- ಡಾ.ಎ.ಜಿ.ರವಿಶಂಕರ್
- ಅಂಕಣ: ಪಾಕಶಾಲೆಯೇ ವೈದ್ಯಶಾಲೆ
ಈರುಳ್ಳಿಯಿಂದ ಏನೇನು ಉಪಯೋಗಗಳು ಎಂಬುದು ಇಲ್ಲಿದೆ.
- ಉಷ್ಣತೆಯಿಂದ ಹೊಟ್ಟೆ ನೋವು ಕಾಣಿಸಿಕೊಂಡಾಗ ಈರುಳ್ಳಿಯನ್ನು ಸಣ್ಣ ತುಂಡು ಮಾಡಿ ದನದ ತುಪ್ಪದಲ್ಲಿ ಹುರಿದು ಊಟದ ಪ್ರಾರಂಭದಲ್ಲಿ ಸೇವಿಸಬೇಕು.
- ಈರುಳ್ಳಿಯನ್ನು ಹಸಿಯಾಗಿ ಅಥವಾ ತುಪ್ಪದಲ್ಲಿ ಹುರಿದು ತಿನ್ನುವುದರಿಂದ ಬಾಯಿರುಚಿ, ಜೀರ್ಣಶಕ್ತಿ ಅಧಿಕವಾಗುತ್ತದೆ ಮತ್ತು ಹೊಟ್ಟೆ ಹುಳದ ಬಾಧೆ ನಿವಾರಣೆಯಾಗುತ್ತದೆ.
- ಈರುಳ್ಳಿಯನ್ನು ಬೆಲ್ಲದೊಂದಿಗೆ ಸೇರಿಸಿ ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
- ಈರುಳ್ಳಿರಸ ಮತ್ತು ತುಳಸಿ ರಸವನ್ನು ಸಮಪ್ರಮಾಣದಲ್ಲಿ ಸೇರಿಸಿ 5 ರಿಂದ 10 ಮಿಲೀ ಯಷ್ಟು ಕುಡಿಸಿದರೆ ವಾಂತಿ ಹಾಗು ಭೇದಿಯು ಕಡಿಮೆಯಾಗುತ್ತದೆ.
- ಈರುಳ್ಳಿಯ ತುಂಡುಗಳನ್ನು ಮೊಸರಿನೊಂದಿಗೆ ಜಜ್ಜಿ ಸೇವಿಸಿದರೆ ರಕ್ತಸ್ರಾವಯುಕ್ತ ಮೂಲವ್ಯಾಧಿಯು ಕಡಿಮೆಯಾಗುತ್ತದೆ.
- ಈರುಳ್ಳಿಯನ್ನು ಸುಲಿದು ಬಿಸಿಲಿನಲ್ಲಿ ಒಣಗಿಸಿ ನಂತರ ತುಪ್ಪದಲ್ಲಿ ಹುರಿದ ಎಳ್ಳು ಮತ್ತು ಕಲ್ಲುಸಕ್ಕರೆ ಸೇರಿಸಿ ಪ್ರತಿನಿತ್ಯ ಸೇವಿಸುವುದರಿಂದ ಮೂಲವ್ಯಾಧಿಯು ಗುಣವಾಗುತ್ತದೆ.
- ಈರುಳ್ಳಿ ರಸವನ್ನು ಶುಂಠಿ ,ಜೇನು ಮತ್ತು ದನದ ತುಪ್ಪದೊಂದಿಗೆ ಮಿಶ್ರ ಮಾಡಿ ಪ್ರತಿದಿನ ಬೆಳಗ್ಗೆ ತಿನ್ನುವುದರಿಂದ ಶರೀರದ ನಿತ್ರಾಣ ಹಾಗು ಬಲಕ್ಷಯ ನಿವಾರಣೆಯಾಗುತ್ತದೆ.
- ಈರುಳ್ಳಿಯನ್ನು ತುಪ್ಪದಲ್ಲಿ ಹುರಿದು ಅಥವಾ ಹಾಗೆಯೇ ಬೆಲ್ಲದೊಂದಿಗೆ ಸೇವಿಸಿದರೆ ಕಪ ಹಾಗು ಕೆಮ್ಮು ವಾಸಿಯಾಗುತ್ತದೆ.
- ಸರಿಯಾಗಿ ಮೂತ್ರಪ್ರವೃತ್ತಿ ಆಗದಿದ್ದರೆ ಅಥವಾ ನೋವಿನಿಂದ ಕೂಡಿದ್ದರೆ ಈರುಳ್ಳಿ ರಸವನ್ನು ತುಪ್ಪದಲ್ಲಿ ಮಿಶ್ರ ಮಾಡಿ ಸೇವಿಸಬೇಕು.
- ಈರುಳ್ಳಿಯು ಹೃದಯಕ್ಕೆ ಬಲದಾಯಕವಾಗಿದ್ದು ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಡಲು ಸಹಕರಿಸುತ್ತದೆ ಮತ್ತು ಶರೀರದಲ್ಲಿನ ಕೆಟ್ಟ ಕೊಬ್ಬಿನ ಅಂಶವನ್ನು ಸಹ ಕಡಿಮೆ ಮಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.
- ಈರುಳ್ಳಿಯು ಶರೀರದ ಒಳಗೆ ರಕ್ತಹೆಪ್ಪುಗಟ್ಟುವುದನ್ನು ತಡೆಗಟ್ಟುತ್ತದೆ.
- ಈರುಳ್ಳಿಯ ನಿತ್ಯ ಬಳಕೆಯಿಂದ ಮಧುಮೇಹ ರೋಗವು ನಿಯಂತ್ರಣದಲ್ಲಿ ಇಡಲು ಸಹಕಾರಿಯಾಗುತ್ತದೆ
- ಈರುಳ್ಳಿಯು ಪಿತ್ತ ಜನಕಾಂಗಕ್ಕೆ ಬಲದಾಯಕವಾಗಿದ್ದು ಕಾಮಾಲೆ ರೋಗಿಗಳಿಗೆ ಇದು ಉತ್ತಮ ಪಥ್ಯ ಆಹಾರವಾಗಿದೆ.
- ಈರುಳ್ಳಿಯ ನಿತ್ಯ ಬಳಕೆಯಿಂದ ಬುದ್ಧಿಶಕ್ತಿ,ನೆನಪು ಶಕ್ತಿ ಇತ್ಯಾದಿಗಳು ಅಧಿಕವಾಗುತ್ತದೆ.
- ಇತ್ತೀಚೆಗಿನ ಅಧ್ಯಯನದ ಪ್ರಕಾರ ಈರುಳ್ಳಿಯು ಕ್ಯಾನ್ಸರನ್ನು ತಡೆಗಟ್ಟಲು ಸಹ ಪರಿಣಾಮಕಾರಿಯಾಗಿ ಸಹಕರಿಸುತ್ತದೆ.
Be the first to comment on "ಈರುಳ್ಳಿ ಆಭ್ಯಂತರ ಉಪಯೋಗಗಳು"