ಶೋಷಿತ ಜನಸಮುದಾಯದ ಮನೆಯಂಗಳದಲ್ಲಿ ಭಜನೆ ನಡೆಸಿ, ಅವರ ಮನೆಯಲ್ಲೇ ಊಟ ಸೇವಿಸಿ ನಾವೆಲ್ಲ ಒಂದು ಎಂದು ಸಾರುವ ಕಾರ್ಯವನ್ನು ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಭಜನಾ ಮಂಡಳಿ ನಡೆಸಿತು.
ಕಜೆಕಾರುವಿನ ದಲಿತ ಕಾಲೊನಿಯಲ್ಲಿ ಅಲಂಕೃತ ತುಳಸೀಕಟ್ಟೆ ಮುಂಭಾಗ ಎರಡು ಗಂಟೆ ಭಜನಾ ಸೇವೆ ನೀಡಿದ ತಂಡ ಬಳಿಕ ಪೂಜೆ ನಡೆಸಿತು. ಇದರ ನೇತೃತ್ವವನ್ನು ಮನೆ ಯಜಮಾನ ದಂಪತಿಯಾದ ರಾಜೇಶ್ ಮತ್ತು ಲೀಲಾವತಿ ನಡೆಸಿದರು.
ಭಜನಾ ಮಂಡಳಿಯ ಆಶಯದಂತೆ ಹೊರಗೆ ಊಟ ತಯಾರಿಸದೆ , ಕಾಲೋನಿಯ ಬಂಧುಗಳೇ ತಮ್ಮ ತಮ್ಮ ಮನೆಯಲ್ಲಿ ತಾವೇ ತಯಾರಿಸಿದ ಸಿಹಿ ಊಟವನ್ನೇ ಅನ್ನ ಪ್ರಸಾದವನ್ನಾಗಿ ಭಜನಾ ಮಂಡಳಿಯ ಸರ್ವ ಸದಸ್ಯರು ಸ್ವೀಕರಿಸುವುದರೊಂದಿಗೆ ನಡೆ – ನುಡಿ ಪರಿಶುದ್ದತೆಯನ್ನು ಸಾದರ ಪಡಿಸಿದರು. ಸಮಾಜದ ಎಲ್ಲ ವರ್ಗದ ಜನರೂ ಈ ತಂಡದಲ್ಲಿದ್ದುದು ಗಮನಾರ್ಹ.
ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ಕೆ ಜಗದೀಶ್ ಶೆಟ್ಟಿ , ಅಂಬೇಡ್ಕರ್ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಶೀನಾ ನೆಡ್ಚಿಲ್ ಮಾತನಾಡಿದರು. ಕಾಳಿಕಾಂಬಾ ಭಜನಾ ಮಂಡಳಿಯ ಅಧ್ಯಕ್ಷ ಕೆ ಸುಧಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿಗಳಾದ ಎನ್ ರಾಘವೇಂದ್ರ ನಾಯಕ್, ರವಿಕಿರಣ್ ಭಟ್, ಅನಿಲ್ ಕುಮಾರ್, ಸಂದೇಶ್ ನಟ್ಟಿಬೈಲ್ , ಗಣ್ಯರಾದ ಮಹಾಲಿಂಗ, ಶರತ್ ಕೋಟೆ, ಚಂದ್ರಶೇಖರ್, ಹರೀಶ್ ನಾಯಕ್, ಐ ಪುರುಷೋತ್ತಮ ನಾಯಕ್, ಸುಂದರ ಆದರ್ಶ ನಗರ, ಆದರ್ಶ ಶೆಟ್ಟಿ, ಅನೂಪ್ ಸಿಂಗ್ ಮೊದಲಾದ ಹಲವಾರು ಮಂದಿ ಭಾಗವಹಿಸಿದ್ದರು.
click www.bantwalnews.com to read more news
Be the first to comment on "ನಾವೆಲ್ಲ ಒಂದು ಎಂದು ಸಾರಿದ ಮನೆಯಂಗಳದ ಭಜನೆ"