ವಿಧಿಯಾಟಕ್ಕೆ ಬಲಿಯಾದ ತಾಯಿ, ಮಗು ಆಸ್ಪತ್ರೆಯಲ್ಲಿ

  • ಬಿರುಬಿಸಿಲಲ್ಲೇ ಮೂವರ ಬಲಿಪಡೆದ ಬರಸಿಡಿಲು
  • ಕೂಲಿ ಕೆಲಸಕ್ಕೆಂದು ಬಂದ ಮಹಿಳೆಯರು ಮಕ್ಕಳು ಬಲಿ

ಬುಧವಾರ ಸಂಜೆ ಬಂಟ್ವಾಳದಲ್ಲಿ ಸಿಡಿಲಾಘಾತಕ್ಕೆ ತೀವ್ರ ಗಾಯಗೊಂಡು ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ಎರಡು ವರ್ಷದ ಮಗು ಲಿಖಿತಾ ಚಿಕಿತ್ಸೆ ಪಡೆಯುತ್ತಿದ್ದರೆ, ಆಕೆ ತಾಯಿ ಸಿಡಿಲಿನ ಹೊಡೆತಕ್ಕೆ ಜೀವವನ್ನೇ ತೊರೆದಿದ್ದಾಳೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಡ್ಯಾಗೇರಹಳ್ಳಿ ನಿವಾಸಿಗಳಾದ ತಿಮ್ಮಯ್ಯ ಎಂಬವರ ಪತ್ನಿ ಖಣ್ಮಕ್ಕ (29) ಅವರ ಮಗಳೇ ಲಿಖಿತಾ.


ಬುಧವಾರ ಮಧ್ಯಾಹ್ನದ ಬಳಿಕ ಬಂಟ್ವಾಳ ಪರಿಸರದಲ್ಲಿ ಸೂರ್ಯನ ಪ್ರಖರ ಬಿಸಿಲು ಇದ್ದಾಗಲೇ ಅಬ್ಬರಿಸಿದ ಸಿಡಿಲಿನ ಆಘಾತಕ್ಕೆ ನೇತ್ರಾವತಿ ನದಿಯಲ್ಲಿ ಬಟ್ಟೆ ತೊಳೆಯುತ್ತಿದ್ದ ಇಬ್ಬರು ಮಹಿಳೆಯರು ಮತ್ತು 5 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆಯ ವಿವರವಿದು.
ಕೂಲಿ ಕೆಲಸಕ್ಕೆಂದು ಬಂಟ್ವಾಳಕ್ಕೆ ಬಂದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಡ್ಯಾಗೇರಹಳ್ಳಿ ನಿವಾಸಿಗಳಾದ ಜಯಣ್ಣ ಎಂಬವರ ಪತ್ನಿ ಜಯಮ್ಮ (28), ತಿಮ್ಮಯ್ಯ ಎಂಬವರ ಪತ್ನಿ ಖಣ್ಮಕ್ಕ (29) ಹಾಗೂ ಈರಣ್ಣ ಎಂಬವರ ಪುತ್ರಿ ಶಶಿಕಲಾ (5) ಸಾವನ್ನಪ್ಪಿದವರು. ಲಿಖಿತಾ ಎಂಬ ಎರಡು ವರ್ಷದ ಬಾಲಕಿ ತೀವ್ರ ಗಾಯಗೊಂಡು ಮಂಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಈಗ ಅಪಾಯದಿಂದ ಹೊರಗುಳಿದಿದ್ದಾಳಾದರೂ ಹೆತ್ತ ತಾಯಿ ಪ್ರೇಮದಿಂದ ಶಾಶ್ವತವಾಗಿ ಅವಳು ವಂಚಿತಳಾಗಲಿದ್ದಾಳೆ.

