ಪುತ್ತೂರು ನಗರದಲ್ಲಿ ಇಲ್ಲಿನ ಇ-ಫ್ರೆಂಡ್ಸ್ ಆಶ್ರಯದಲ್ಲಿ ಸಮಾಜದಲ್ಲಿ ಯುವ ಪಾತ್ರ ಜಾಗೃತಿ ಕಾರ್ಯಾಗಾರ ಶಿಬಿರ ನಡೆಯಿತು.
ದೇಶದ ಅಭಿವೃದ್ಧಿ ಯುವ ಜನತೆಯ ನ್ನು ಅವಲಂಭಿಸಿದೆ. ಯಾವುದೇ ಸಮಾಜ, ಸಮುದಾಯ ಬದಲಾವಣೆಯಾಗಲು ಸಾಂಘಿಕ ಆಂದೋಲನ ನಡೆಯಬೇಕು ಎಂದು ಕರ್ನಾಟಕ ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್.ಅವರು ಹೇಳಿದರು.
ಸಮುದಾಯ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸಂವಾದ ನಡೆಸಿದ ಅವರು, ಸರಕಾರೇತರ ಸಂಘಸಂಸ್ಥೆಗಳು ಸರಕಾರದ ಗಮನ ಸೆಳೆಯಬೇಕಿದೆ ಎಂದರು. ಸಮಾಜದಲ್ಲಿ ಸಂವಹನ ಮಾಧ್ಯಮ, ಮಹಿಳೆಯರ ಪಾತ್ರ, ನೈತಿಕ ಶಿಕ್ಷಣ, ರಾಜಕೀಯ ಪ್ರಜ್ಞೆ, ನಾಗರಿಕ ಹಕ್ಕು, ಆಡಳಿತ ವರ್ಗ ಮೊದಲಾದ ವಿಚಾರಗಳ ವಿವರಿಸಿದರು.
ಇ-ಫ್ರೆಂಡ್ಸ್ ಅಧ್ಯಕ್ಷ ಇಂತಿಯಾಜ್, ಕಾರ್ಯದರ್ಶಿ ಅಝೀಝ್, ಸದಸ್ಯರಾದ ಡಾ. ಸಪ್ರಾಝ್, ಅಶ್ಪಾಕ್ ಬಪ್ಪಳಿಕೆ, ರಫೀಕ್ ರೋಯಲ್, ರಝಾಕ್, ಶಮೀರ್, ಮುಝಂಬಿಲ್, ಝುಬೈರ್ ಯು.ಕೆ. ಮತ್ತಿತರರು ಚರ್ಚೆ ಯಲ್ಲಿ ಭಾಗವಹಿಸಿದರು. ಆಸೀಫ್ ಬಪ್ಪಳಿಕೆ, ಮುಕ್ತಾರ್, ಶುಕೂರ್, ಇಕ್ಬಾಲ್, ಶಾಕೀರ್, ರಿಯಾಝ್, ಆಸೀಫ್ ಐಡಿಯ ಉಪಸ್ಥಿತರಿದ್ದರು.
Be the first to comment on "ಸಮಾಜದಲ್ಲಿ ಯುವಜನತೆ ಪಾತ್ರ: ಇ-ಫ್ರೆಂಡ್ಸ್ ಆಶ್ರಯದಲ್ಲಿ ಕಾರ್ಯಾಗಾರ"