ಸುಜೀರು ಪ್ರೌಢಶಾಲೆಯಲ್ಲಿ ರಕ್ತದಾನ ಶಿಬಿರ

ರಕ್ತದಾನಕ್ಕೆ ಜಾತಿ ಧರ್ಮದ ಭೇದವಿಲ್ಲ. ತುರ್ತು ಸಂದರ್ಭಗಳಲ್ಲಿ ರಕ್ತದಾನ ಮಾಡುವ ಮೂಲಕ ಹಲವು ಮಂದಿಯ ಪ್ರಾಣವನ್ನು ಉಳಿಸಬಹುದಾಗಿದೆ ಎಂದು ಕರ್ನಾಟಕ ದಾರಿಮಿ ಅಸೋಸಿಯೇಷನ್‌ನ ಉಪಾಧ್ಯಕ್ಷ ಮಾಯಿನ್ ದಾರಿಮಿ ಹೇಳಿದರು.

ಪುದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಜೀರು ಸರಕಾರಿ ಪ್ರೌಢಶಾಲೆಯಲ್ಲಿ  ಭಾನುವಾರ ನಡೆದ ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ ಹಾಗೂ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಸ್ಪತ್ರೆಗಳಲ್ಲಿ ಅದೆಷ್ಟೊ ಮಂದಿ ರಕ್ತಕ್ಕಾಗಿ ಪರದಾಡುತ್ತಾರೆ. ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್  ರಕ್ತದಾನ ಶಿಬಿರ ಹಮ್ಮಿಕೊಳ್ಳುವ ಮೂಲಕ ಮಹತ್ತರವಾದ ಕೆಲಸ ಮಾಡುತ್ತಿದೆ. ಎಲ್ಲರೂ ಈ ಟ್ರಸ್ಟ್‌ಗೆ ಸಹಕಾರ ನೀಡಬೇಕು ಎಂದರು. ರೆಸ್ಕ್ಯೂ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಅಬ್ಬುಲ್ ಜಬ್ಬಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ರಸ್ಕ್ಯೂ ಫೌಂಡೇಶನ್ ಎಲ್ಲಾ ವರ್ಗದ ಬಡ ಜನರಿಗೆ ಸೇವೆಯನ್ನು ನೀಡುತ್ತಾ ಬಂದಿದೆ ಎಂದರು. ಜಿ.ಪಂ.ಸದಸ್ಯ ರವೀಂದ್ರ ಕಂಬಳಿ, ಸುಜೀರು ಸರಕಾರಿ ಪ್ರೌಢಶಾಲೆಯ  ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಉಮ್ಮರ್ ಫಾರೂಕ್, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ, ತಾ.ಪಂ.ಸದಸ್ಯೆ ಪದ್ಮಶ್ರಿ ಡಿ.ಶೆಟ್ಟಿ,  ಪುದು ಗ್ರಾ.ಪಂ.ಅಧ್ಯಕ್ಷೆ ಆತಿಕಾ, ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಹನೀಫ್‌ಖಾನ್ ಕೊಡಾಜೆ ಹೋಪ್ ಫೌಂಡೇಶನ್‌ನ  ಸೈಫ್ ಸುಲ್ತಾನ್, ಉದ್ಯಮಿಗಳಾದ  ಮನ್ಸೂರ್ ಅಹಮದ್, ಇಸ್ಮಾಯಿಲ್ ಕೆಇಎಲ್, ಕೆ.ಎಸ್. ಸಾವುಂಞ, ಎ.ಕೆ.ನೌಷದ್, ಮೊಹಮ್ಮದ್ ಅಶ್ರಫ್ ಬಜ್ಪೆ, ಪುದು ಗ್ರಾ.ಪಂ.ಸದಸ್ಯರಾದ ಎಂ.ಕೆ.ಖಾದರ್, ರಮ್ಲಾನ್ ಮಾರಿಪಳ್ಳ, ಇಕ್ಬಾಲ್ ಸುಜೀರ್, ತಾ.ಪಂ. ಮಾಜಿ ಸದಸ್ಯ ಆಸೀಫ್ ಇಕ್ಬಾಲ್,  ಎಫ್.ಎ.ಬಾವಾ, ಹುಸೈನ್, ಮಹಮ್ಮದ್ ಮಾರಿಪಳ್ಳ, ಎಸ್.ಎಂ.ಫಾರೂಕ್ ಮೊದಲಾವರು ಅತಿಥಿಗಳಾಗಿ ಭಾಗವಹಿಸಿದ್ದರು. ಗೌರವಾಧ್ಯಕ್ಷ ಬಾಷಾ, ಉಪಾಧ್ಯಕ್ಷ ಅಬ್ದುಲ್ ಲತೀಫ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ, ಖಜಾಂಚಿ ಹಕೀಮ್ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ಮಹಮ್ಮದ್ ತುಂಬೆ ಸ್ವಾಗತಿಸಿ, ವಂದಿಸಿದರು, ಖಾದರ್ ಫರಂಗಿಪೇಟೆ ನಿರೂಪಿಸಿದರು.

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