 27 ಲಕ್ಷ, ದಂಡೆಗೋಳಿ ಬುಡೋಳಿ ಕೊಪ್ಪಳ ರಸ್ತೆಗೆ ರೂ.2 ಕೋಟಿ 35 ಲಕ್ಷ, ಜಾರಂದಗುಡ್ಡೆ ಕನಪಾಡಿ ರಸ್ತೆಗೆ ರೂ.2ಕೋಟಿ 3ಲಕ್ಷ, ಪಲ್ಲಿಪಾಡಿ ಕಂಡದಗುಡ್ಡೆ ಸಾಣೂರು ರಸ್ತೆಗೆ 2ಕೋಟಿ 35 ಲಕ್ಷ, ಪಾಂಡವರಕಲ್ಲು ಪಾಪಿಂದೋಡಿ ಕೆಂಚಗುಡ್ಡೆ ಹಾರ್ದೊಟ್ಟು ರಸ್ತೆಗೆ 3ಕೋಟಿ 17 ಲಕ್ಷ ಹಾಗೂ ಮಂಕುಡೆ ಕುಂಟುಕುಡೇಲು ರಸ್ತೆಗೆ 2ಕೋಟಿ 32 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ನಿರ್ವಹಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment on "ಗಾಂಧಿಪಥ – ಗ್ರಾಮಪಥ ಯೋಜನೆಯಡಿ 23.4 ಕೋಟಿ ರೂ. ಮಂಜೂರು: ರಮಾನಾಥ ರೈ"