ಜಾಹೀರಾತು

ಬಂಟ್ವಾಳ ಜಕ್ರಿಬೆಟ್ಟು ಎಂಬಲ್ಲಿ ಪುರಸಭೆ ವತಿಯಿಂದ ೫೨ ಕೋಟಿ ರೂ. ವೆಚ್ಚದಲ್ಲಿ ಎರಡನೇ ಹಂತದ ಕುಡಿಯುವ ನೀರು ಯೋಜನೆ ಕಾಮಗಾರಿ ಕೆಲಸ ನಡೆಯುತ್ತಿದ್ದು, ಇಲ್ಲಿಗೆ ಕೆಲಸಕ್ಕೆಂದು ಹಲವು ಮಂದಿ ವಲಸೆ ಕಾರ್ಮಿಕರು ಬಂದು ಹೋಗುತ್ತಾರೆ. ಗುತ್ತಿಗೆ ವಹಿಸಿಕೊಂಡವರು, ಮೇಸ್ತ್ರಿಗಳು ಇವರನ್ನು ಯಾವುದಾದರೂ ಊರಿನಿಂದ ಕರೆದುಕೊಂಡು ಬರುತ್ತಾರೆ. ಹಾಗೆ ಬರುವ ಕಾರ್ಮಿಕರು ಇಡೀ ಕುಟುಂಬದೊಂದಿಗೆ ಆಗಮಿಸುತ್ತಾರೆ. ಅಂಥ ಒಂದು ಕಾರ್ಮಿಕರ ಕುಟುಂಬ ಶುಕ್ರವಾರ ಬಂಟ್ವಾಳಕ್ಕೆ ಬಂದಿದ್ದರು.
ಪತಿಯರೊಂದಿಗೆ ಕೆಲಸಕ್ಕೆ ಹೋಗುತ್ತಿದ್ದ ಖಣ್ಮಕ್ಕ ಮತ್ತು ಜಯಮ್ಮ ಬುಧವಾರ ಮಧ್ಯಾಹ್ನದ ಬಳಿಕ ಸುಮಾರು ೪ ಗಂಟೆ ವೇಳೆಗೆ ಕೆಲಸ ಮುಗಿಸಿ, ನೇತ್ರಾವತಿ ನದಿಗೆ ಕೈಕಾಲು ತೊಳೆದು ಬಟ್ಟೆ ತೊಳೆಯಲೆಂದು ತೆರಳಿದ್ದರು. ಈ ಸಂದರ್ಭ ಅವರೊಂದಿಗೆ ಇಬ್ಬರು ಮಕ್ಕಳೂ ಇದ್ದರು. ಮಕ್ಕಳನ್ನು ಬಂಡೆಯೊಂದರ ಮೇಲೆ ಕುಳ್ಳಿರಿಸಿ ಬಟ್ಟೆ ತೊಳೆಯುತ್ತಿದ್ದ ಸಂದರ್ಭ ಸಿಡಿಲು ಅಪ್ಪಳಿಸಿದೆ. ಸಮೀಪದಲ್ಲೇ ಇದ್ದ ಟ್ರಾನ್ಸ್ ಫಾರ್ಮರ್ ಗೆ ಬಡಿದ ಸಿಡಿಲಿನ ಆಘಾತ ನೀರಿನಲ್ಲಿ ಬಟ್ಟೆ ತೊಳೆಯುತ್ತಿದ್ದ ಕಣಕಮ್ಮ, ಜಯಮ್ಮ, ಮಕ್ಕಳಾದ ಶಶಿಕಲಾ, ಲಿಖಿತಾಗೆ ತಟ್ಟಿದೆ. ಸಮೀಪದಲ್ಲೇ ಇದ್ದ ಕೂಲಿ ಕಾರ್ಮಿಕರು, ಸಾರ್ವಜನಿಕರು ಬಂದು ನೋಡಿದಾಗ ಜಯಮ್ಮ ಮೃತದೇಹ ನೀರಿನಲ್ಲಿ ಮುಳುಗಿದ ಸ್ಥಿತಿಯಲ್ಲಿ ಪತ್ತೆಯಾದರೆ ಖಣ್ಮಕ್ಕ ಮೃತದೇಹ ಬಂಡೆಕಲ್ಲಿನ ಮೇಲಿತ್ತು. ಶಶಿಕಲಾ ದಡದ ಪಕ್ಕದಲ್ಲಿ ಬಿದ್ದಿದ್ದಳು.

