ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏ. 12ರಂದು ನಡೆಯುವ ನೀರ್ಪಾಜೆ ಜನ್ಮ ದಿನ ಕಾರ್ಯಕ್ರಮದಂದು ನೀರ್ಪಾಜೆ ಸಂಸ್ಮರಣೆ ಮತ್ತು ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ನಡೆಯುವುದು.
೮೧ರ ಹರೆಯದ ಮೂಡಂಬೈಲು ಶಾಸ್ತ್ರಿ ಅವರು ಹಿಂದಿ ರಾಷ್ಟ್ರಭಾಷಾ ಪ್ರವೀಣ, ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ಹವ್ಯಾಸಿ ಯಕ್ಷಗಾನ ಅರ್ಥಧಾರಿ, ಸಾಹಿತಿ, ಭಾಷಣಕಾರ, ಕೃಷಿಕ, ಜೇನು ಸಾಕಣೆದಾರರಾಗಿದ್ದಾರೆ.
ಉಪನ್ಯಾಸ, ನಾಟಕ, ಸಂಶೋಧನಾ ಗ್ರಂಥ, ಜೀವನ ಚರಿತ್ರೆ, ಬಿಡಿಲೇಖನ ಸಹಿಯ ಸುಮಾರು ಹನ್ನೊಂದರಷ್ಟು ಸಾಹಿತ್ಯಿಕ ರಚನೆಗಳನ್ನು ಮಾಡಿದವರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹತ್ತಕ್ಕೂ ಅಧಿಕ ಪ್ರಶಸ್ತಿಗಳನ್ನು ಪಡೆದವರು. ನಲುವತ್ತಕ್ಕೂ ಅಧಿಕ ಸಂಘಸಂಸ್ಥೆಗಳಿಂದ ಧಾರ್ಮಿಕ ಕ್ಷೇತ್ರದಿಂದ ವಿಶೇಷ ಸಮ್ಮಾನಗಳನ್ನು ಪಡೆದಿದ್ದಾರೆ.
ಅವರಿಗೆ ಮೂಡಂಬೈಲು ಶಾಸ್ತ್ರಿ 75 ಅಭಿನಂದನಾ ಗ್ರಂಥ ಸಮರ್ಪಣೆಯಾಗಿದೆ. ಕಲ್ಲಡ್ಕದಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯ ಗೌರವ ಸಮ್ಮಾನ ಅಲ್ಲದೆ ವಿವಿಧ ಸೇವಾ ಸಂಸ್ಥೆಗಳಿಂದ ಪುರಸ್ಕಾರ ಲಬಿಸಿದೆ. ದೂರದರ್ಶನ, ಆಕಾಶವಾಣಿ, ೨೦೧೫ರಲ್ಲಿ ಪುತ್ತೂರಿನಲ್ಲಿ ನಡೆದ ಅಖಿಲ ಭಾರತ ಯಕ್ಷಗಾನ ಸಮ್ಮೇಳನದಲ್ಲಿಯೂ ಗೌರವಕ್ಕೆ ಪಾತ್ರರಾಗಿದ್ದಾರೆ.
Be the first to comment on "ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಅವರಿಗೆ ಕನ್ನಡದ ಕಲ್ಹಣ ಪ್ರಶಸ್ತಿ"