ಪದವಿಪೂರ್ವ ಕಾಲೇಜು ಉಪನ್ಯಾಸಕರ ವೇತನ ಪಾವತಿ ವಿಳಂಬವಾಗಲು ಏನು ಕಾರಣ ಎಂಬುದನ್ನು ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಸಿದ್ಧಕಟ್ಟೆಯಲ್ಲಿ ಗಾಡಿಪಲ್ಕೆ ಅಂಬೇಡ್ಕರ್ ಭವನಕ್ಕೆ ಶಿಲಾನ್ಯಾಸ,ಸಿದ್ಧಕಟ್ಟೆ ಸ.ಪ.ಪೂ.ಕಾಲೇಜಿನ ನೂತನ ಕ್ರೀಡಾಂಗಣ, ಕಾಲೇಜು ಕಟ್ಟಡದ ಮೆಟ್ಟಿಲು ಸಮರ್ಪಣೆ ಹಾಗೂ ಹರ್ಷಲಿ ಸಭಾಂಗಣದಲ್ಲಿ ಜರಗಿದ ನಿವೃತ್ತಿಗೊಳ್ಳಲಿರುವ ಪ್ರಾಂಶುಪಾಲ ಎನ್.ಪದ್ಮನಾಭ ರೈ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಳದಂಗಡಿ ಸ.ಪ.ಪೂ ಕಾಲೇಜು ಪ್ರಾಂಶುಪಾಲ ರತ್ನಾಕರ ಶೆಟ್ಟಿ ಅವರು ಅಭಿನಂದನಾ ಭಾಷಣ ಮಾಡಿದರು. ಉಪನ್ಯಾಸಕಿ ಸುಮ ಸಮ್ಮಾನಿತರನ್ನು ಪರಿಚಯಿಸಿದರು. ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರ ನಿಕಟ ಪೂರ್ವ ಅಧ್ಯಕ್ಷ ಪಿಯೂಸ್ ಎಲ್.ರೊಡ್ರಿಗಸ್, ಎಪಿಎಂಸಿ ಸದಸ್ಯ ಪದ್ಮರಾಜ ಬಲ್ಲಾಳ್ ಮಾವಂತೂರು, ಕಾಲೇಜು ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಅರ್ಕಕೀರ್ತಿ ಇಂದ್ರ, ಗ್ರಾ.ಪಂ.ಅಧ್ಯಕ್ಷೆ ಗುಲಾಬಿ ಶೆಟ್ಟಿ,ಉಪಾಧ್ಯಕ್ಷ ಸತೀಶ್ ಪೂಜಾರಿ,ಗ್ರಾ.ಪಂ.ಮಾಜಿ ಅಧ್ಯಕ್ಷ ಶಿವಾನಂದ ರೈ, ಉದ್ಯಮಿ ನಿತ್ಯಾನಂದ ಪೂಜಾರಿ ಕೆಂತಲೆ,ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷೆ ಸರಸ್ವತಿ ಬಿ., ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ದೇವಪ್ಪ ಕರ್ಕೇರಾ, ನಾರಾಯಣ ನಾಯಕ್, ಉಸ್ಮಾನ್,ಭುಜಬಲಿ ಕಂಬಳಿ, ಲೋಕೇಶ್ ಶೆಟ್ಟಿ,ಲೋಕಯ್ಯ ಗಾಡಿಪಲ್ಕೆ,ಸ.ಪ್ರ.ದ. ಕಾಲೇಜು ಪ್ರಾಂಶುಪಾಲ ಪ್ರೊ.ಸತ್ಯನಾರಾಯಣ ಭಟ್,ಪ್ರೌಢಶಾಲಾ ಉಪಪ್ರಾಂಶುಪಾಲ ರಮಾನಂದ,ಗುತ್ತಿಗೆದಾರರಾದ ಬಾಬು ರಾಜೇಂದ್ರ ಶೆಟ್ಟಿ,ಮಧ್ವರಾಜ್ ಜೈನ್, ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷ ದಿನೇಶ್ ಸುಂದರ ಶಾಂತಿ, ಇಂಜಿನಿಯರ್ ಜಗದೀಶ್, ಕ್ಷೇತ್ರ ಶಿಕ್ಷಣಾಽಕಾರಿ ಲೋಕೇಶ್,ಸಿದ್ಧಕಟ್ಟೆ ಹಾ.ಉ.ಸಂಘದ ಕಾರ್ಯದರ್ಶಿ ರತ್ನಕುಮಾರ ಚೌಟ,ಪ್ರಾಂಶುಪಾಲ ಪದ್ಮನಾಭ ರೈ ಅವರ ಪತ್ನಿ ಸುಮತಿ ಪಿ.ರೈ,ಪುತ್ರಿ ಭವಿಷ್ಯ ರೈ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭ ಪದ್ಮನಾಭ ರೈ ಅವರು ಕಾಲೇಜಿಗೆ ಕೊಡಮಾಡಿದ ಶುದ್ಧ ಕುಡಿಯುವ ನೀರಿನ ಸೌಲಭ್ಯದ ಕೀಲಿಕೈಯನ್ನು ಹಿರಿಯ ಉಪನ್ಯಾಸಕರಿಗೆ ಹಸ್ತಾಂತರಿಸಿದರು. ಉಪನ್ಯಾಸಕ ಶೀನಪ್ಪ ಅವರು ಸ್ವಾಗತಿಸಿದರು.ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ, ತಾ.ಪಂ.ಸದಸ್ಯ ಪ್ರಭಾಕರ ಪ್ರಭು ಪ್ರಸ್ತಾವಿಸಿದರು.ಉಪನ್ಯಾಸಕಿ ಮಮತಾ ವಂದಿಸಿದರು. ಸಂಜಯ್ ಪಿ.ಎಸ್. ಕಾರ್ಯಕ್ರಮ ನಿರೂಪಿಸಿದರು.
Be the first to comment on "ಪದವಿಪೂರ್ವ ಕಾಲೇಜು ಉಪನ್ಯಾಸಕರ ವೇತನ ವಿಳಂಬ ಕುರಿತು ಕ್ರಮ"