ಕೂಡಲೇ 108 ಆಂಬುಲೆನ್ಸ್ ಮೂಲಕ ಶಶಿಕಲಾ ಮತ್ತು ಲಿಖಿತಾ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಶಶಿಕಲಾ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.

ಅಂಗನವಾಡಿಗೆ ಹೋಗುತ್ತಿದ್ದ ಶಶಿಕಲಾ
ಐದು ವರ್ಷದ ಶಶಿಕಲಾ ಊರಿನಲ್ಲಿ ಅಂಗನವಾಡಿಗೆ ಹೋಗುತ್ತಿದ್ದ ಪುಟಾಣಿ. ಅಪ್ಪ, ಅಮ್ಮ ಕೂಲಿ ಕಾರ್ಮಿಕರು. ಹೀಗಾಗಿ ಅವರು ಎಲ್ಲಿ ಹೋಗುತ್ತಾರೋ ಅಲ್ಲೆಲ್ಲ ಶಶಿಕಲಾ ಕೂಡ ಹೋಗಬೇಕು. ಊರಿನಲ್ಲಿ ಅಂಗನವಾಡಿಗೆ ಹೋಗುತ್ತಿದ್ದ ಆಕೆಯನ್ನು ಕರೆತಂದು ಸಾವಿನ ದವಡೆಗೆ ನೂಕಿದೆನಲ್ಲ ಎಂದು ಆಕೆ ತಂದೆ ಈರಣ್ಣ ಹಾಗೂ ತಾಯಿ ಪದ್ಮಾವತಿ ರೋದನ ಮುಗಿಲು ಮುಟ್ಟುತ್ತಿತ್ತು.
ಸುಮಾರು ಮೂವತ್ತರಷ್ಟಿದ್ದ ಈ ವಲಸೆ ಕಾರ್ಮಿಕರ ತಂಡ ತುಮಕೂರಿನಿಂದ ಶುಕ್ರವಾರವಷ್ಟೇ ಬಂದಿತ್ತು. ಹಲವರಿಗೆ ಕರಾವಳಿಗೆ ಬಂದಿಳಿದದ್ದೇ ಇದು ಮೊದಲು. ಈ ತಂಡದಲ್ಲಿ ಕೇವಲ ಗಂಡಸರಿರಲಿಲ್ಲ. ಮಹಿಳೆಯರು ಮಕ್ಕಳೊಂದಿಗೆ ತುಂಬು ಸಂಸಾರವೇ ಗುಳೆ ಎದ್ದು ಬಂದಂತಿತ್ತು. ಕಳೆದ ಐದು ದಿನಗಳ ಹಿಂದೆ ಪರಿಚಯದ ಮೇಸ್ತ್ರಿಯೊಬ್ಬರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಜಕ್ರಿಬೆಟ್ಟು ಎಂಬಲ್ಲಿ ನಿರ್ಮಾಣ ಹಂತದ ವಾಟರ್ ಟ್ಯಾಂಕ್ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದೆ. ಅಲ್ಲಿಗೆ ಕೆಲಸಗಾರರು ಬೇಕು ಎಂದು ಈ ಕಾರ್ಮಿಕರನ್ನು ಕರೆದುಕೊಂಡು ಬಂದಿದ್ದಾರೆ. ಹಾಗೆ ಬಂದವರ ಪೈಕಿ, ಜಯಣ್ಣ, ಅವರ ಹೆಂಡತಿ ಜಯಮ್ಮ ಮತ್ತು ಅವರ ಮಕ್ಕಳು, ತಿಮ್ಮಯ್ಯ, ಅವರ ಹೆಂಡತಿ ಕಣಕಮ್ಮ ಮತ್ತು ಅವರ ಮಕ್ಕಳು, ಕುಟಂಬಸ್ಥರು