ಅರಣ್ಯ, ಪರಿಸರ, ಜೀವಿಶಾಸ್ತ್ರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಮಾ.11,12 ಮತ್ತು 13 ರ ಪ್ರವಾಸ ಕಾರ್ಯಕ್ರಮಗಳು ಇಂತಿವೆ.
ಮಾ.11 ರಂದು ಬೆಳಿಗ್ಗೆ: 9 ಗಂಟೆಗೆ ಪುತ್ತೂರು ನೂತನ ಮಹಿಳಾ ಪೊಲೀಸ್ ಠಾಣೆಯ ಉದ್ಘಾಟನಾ ಸಮಾರಂಭ, ಮಧ್ಯಾಹ್ನ 12 ಗಂಟೆಗೆ ಬಿ.ಸಿ.ರೋಡ್ನಲ್ಲಿ ನ್ಯಾಯಾಂಗ ಅಧಿಕಾರಿಗಳ ವಸತಿ ಗೃಹದ ಶಿಲಾನ್ಯಾಸ ಕಾರ್ಯಕ್ರಮ, ಸಂಜೆ 6 ಕ್ಕೆ ವಿದ್ಯಾಶ್ರೀ ಚ್ಯಾರಿಟೇಬಲ್ ಟ್ರಸ್ಟ್ ಹಾಗೂ ವಿಷ್ಣು ಫ್ರೆಂಡ್ಸ್ ಆರ್ಲಪದವು, ಪಾಣಾಜೆ ಇದರ ಆಶ್ರಯದಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭ, ರಾತ್ರಿ 7 ಗಂಟೆಗೆ ಎಕ್ಸ್ಲೆಂಟ್ ಇಂಡಿಯಾ ಗ್ರೂಫ್ ಕಲಾಯಿ ಇದರ 20ನೇ ವಾರ್ಷಿಕೋತ್ಸವದ ಪ್ರಯುಕ್ತ ಕ್ರೀಡಾ ಕೂಟ ಹಾಗೂ ಅಭಿನಂದನಾ ಸಮಾರಂಭ, 8 ಗಂಟೆಗೆ ಬದ್ರಿಯಾ ಸುನ್ನಿ ಜುಮ್ಮಾ ಮಸೀದಿ ತೋಡಾರು ಮೂಡಬಿದಿರೆ ಇದರ ಉರೂಸ್ನ ಸಮಾರೋಪ ಸಮಾರಂಭ.
ಮಾ.12 ರಂದು ಬೆಳಿಗ್ಗೆ 10 ಗಂಟೆಗೆ ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರ್ ಇದರ ಉದ್ಘಾಟನಾ ಸಮಾರಂಭ, 11 ಕ್ಕೆ ಪಲ್ಲಮಜಲು ಶಾಲಾ ವಠಾರದಲ್ಲಿ ಪಲ್ಲಮಜಲು ಫ್ರೆಂಡ್ಸ್ ಇದರ ಆಶ್ರಯದಲ್ಲಿ ನಡೆಯುವ ರಕ್ತದಾನ ಶಿಬಿರ ಉದ್ಘಾಟನಾ ಕಾರ್ಯಕ್ರಮ, 3 ಗಂಟೆಗೆ ಬೊಲ್ಯಗುತ್ತು ಜೀರ್ಣೋದ್ಧಾರ ಸಮಿತಿ ಮಂಗಳೂರು ಇದರ ನಾಗದೇವರ ಪ್ರತಿಷ್ಠೆಯ ಧಾರ್ಮಿಕ ಸಭಾ ಕಾರ್ಯಕ್ರಮ, 5 ಗಂಟೆಗೆ ಕರೋಪಾಡಿ ಸುಂಕದಕಟ್ಟೆಯಲ್ಲಿ ಮುಸ್ಲಿಂ ಜಮಾತ್ ಎಸ್ವೈಎಸ್ ಹಾಗೂ ಎಸ್ಎಸ್ಎಫ್ ವತಿಯಿಂದ ಜರಗುವ ಅನುಸ್ಮರಣಾ ಸಮ್ಮೇಳನದ ಧಾರ್ಮಿಕ ಸಭಾ ಕಾರ್ಯಕ್ರಮ, 6 ಗಂಟೆಗೆ ಪಡುಮಲೆ ಜುಮಾ ಮಸ್ಜಿದ್ ಪಡುವನ್ನೂರು, ಪುತ್ತೂರು ಇದರ ಸೌಹಾರ್ದ ಸಂಗಮದ ಧಾರ್ಮಿಕ ಸಭಾ ಕಾರ್ಯಕ್ರಮ, 7 ಗಂಟೆಗೆ ವೀರ ಯೋಧ ಯಾದವ ಫ್ರೆಂಡ್ಸ್ ಅಮ್ಮುಂಜೆ ಇದರ ದಶ ಪಂಚಮಹೋತ್ಸದ ಸಭಾ ಕಾರ್ಯಕ್ರಮ.
ಮಾ. 13 ರಂದು ಬೆಳಿಗ್ಗೆ: – ಸ್ಥಳೀಯ ಖಾಸಗಿ ಕಾರ್ಯಕ್ರಮಗಳು, ಮಧ್ಯಾಹ್ನ 2.30 ಕ್ಕೆ ಬಂಟ್ವಾಳ ತಾಲೂಕು ಪಂಚಾಯತ್ ವಠಾರದಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಸಂಚಾರಿ ಆರೋಗ್ಯ ಘಟಕಕ್ಕೆ ಚಾಲನೆ, 2.30 ಗಂಟೆಗೆ ಬಂಟ್ವಾಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶಿಕ್ಷಣಾ ಇಲಾಖೆಯ ವತಿಯಿಂದ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಾಧನಾ ಸಲಕರಣೆಗಳ ವಿತರಣೆ. 2.40 ಕ್ಕೆ ಬಂಟ್ವಾಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಪಂಚಾಯತ್ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಭಾಗವಹಿಸಲಿದ್ದಾರೆ.
Be the first to comment on "ಸಚಿವ ರಮಾನಾಥ ರೈ 11, 12, 13ರ ಪ್ರವಾಸ ವಿವರ"