- ಬಂಟ್ವಾಳ ಠಾಣೆಯಲ್ಲಿ ನಡೆದ ಜಿಲ್ಲಾ ಮಟ್ಟದ ಎಸ್.ಸಿ, ಎಸ್.ಟಿ. ಕುಂದುಕೊರತೆ ಸಭೆಯಲ್ಲಿ ಆತಂಕ
- ಡ್ರಗ್ ಮಾಫಿಯಾ, ಮರಳು ದಂಧೆಕೋರರ ವಿರುದ್ಧ ಕಡಿವಾಣಕ್ಕೆ ಮನವಿ
- ಅಕ್ರಮ ಮರಳು ಸಾಗಾಟಗಾರರ ವಿರುದ್ಧ ರೌಡಿಶೀಟರ್ ತೆರೆಯಲಾಗುವುದು ಎಂದ ಎಸ್ಪಿ ಬೊರಸೆ
- www.bantwalnews.com report
ನಮಗೆ ಕುಡುಕರ ಭಯವಿಲ್ಲ ಸ್ವಾಮೀ, ಹಗಲು ರಾತ್ರಿ ಗಾಂಜಾ ಸೇವಿಸಿಕೊಂಡು ಇರ್ತಾರೆ. ಎಲ್ಲ ಕಡೆಯೂ ಗಾಂಜಾ ಸಹಿತ ಅಮಲು ಸೇವಿಸುವ ಹುಡುಗರು ಇರ್ತಾರೆ, ಇದಕ್ಕೆಲ್ಲ ಯಾವಾಗ ಕಡಿವಾಣ ಹಾಕ್ತೀರಿ…?
ಹೀಗೆಂದು ಪ್ರಶ್ನಿಸಿದವರು ದಲಿತ ಮುಖಂಡ ಜನಾರ್ದನ ಚಂಡ್ತಿಮಾರ್.
ಬಂಟ್ವಾಳ ನಗರ ಠಾಣೆಯಲ್ಲಿ ಭಾನುವಾರ ನಡೆದ ಪರಿಶಿಷ್ಟ ಜಾತಿ, ಪಂಗಡಕ್ಕೆ ಸಂಬಂಧಿಸಿ ನಡೆದ ಜಿಲ್ಲಾ ಮಟ್ಟದ ಕುಂದುಕೊರತೆ ಸಭೆಯೊಂದು ನಡೆಯಿತು. ಜಿಲ್ಲಾ ಮಟ್ಟದ ಸಭೆ ಎಂದು ಹೇಳಲಾದರೂ ಅಲ್ಲಿದ್ದುದು ಬೆರಳೆಣಿಕೆಯಷ್ಟೇ ಸಭಾಸದರು. ಆಯ್ದ ಕೆಲವರಿಗಷ್ಟೇ ಯಾಕೆ ಹೇಳಿದ್ದೀರಿ ಎಂದು ವಿಶ್ವನಾಥ ಚಂಡ್ತಿಮಾರ್ ಪ್ರಶ್ನಿಸಿದರು. ಈ ಸಂದರ್ಭ ಉತ್ತರಿಸಿದ ಎಸ್ಪಿ, ಮುಂದಿನ ಬಾರಿ ಹೀಗಾಗದು, ಎಲ್ಲರಿಗೂ ಎಸ್ಸೆಮ್ಮೆಸ್ ಮೂಲಕ ಮಾಹಿತಿ ನೀಡುತ್ತೇವೆ ಎಂದರು.
ಈ ಸಂದರ್ಭ ಬೀಟ್ ವ್ಯವಸ್ಥೆ, ಅದರಿಂದಾಗುವ ಪ್ರಯೋಜನಗಳ ಕುರಿತು ಎಸ್ಪಿ ಮಾಹಿತಿ ನೀಡಿದರು. ಆಗ ಮಾತನಾಡಿದ ಜನಾರ್ದನ ಚಂಡ್ತಿಮಾರ್, ಬಂಟ್ವಾಳದಲ್ಲಿ ಗಾಂಜಾ ಸೇದಿ ಅಪರಾಧ ಕೃತ್ಯ ನಡೆಸುವವರ ಸಂಖ್ಯೆ ಜಾಸ್ತಿಯಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಉಳಿದ ದಲಿತ ಮುಖಂಡರೂ ಇದಕ್ಕೆ ದನಿಗೂಡಿಸಿದರು.
ಗಾಂಜಾ ಕುರಿತು ಸಭೆಯಲ್ಲಿ ಪ್ರಸ್ತಾವಿತ ಅಂಶಗಳು ಇವು.
ಈ ಕುರಿತು ಎಸ್ಪಿ ವಿವಿಧ ಮುಖಂಡರಿಂದ ಮಾಹಿತಿ ಆಲಿಸಿದ ಬಳಿಕ ಸ್ಥಳದಲ್ಲೇ ಇದ್ದ ಪ್ರೊಬೆಷನರಿ ಐಎಎಸ್ ಅಧಿಕಾರಿ ನಾಗೇಶ್ ಅವರಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಸೂಚಿಸಿದರು.
ರೌಡಿಶೀಟರ್ ಹಾಕಲು ಹಿಂಜರಿಯುವುದಿಲ್ಲ:
ಗಂಗಾಧರ, ಅಶೋಕ, ರಘುವೀರ್ ಸೂಟರ್ ಪೇಟೆ, ಶೇಖರ ಎಲ್, ರಾಜ ಪಲ್ಲಮಜಲು, ನಾರಾಯಣ ಪುಂಚಮೆ, ವಿಶ್ವನಾಥ ಚಂಡ್ತಿಮಾರ್ ಮೊದಲಾದವರು ಮಾತನಾಡಿದರು. ಅಡಿಷನಲ್ ಎಸ್ಪಿ ವೇದಮೂರ್ತಿ, ಡಿವೈಎಸ್ಪಿಗಳಾದ ರವೀಶ್ ಸಿ.ಆರ್, ಭಾಸ್ಕರ್, ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಕೆ. ಮಂಜಯ್ಯ, ಪ್ರೊಬೆಷನರಿ ಐಪಿಎಸ್ ಅಧಿಕಾರಿ ನಾಗೇಶ್ ಡಿ.ಎಲ್, ಬಂಟ್ವಾಳ ನಗರ ಠಾಣಾಧಿಕಾರಿ ರಕ್ಷಿತ್ ಗೌಡ ಮೊದಲಾದವರು ಉಪಸ್ಥಿತರಿದ್ದರು.
Be the first to comment on "ಕುಡುಕರ ಭಯವಿಲ್ಲ, ಡ್ರಗ್ಸ್ ಸೇವಿಸುವವರದ್ದೇ ಭೀತಿ"