ರಿಕ್ಷಾ ಡ್ರೈವರ್ಸ್ ಎಸೋಸಿಯೇಶನ್ ವಾರ್ಷಿಕ ಮಹಾಸಭೆ

ಬಂಟ್ವಾಳ: ರಿಕ್ಷಾ ಡ್ರೈವರ್ಸ್ ಎಸೋಸಿಯೇಶನ್ ಇದರ 41ನೇ ವಾರ್ಷಿಕ ಮಹಾಸಭೆ ಬಿ.ಸಿ.ರೋಡಿನ ರಿಕ್ಷಾ ಭವನದಲ್ಲಿ ಶನಿವಾರ ನಡೆಯಿತು. ಅಸೋಸಿಯೇಶನ್ ಅಧ್ಯಕ್ಷ ನ್ಯಾಯವಾದಿ ರಾಜೇಶ್ ಬೊಲ್ಲುಕಲ್ಲು ಹಾಗೂ ಗೌರವಾಧ್ಯಕ್ಷ ನ್ಯಾಯವಾದಿ ಟಿ.ನಾರಾಯಣ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಪಿ.ರಾಮಕೃಷ್ಣ ಆಳ್ವ ಭಾಗವಹಿಸಿದ್ದರು. ಈ ಸಂದರ್ಭ ಹಿರಿಯ ಆಟೋ ಚಾಲಕರನ್ನು ಸನ್ಮಾನಿಸಲಾಯಿತು. ಎಸೋಸಿಯೇಶನ್ ಉಪಾಧ್ಯಕ್ಷ ಬಿ.ಹುಸೇನ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ, ಜತೆ ಕಾರ್ಯದರ್ಶಿಗಳಾದ ಬಿ.ದಯಾನಂದ, ಎಂ.ಯೂಸುಫ್, ಸಂಘಟನಾ ಕಾರ್ಯದರ್ಶಿ ಕೆ.ರಾಜೀವ, ಖಜಾಂಚಿ ಕೃಷ್ಣಪ್ಪ ಉಪಸ್ಥಿತರಿದ್ದರು. ಲಕ್ಕಿ ಡ್ರಾ ಮೂಲಕ ಮೂವರು ಆಟೋ ಚಾಲಕರಿಗೆ ಖಾಕಿ ಸಮವಸ್ತ್ರ ವಿತರಿಸಲಾಯಿತು.

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