ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸುವ ಕಾರ್ಯಕ್ರಮಕ್ಕೆ ಎರಡು ದಿನಗಳು ಇರುವಂತೆಯೇ ತೊಕ್ಕೊಟ್ಟಿನಲ್ಲಿರುವ ಸಿಪಿಎಂ ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ನಡೆದಿದೆ. ಘಟನೆಯನ್ನು ಖಂಡಿಸಿ ಪ್ರತಿಭಟನಾ ಸಭೆ ನಡೆಸಿದ ಸಿಪಿಎಂ, ಪಿಣರಾಯಿ ವಿಜಯನ್ ಭೇಟಿ ನಿಶ್ಚಿತ ಎಂದಿದೆ.
ರಾತ್ರಿ ಕಿಡಿಗೇಡಿಗಳು ತೊಕ್ಕೊಟ್ಟು ಒಳಪೇಟೆ ಸಿಪಿಎಂ ಕಚೇರಿ ಬಾಗಿಲು ಮುರಿದು ಬೆಂಕಿ ಹಾಕಿದ ಪರಿಣಾಮ, ಟಿ.ವಿ., ಕಪಾಟು, ಬ್ಯಾನರ್, ಹೋಲ್ಡಿಂಗ್ ಗಳು ಸುಟ್ಟುಹೋಗಿವೆ ಎಂದು ದೂರಲಾಗಿದೆ. ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಇದನ್ನು ವಿರೋಧಿಸಿ ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ಸೌಹಾರ್ದ ರ್‍ಯಾಲಿಯಲ್ಲಿ ಕೇರಳ ಮುಖ್ಯಮಂತ್ರಿಗಳು ಭಾಗವಹಿಸುವುದು ನಿಶ್ಚಿತ ಎಂದರು.
Be the first to comment on "ತೊಕ್ಕೊಟ್ಟು ಸಿಪಿಎಂ ಕಚೇರಿಗೆ ಬೆಂಕಿ"