ಇದ್ದರು. ಅವರ ವಾಸ್ತವ್ಯಕ್ಕೆ ನೀರಿನ ಟ್ಯಾಂಕಿನ ಕೆಳಗೆ ತಗಡಿನ ಶೀಟಿನ ಶೆಡ್ಡನ್ನು ನಿರ್ಮಿಸಿಕೊಡಲಾಗಿತ್ತು. ಕೆಲಸ ಮಾಡುವ ಸ್ಥಳದಲ್ಲೇ ನೇತ್ರಾವತಿ ಹರಿಯುತ್ತಿತ್ತು. ಎಲ್ಲರೂ ಸ್ನಾನ ಮಾಡಲು ಕೈಕಾಲು ತೊಳೆಯಲು ನೇತ್ರಾವತಿ ನದಿ ನೀರಿಗೆ ಹೋಗುತ್ತಿದ್ದರು. ಅದರಂತೆ ಬುಧವಾರ ಸಂಜೆ ಸುಮಾರು ೪ ಗಂಟೆಗೆ ಹೆಂಗಸರು ಕೆಲಸ ಮುಗಿಸಿ, ಕೈಕಾಲು ತೊಳೆಯಲು ಅವರ ಮಕ್ಕಳೊಂದಿಗೆ ನೇತ್ರಾವತಿ ನದಿಗೆ ಹೋಗಿದ್ದಾರೆ. ನದಿ ನೀರಿಗೆ ಶಶಿಕಲಾ, ಜಯಮ್ಮ, ಕಣಕಮ್ಮ ಇಳಿದಿದ್ದಾರೆ. ಆ ವೇಳೆ ದೊಡ್ಡ ಸಿಡಿಲು ಬಡಿದು ರಸ್ತೆಯಲ್ಲಿನ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಹೊಡೆದಿದೆ. ಶಬ್ದ ಕೇಳಿ ಪಕ್ಕದಲ್ಲಿದ್ದ ಕೆಲಸಗಾರರು, ಸಾರ್ವಜನಿಕರು ಸ್ಥಳಕ್ಕೆ ಬಂದಾಗ, ಶಶಿಕಲಾ ದಡದ ಪಕ್ಕದಲ್ಲಿ ಬಿದ್ದಿದ್ದರೆ, ಜಯಮ್ಮ, ಬನ್ನಕ್ಕ ನೀರಿನಲ್ಲಿ ಬಿದ್ದರೆ, ಲಿಖಿತಾ ಕೂಡ ದಡದಲ್ಲಿ ಬಿದ್ದಿದ್ದಳು.

ಘಟನಾ ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಡಿವೈಎಸ್ಪಿ ರವೀಶ್ ಸಿ.ಆರ್., ನಗರ ಠಾಣಾಧಿಕಾರಿ ರಕ್ಷಿತ್ ಗೌಡ, . ಪುರಸಭಾ ಸದಸ್ಯ ಎ.ಗೋವಿಂದ ಪ್ರಭು, ವಾಸು ಪೂಜಾರಿ, ತಾಲೂಕು ಕಚೇರಿ ಸಿಬ್ಬಂದಿ ಸದಾಶಿವ ಕೈಕಂಬ. ಶೀತಲ್. ಸೀತಾರಾಮ ಕಮ್ಮಾಜೆ ತಾಲೂಕು ಆಡಳಿತ, ಬಂಟ್ವಾಳ ಆರ್. ಐ ನವೀನ್. ವಿ.ಎ ಜನಾರ್ಧನ ಸಹಿತ ಹಲವರು ಭೇಟಿ ನೀಡಿದರು.

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ವಿಧಿಯಾಟಕ್ಕೆ ಬಲಿಯಾದ ತಾಯಿ, ಮಗು ಆಸ್ಪತ್ರೆಯಲ್ಲಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*