ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರ ಪ್ರದೇಶಭಿವೃದ್ದಿ ನಿಧಿಯಲ್ಲಿ ಪುದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಜೀರು ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯಿಂದ ಅರಸು ವೈದ್ಯನಾಥ ಮತ್ತು ಧೂಮಾವತಿ ಬಂಟ ದೈವಸ್ಥಾನದ ವರೆಗೆ ಸುಮಾರು 8 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಂಕ್ರೀಟ್ ರಸ್ತೆ ಕಾಮಾಗಾರಿಗೆ ಜಿ.ಪಂ. ಮಾಜಿ ಸದಸ್ಯ ಉಮ್ಮರ್ ಫಾರೂಕ್ ಹಾಗೂ ಸ್ಥಳೀಯ ಮುಖಂಡ ಚಂದಪ್ಪ ಅಂಚನ್ ಶಿಲಾನ್ಯಾಸ ನೆರವೇರಿಸಿದರು.
ವಾಹನ ಸಂಚಾರಕ್ಕೆ ಅಯೋಗ್ಯವಾದ ರಸ್ತೆಯನ್ನು ಡಾಮಾರೀಕರಣಗೊಳಿಸುವಂತೆ ಸ್ಥಳೀಯರು ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್ ನೇತೃತ್ವದಲ್ಲಿ ಸಚಿವ ಯು.ಟಿ. ಖಾದರ್ ಅವರಿಗೆ ಮನವಿ ಸಲ್ಲಿಸಿದ್ದರು. ಸ್ಥಳೀಯ ಪ್ರಮುಖ ಚಂದಪ್ಪ ಅಂಚನ್, ಪುದು ಗ್ರಾ.ಪಂ. ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ತಾ.ಪಂ.ಸದಸ್ಯೆ ಪದ್ಮಶ್ರೀ ದುರ್ಗೇಶ್ ಶೆಟ್ಟಿ, ಮಾಜಿ ಸದಸ್ಯ ಆಸೀಪ್ ಇಕ್ಬಾಲ್, ಪಂಚಾಯಿತಿ ಸದಸ್ಯರಾದ ಅಖ್ತರ್ ಹುಸೈನ್, ರಮ್ಲಾನ್, ಝಾಹೀರ್ ಅಬ್ಬಾಸ್, ಲತೀಫ್, ದುರ್ಗೇಶ್ ಶೆಟ್ಟಿ, ಪ್ರಮುಖರಾದ ಎಂ.ಕೆ. ಮಹಮ್ಮದ್, ಮಜೀದ್ ಫರಂಗಿಪೇಟೆ, ಕಿಸೋರ್ ಸುಜೀರ್, ಸೌಕತ್ ಪಾಡಿ, ಇನ್ಶದ್ ಮಾರಿಪಳ್ಳ, ಜಾಫರ್ ಸುಜೀರು ಮತ್ತಿತರರು ಹಾಜರಿದ್ದರು.
Be the first to comment on "ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ"