ವಿಟ್ಲ ಎಡನೀರು ಗೋಪಾಲಕೃಷ್ಣ ಯಕ್ಷೋತ್ಸವ ಸಮಿತಿ ಆಶ್ರಯದಲ್ಲಿ ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿ ವತಿಯಿಂದ ಮಾ.6ರಿಂದ 11ರವರೆಗೆ ಸಂಜೆ 6.30 ರಿಂದ 10.30 ರವರೆಗೆ ಕಾಲಮಿತಿಯ ಯಕ್ಷೋತ್ಸವ ಕಾರ್ಯಕ್ರಮ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನಡೆಯಲಿದೆ ಎಂದು ಸಮಿತಿ ಗೌರವಾಧ್ಯಕ್ಷ ಮಾವೆ ದಿನಕರ ಭಟ್ ಹೇಳಿದರು.
ಮಾ.6 ರಂದ ಸಂಜೆ ೬ಗಂಟೆಗೆ ಯಕ್ಷಗಾನ ಪ್ರದರ್ಶನದ ಉದ್ಘಾಟನೆಯನ್ನು ಮಾಣಿಲ ಶ್ರೀ ಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ವಹಿಸಲಿದ್ದಾರೆ. ಕಾಸರಗೋಡು ಹಿಂದೂ ಐಕ್ಯ ವೇದಿಕೆ ಉಪಾಧ್ಯಕ್ಷ ರವೀಶ ತಂತ್ರಿ, ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅರುಣ ಎಂ. ವಿಟ್ಲ ಭಾಗವಹಿಸಲಿದ್ದಾರೆ ಎಂದು ವಿಟ್ಲದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಮಾ.6ರಂದು ಪಾಂಚಜನ್ಯ-ಅಗ್ರಪೂಜೆ, ಮಾ.7ರಂದು ಅಕ್ಷಯಾಂಬರ-ಮೈಂದ ದ್ವಿವಿದ, ಮಾ.8ರಂದು ಗದಾಯುದ್ಧ-ರಕ್ತರಾತ್ರಿ, ಮಾ.9ರಂದು ದಕ್ಷಾದ್ವರ – ಗಿರಿಜಾ ಕಲ್ಯಾಣ, ಮಾ.10ರಂದು ಶಿವಪಂಚಾಕ್ಷರಿಮಹಿಮೆ, ಮಾ.11ರಂದು ಕದಂಬ ಕೌಶಿಕೆ ಪ್ರಸಂಗಗಳು ಪ್ರದರ್ಶನ ಗೊಳ್ಳಲಿದೆ. ವಿಶೀಷ ಆಕರ್ಷಣೆಯಾಗಿ ಅತಿಥಿ ಕಲಾವಿದರುಗಳು ಭಾಗವಹಿಸಲಿದ್ದಾರೆ. ಸುಮಾರು 1000 ಸಾವಿರ ಮಂದಿ ನಿತ್ಯ ಭಾಗವಹಿಸುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.
ಮಾ.11ರಂದು ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಕಾಸರಗೋಡು ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಯಕ್ಷಸಿಂಧೂರ ಪ್ರತಿಷ್ಠಾನ ವಿಟ್ಲ, ಸಚಿಕೇತನ ಗೆಳೆಯರ ಬಳಗ ವಿಟ್ಲ, ಯಕ್ಷ ಮಿತ್ರರು ಮೈರ, ಯಕ್ಷ ಮಿತ್ರರು ವಿಟ್ಲ ಸೇರಿ ವಿವಿಧ ಸಂಘಟನೆಗಳು ಸಹಕಾರವನ್ನೂ ನೀಡುವ ಮೂಲಕ ಆರು ದಿನಗಳ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.ಸಮಿತಿ ಅಧ್ಯಕ್ಷ ದಂಬೆಕಾನ ಪ್ರಭಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಟೇಶ್ ವಿಟ್ಲ, ಕೋಶಾಧಿಕಾರಿ ರಮಾನಾಥ ವಿಟ್ಲ, ಸಂಯೋಜಕ ಕೈಯ್ಯೂರು ನಾರಾಯಣ ಭಟ್ ಉಪಸ್ಥಿತರಿದ್ದರು.
Be the first to comment on "ವಿಟ್ಲದಲ್ಲಿ ಎಡನೀರು ಮೇಳದ ಯಕ್ಷೋತ್ಸವ 6ರಿಂದ 11ವರೆಗೆ"