ಒಳ್ಳೆಯ ಹಾಗೂ ಅಗತ್ಯ ಕೆಲಸಕ್ಕೆ ಹೋರಾಟ ನಡೆಸುವ ಪ್ರವೃತ್ತಿ ನಾರಾಯಣ ಭಟ್ ಅವರಲ್ಲಿತ್ತು. ಶಾಖೆಯನ್ನು ಲಾಭಾಂಶಕ್ಕೆ ತರುವಲ್ಲಿ ನಿರಂತರವಾಗಿ ಅವರು ಶ್ರಮಿಸಿದ್ದರು ಎಂದು ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷ ಎಲ್.ಎನ್ ಕೂಡೂರು ಹೇಳಿದರು.
ಬ್ಯಾಂಕ್ ನಲ್ಲಿ ಸುಮಾರು 30 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮ್ಯಾನೇಜರ್ ಕೆ.ವಿ.ನಾರಾಯಣ ಭಟ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ನಾರಾಯಣ ಭಟ್ ಮತ್ತು ಅವರ ಪತ್ನಿ ಶಾಲಿನಿ ಭಟ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ನಿರ್ದೇಶಕರಾದ ಕೆ. ಎಸ್. ಪ್ರಕಾಶ್ ಉರಿಮಜಲು ಮಾತನಾಡಿ ವ್ಯವಸ್ಥೆಯಲ್ಲಿ ಯಾವ ಲೋಪಗಳಾದರೂ ಆಡಳಿತ ಮಂಡಳಿಯ ಗಮನಕ್ಕೆ ತಂದು ಸರಿಪಡಿಸಿಕೊಳ್ಳಲು ಭಟ್ ಸಹಕಾರ ನೀಡುತ್ತಿದ್ದರು. ಬ್ಯಾಂಕ್‌ನ ಮುಂದಿನ ಸಿಬ್ಬಂದಿಗಳಿಗೆ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿದವರಲ್ಲಿ ಇವರೂ ಒಬ್ಬರಾಗಿದ್ದಾರೆಂದು ಹೇಳಿದರು.
ನಿರ್ದೇಶಕರಾದ ಎನ್.ಅನಂತ ಭಟ್ ಮಾತನಾಡಿ ಕಾನೂನು ತೊಡಕುಗಳಿದ್ದರೆ ಬ್ಯಾಂಕ್ ಹಿತದೃಷ್ಠಿಯಿಂದ ನಿಷ್ಠುರವಾಗಿ ನಡೆದುಕೊಳ್ಳುತ್ತಿದ್ದ ವ್ಯಕ್ತಿತ್ವ ನಾರಾಯಣ ಭಟ್ವ ಅವರದಾಗಿತ್ತು. ಇದರಿಂದ ಬ್ಯಾಂಕ್ ಕಾನೂನಿನ ಚೌಕಟ್ಟಿನಲ್ಲಿ ಮುನ್ನಡೆಯಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಬೀಳ್ಕೊಡುಗೆ ಸ್ವೀಕರಿಸಿದ ಕೆ.ವಿ ನಾರಾಯಣ ಭಟ್ ಮಾತನಾಡಿ ಕಾನೂನು ಹಾಗೂ ನಿಯಮಗಳನ್ನು ಪಾಲಿಸಿಕೊಂಡು ಹೋಗುವುದರಿಂದ ಜನರ ವಿಶ್ವಾಸ ಗಳಿಸಬಹುದು. ನಿಷ್ಠುರತೆಯಲ್ಲಿ ಹೇಳಿದರೂ ಮುಂದಿನ ಒಳ್ಳೆಯದಕ್ಕೆ ಹೇಳಿದ್ದೇನೆಂಬ ಭಾವನೆ ನನ್ನಲ್ಲಿದೆ ಎಂದು ತಿಳಿಸಿದರು.
ರಾಜೇಶ್ವರಿ, ವಿವಿಧ ಶಾಖೆಯ ಪ್ರಬಂಧಕರಾದ ಚಂದ್ರಹಾಸ ರಾಣ್ಯ, ಶ್ರೀಕಾಂತ, ಮೋಹನ್ ರಾವ್ ಅವರು ಅಭಿಪ್ರಾಯಗಳನ್ನು ತಿಳಿಸಿದರು. ಮನೋರಂಜನ್ ಕೆ.ಆರ್, ಪ್ರೀತಾ ಭಟ್ ಕೆ, ವಿಶ್ವನಾಥ, ಎಂ ಹರೀಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ವಿ.ಎಸ್ ಕೆದಿಲಾಯ ಸ್ವಾಗತಿಸಿ, ಪ್ರಸ್ತಾವನೆಗೈದರು. ಮೋನಪ್ಪ ಗೌಡ ಶಿವಾಜಿನಗರ ವಂದಿಸಿದರು.
Be the first to comment on "ನಿವೃತ್ತರಿಗೆ ಬೀಳ್ಕೊಡುಗೆ ಸಮಾರಂಭ"