ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ವಿಟ್ಲಕ್ಕೆ ಆಗಮಿಸಿದ ಮಂಗಳೂರು ಸಾರಿಗೆ ಇಲಾಖೆಯ ಉಪ ಸಾರಿಗೆ ಆಯುಕ್ತ ಆರ್. ಎಂ. ವರ್ಣೆಕರ್ ಅವರನ್ನೊಳಗೊಂಡ ತಂಡ ಅವಧಿ ಮೀರಿದ ಬಸ್ ವಶಕ್ಕೆ ಪಡೆಯುವ ಜತೆಗೆ ತೆರಿಗೆ ವಂಚಿಸಿ ಓಡಾಡುತ್ತಿದ್ದ ಕೇರಳದ ಟೆಂಪೋ ಟ್ರಾವೆಲರ್ ಹಾಗೂ ಸಿಸಿ ಬಸ್ಸೊಂದಕ್ಕೆ ದಂಡ ವಿಧಿಸಿದ ಘಟನೆ ಭಾನುವಾರ ನಡೆದಿದೆ.
ವಿಟ್ಲ ಪಕಳಕುಂಜ ಮಾರ್ಗದಲ್ಲಿ ಪರವಾನಿಗೆ ಪಡೆದು ಬೆಳಗ್ಗೆ ಮಾತ್ರ 3-4 ಟ್ರಿಪ್ ಬಸ್ಸು ಓಡಿಸಿ, ಸಂಜೆಯಾದರೆ ಜನ ಬರುವುದಿಲ್ಲವೆಂದು ಬಸ್ಸು ಓಡಿಸದೆ ನಿಲ್ಲಿಸುತ್ತಿದ್ದ, ಸಮಯವಲ್ಲದ ಸಮಯದಲ್ಲಿ ಸರ್ಕಾರಿ ಬಸ್ಸು ಮುಂಭಾಗದಲ್ಲಿ ಖಾಸಗೀ ಬಸ್ಸು ಓಡಿಸಿ ತೊಂದರೆ ಮಾಡುವ ಬಗ್ಗೆ ದೂರುಗಳು ಸಾರಿಗೆ ಇಲಾಖೆಯಲ್ಲಿ ಸಾರ್ವಜನಿಕರಿಂದ ದೂರು ದಾಖಲಾಗಿತ್ತು.
ಈ ಹಿನ್ನಲೆಯಲ್ಲಿ ಆಯುಕ್ತರ ವಿಶೇಷ ತಂಡ ಭಾನುವಾರ ವಿಟ್ಲ ಹಳೆ ಬಸ್ಸು ನಿಲ್ದಾಣಕ್ಕೆ ಆಗಮಿಸಿದ್ದು, ಪರವಾನಿಗೆ ನಿಯಮದಂತೆ ಅವಧಿ ಮುಗಿದರೂ ಓಡಾಡುತ್ತಿದ್ದ ಹಿನ್ನಲೆಯಲ್ಲಿ ವಶಕ್ಕೆ ಪಡೆದುಕೊಂಡು ವಿಟ್ಲ ಠಾಣೆಗೆ ಹಸ್ತಾಂತರಿಸಿದ್ದಾರೆ. ಕೇರಳದಿಂದ ಬಾಡೀಗೆ ವಾಹನಗಳು ಕರ್ನಾಟಕ ತೆರಿಗೆ ವಂಚಿಸಿ ಓಡಾಡುತ್ತಿದ್ದ 3 ವಾಹನಗಳಿಗೆ ಹಾಗೂ ಪರವಾನಿಗೆ ಇಲ್ಲದೆ ಓಡಾಡುತ್ತಿದ್ದ ಕಾಂಟ್ರಾಕ್ಟ್ ಕ್ಯಾರೇಜ್ ಬಸ್ಸ್ ಒಂದಕ್ಕೆ ದಂಡ ವಿಧಿಸಿದ್ದಾರೆ.
Be the first to comment on "ಆರ್ ಟಿಒ ಅಧಿಕಾರಿಗಳ ಕಾರ್ಯಾಚರಣೆ: ಬಸ್, ಟೆಂಪೋ, ಸಿಸಿ ಬಸ್ ಗೆ ದಂಡ"