ಸಂಗಮ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಮತ್ತು ಸೃಜನಶೀಲ ಕಾರ್ಯಕ್ರಮ ಸಮಾರೋಪ ಸಮಾರಂಭ ಇತ್ತೀಚೆಗೆ ವಿಟ್ಲ ಮರಾಠಿ ಭವನದಲ್ಲಿ ನಡೆಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಸುನೀತಾ ನಾಯಕ್ ಉದ್ಘಾಟಿಸಿದರು.
ಈ ಸಂದರ್ಭ ಸರಕಾರಿ ಸೌಲಭ್ಯ ಕುರಿತು ಮಾಹಿತಿ ನೀಡಲಾಯಿತು. ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್ ಮಾಹಿತಿ ನೀಡಿದರು. ಹಿರಿಯ ನಾಗರಿಕರಾದ ರಾಜೀವಿ ಅವರಿಗೆ ಬಸ್ ಪಾಸ್ ವಿತರಿಸಲಾಯಿತು.
ಮಹಿಳೆಗೆ ಸಮಾಜದ ಪ್ರತಿಯೊಂದುರಂಗದಲ್ಲೂ ಸಮಾನ ಅವಕಾಶಗಳಿವೆ ಅದನ್ನು ಉಪಯೋಗಿಸಿಕೊಳ್ಳುವ ಜಾಣ್ಮೆ ಮಹಿಳೆಯರಿಗೆ ಬರಬೇಕು. ಜ್ಞಾನವಿಕಾಸ ಕೇಂದ್ರಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಾಗ ಅದು ಸಾಧ್ಯ ಎಂದರು. ಕೇಂದ್ರಕ್ಕೆ ಸೇರಿದ ಮಹಿಳೆ ಯಾವುದರಲ್ಲೂ ಹಿಂದೆಇಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನಕ್ಕೂ ಬೇಕಾದ ಧೈರ್ಯ ಹಾಗೂ ನಾಯಕತ್ವ ಗುಣ ಕೇಂದ್ರಗಳಿಂದ ಸಾಧ್ಯ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಅಕ್ಬರ್‌ಖಾನ್ ಜ್ಞಾನವಿಕಾಸ ಕೇಂದ್ರಗಳಿಂದ ಖಂಡಿತಾ ಬದಲಾವಣೆ ಇದೆ ಇನ್ನೂ ಮುಂದಕ್ಕೂ ಯೋಜನೆ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಿ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಸಮನ್ವಯಾಧಿಕಾರಿ ಉಪಸ್ಥಿತರಿದ್ದರು.ದೇವಕಿ, ನಳಿನಿ ತಮ್ಮಕೇಂದ್ರದ ಅನಿಸಿಕೆ ವ್ಯಕ್ತಪಡಿಸಿದರು.ಚೈತ್ರಾ ನಿರೂಪಿಸಿ, ಮಧುಶ್ರೀ ಸ್ವಾಗತಿಸಿದರು, ಸೇವಾಪ್ರತಿನಿಧಿ ಸರಿತಾ ವರದಿ ಮಂಡಿಸಿದರು.
Be the first to comment on "ಸಂಗಮ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ"