ಬಂಟ್ವಾಳದಲ್ಲಿ ಮಂಗಳವಾರ ಸಂಜೆಯ ಬಳಿಕ ಗಾಳಿಯೊಂದಿಗೆ ಮಳೆಯಾಗಿದೆ. ಸಂಜೆ ಸುಮಾರು ೫ ಗಂಟೆ ವೇಳೆಗೆ ತುಂತುರು ಮಳೆಯಾದರೆ, ರಾತ್ರಿ ಸುಮಾರು 8.30ರ ವೇಳೆ ಮತ್ತೆ ಮಳೆ ಸುರಿಯಿತು. ಜೊತೆಗೆ ವಿದ್ಯುತ್ ಪೂರೈಕೆಯೂ ಬಿ.ಸಿ.ರೋಡ್ ಪರಿಸರದಲ್ಲಿ ಸ್ಥಗಿತಗೊಂಡಿದೆ.
ಇದರಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಬಿ.ಸಿ.ರೋಡ್, ಬಂಟ್ವಾಳ ಸಹಿತ ತಾಲೂಕಿನ ಕೆಲವೆಡೆ ಮಳೆ ಸುರಿದಿದೆ. ಬಿ.ಸಿ.ರೋಡ್‌ನಲ್ಲಿ ಕೆಯುಡಬ್ಲುಎಸ್ ನಿಂದ ಪೈಪ್ ಲೈನ್ ಕಾಮಗಾರಿಗಾಗಿ ರಸ್ತೆ ಪಕ್ಕ ಅಗೆದು ಹೊಂಡ ಮಾಡಲಾಗಿದ್ದು, ಮಳೆಯಿಂದಾಗಿ ಮಣ್ಣು ರಸ್ತೆಯಲ್ಲೆಲ್ಲಾ ಹರಡಿತು. ಇದರಿಂದ ಪಾದಚಾರಿಗಳು ಸಂಕಷ್ಟ ಅನುಭವಿಸಿದರು. ರಾತ್ರಿ ದೂರದ ಊರುಗಳಿಗೆ ಬಸ್ ಗಳಲ್ಲಿ ತೆರಳುವ ಪ್ರಯಾಣಿಕರು ಸರಿಯಾದ ತಂಗುದಾಣ ಇಲ್ಲದೆ, ಕೆಸರುಮಯ ರಸ್ತೆಯಲ್ಲಿ ತೊಂದರೆಗೆ ಒಳಗಾದರು.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಿ.ಸಿ.ರೋಡ್ ನಲ್ಲಿ ಮಳೆ, ವಿದ್ಯುತ್ ಕಣ್ಣಾಮುಚ್ಚಾಲೆ"