ಕುರಿಯಾಳ ಗ್ರಾಮದ ಶ್ರೀ ಉಗ್ಗೆದಲ್ತಾಯ ದೈವ ಮತ್ತು ಪಂಜುರ್ಲಿ ದೈವಸ್ಥಾನ ದೊಂಪದ ಬಲಿ ಕ್ಷೇತ್ರದಲ್ಲಿ ನೂತನ ದೊಂಪದ ಬಲಿ ಕ್ಷೇತ್ರದ ಶುದ್ಧೀಕರಣ ಮತ್ತು ಕಲಶೋತ್ಸವ ಪೂಜೆ ಮತ್ತು ದೊಂಪದ ಬಲಿ ಉತ್ಸವ ಫೆ.10ರಿಂದ ಫೆ.12ವರೆಗೆ ನಡೆಯಲಿದೆ.
ಈ ಪ್ರಯುಕ್ತ ಈಗಾಗಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, 10ರಂದು ಸಂಜೆ 5ರಿಂದ ಸಾಮೂಹಿಕ ಪ್ರಾರ್ಥನೆ, ಆಲಯ ಪರಿಗ್ರಹ, ಸಪ್ತಸಿದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ಪ್ರಕಾರ ಬಲಿ, ವನದುರ್ಗಾ ಪೂಜೆ ನಡೆಯುವುದು. 11ರಂದು ಶನಿವಾರ ಬೆಳಗ್ಗೆ 5ಕ್ಕೆ ಕೂರಿಯಾಳಗುತ್ತಿನಿಂದ ಶ್ರೀ ಉಗ್ಗೆದಲ್ತಾಯ ದೈವದ ಮತ್ತು ನಡುಬಾಳಿಕೆಯಿಂದ ಪಂಜುರ್ಲಿ ದೈವದ ಭಂಡಾರ ಹೊರಡುವುದು.
ಬೆಳಗ್ಗೆ 9ರಿಂದ ಪಂಚವಿಂಶತಿಕಲಶ, ಪ್ರಧಾನ ಹೋಮ, ