“ಅಣಿ ಅರದಲ ಸಿರಿ ಸಿಂಗಾರ” ಗ್ರಂಥವು ಉಡುಪಿಯ ಎಂ.ಜಿ.ಎಂ. ಕಾಲೇಜಿನ ಅರ್ ಅರ್ ಸಿ ಹಾಗೂ ಕ.ಸಾ.ಪ.ಮಹಾರಾಷ್ಟ್ರ ಘಟಕದ ಜಂಟಿ ಆಶ್ರಯದಲ್ಲಿ ನಡೆದ ‘ ಅಣಿ ‘ನಿರ್ಮಾಣ ಹಾಗೂ ‘ಬಣ್ಣಗಾರಿಕೆಯ’ ಮೂರುದಿನಗಳ ಕಮ್ಮಟದ ಹುಟ್ಟುವಳಿಯಾಗಿ ಸಿದ್ಧಗೊಂಡಿದೆ.ಮುಂಬಯಿ ಸಾಹಿತ್ಯ ಬಳಗವು ಈ ಗ್ರಂಥವನ್ನು ಪ್ರಕಟಿಸಿದೆ.
ಭೂತಾರಾಧನೆಯಲ್ಲಿ ಕೋಲ,ನೇಮ,ಬಂಡಿ ಮುಂತಾದ ಆಚರಣೆಗಳಲ್ಲಿ ಪ್ರಧಾನವಾಗಿರುವ ” ಅಣಿ ” ನಿರ್ಮಾಣದ ವಿವಿಧ ಹಂತಗಳು (‘ ಸಿರಿ ‘ಕಲಾತ್ಮಕ ರಚನೆ ) ಹಾಗೂ ಬಣ್ಣಗಾರಿಕೆಯ ನ್ನು ಯಥಾಸಾಧ್ಯ ತೋರಿಸಲಾಗಿದೆ (ಬಣ್ಣದ ಚಿತ್ರ ಗಳ ಮೂಲಕ ). ಈ ಗ್ರಂಥದಲ್ಲಿ 400 ಪುಟಗಳಿವೆ. 200 ಪುಟಗಳಷ್ಟು ಬಣ್ಣದ ಪೋಟೊಗಳಿವೆ.5 ವಿಭಾಗದಲ್ಲಿ ಪೋಟೊಗಳಿವೆ – ಅಣಿ .ಅರದಲ ,ಪದ್ದೆಯಿ ,ಸಿರಿಸಿಂಗಾರ ,ಕಟಿಬಯಿರೂಪ ಎಂಬವಿಭಾಗಗಳು. ಜಾನಪದ – ವೈದಿಕ ವಿದ್ವಾಂಸರ ಲೇಖನಗಳಿವೆ.ಬ್ರಾಹ್ಮಣ ಭೂತಗಳು ,ಮುಸ್ಲಿಂ ಭೂತಗಳು ,ಕುಲೆಭೂತಗಳು ,ಕನ್ನಡಭೂತಗಳು ಮುಂತಾದ ವಿವರಗಳಿವೆ. 10 ಮಂದಿ ಹಿರಿಯ – ಕಿರಿಯ ಕಲಾವಿದರೊಂದಿಗೆ ನಡೆಸಿದ ಸಂವಾದವಿದೆ. 1435 ಭೂತ (ದೈವ )ಗಳ ಹೆಸರಿನ ಪಟ್ಟಿಯಿದೆ. 200 ಪಾರಿಭಾಷಿಕ ಶಬ್ದಗಳ ದಾಖಲೀಕರಣವಿದೆ.
ಎಚ್ ಬಿ ಎಲ್ ರಾವ್ – ಪ್ರಧಾನ ಸಂಪಾದಕರು. .ಸಂಪಾದಕರು – ಕೆ.ಎಲ್.ಕುಂಡಂತಾಯರು.
ಬೆಲೆ – ರೂ. 1000/-.
Be the first to comment on "ಅಣಿ ಅರದಲ ಸಿರಿ ಸಿಂಗಾರ"