ಎಪಿಎಂಸಿಯ ನೂತನ ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾದ ಮೇಲೆ ಪ್ರಥಮ ಸಭೆ ಇಲ್ಲಿನ ಎಪಿಎಂಸಿ ಸಭಾಂಗಣದಲ್ಲಿ ನಡೆಯಿತು.
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ವತಿಯಿಂದ ತಾಲೂಕಿನ ವಿವಿಧೆಡೆ ರೈತರಿಗೆ ಅನುಕೂಲವಾಗುವಂತೆ ಸರ್ಕಾರಿ ಜಮೀನು ದೊರೆತಲ್ಲಿ ಕೃಷಿ ಪ್ರಾಂಗಣ ನಿರ್ಮಿಸುವುದಾಗಿ ಅಧ್ಯಕ್ಷ ಪದ್ಮನಾಭ ರೈ ಈ ಸಂದರ್ಭ ತಿಳಿಸಿದರು.
ಈ ಹಿಂದೆ ಗ್ರಾಮೀಣ ರೈತರಿಗೆ ಕೃಷಿ ಉತ್ಪನ್ನ ಮತ್ತು ಕೃಷಿ ಸಾಮಾಗ್ರಿ ಸಾಗಿಸಲು ಅನುಕೂಲವಾಗುವಂತೆ ಸಂಪರ್ಕ ರಸ್ತೆ ಡಾಂಬರೀಕರಣ ಮತ್ತು ಕಾಂಕ್ರಿಟೀಕರಣಗೊಳಿಸಲು ಸರ್ಕಾರ ನೀಡುತ್ತಿದ್ದ ಅನುದಾನ ಮತ್ತೆ ಮುಂದುವರಿಸುವಂತೆ ಸಭೆಯಲ್ಲಿ ಆಗ್ರಹಿಸಲಾಯಿತು.
ಸದಸ್ಯರಾದ ಎಂ.ಪದ್ಮರಾಜ ಬಲ್ಲಾಳ್, ರವೀಂದ್ರ ಕಂಬಳಿ, ಚಂದ್ರಶೇಖರ ರೈ, ದಿವಾಕರ ಪಂಬದಬೆಟ್ಟು, ಆಲೋನ್ಸ್ ಮಿನೇಜಸ್, ಬಾಲಕೃಷ್ಣ ಆಳ್ವ, ಅಬ್ದುಲ್ ಲತೀಫ್, ಹರಿಶ್ಚಂದ್ರ ಪೂಜಾರಿ, ವಿಠಲ ನಾಯ್ಕ, ವಿಠಲ ಸಾಲ್ಯಾನ್, ಕಾಂಚಲಾಕ್ಷಿ, ಭಾರತಿ ಎಸ್.ರೈ, ಗೀತಾ ಶೆಟ್ಟಿ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ, ಕಾರ್ಯದರ್ಶಿ ಭಾರತಿ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಕೃಷಿ ಪ್ರಾಂಗಣ, ಗ್ರಾಮೀಣ ರಸ್ತೆಗೆ ಆಗ್ರಹ"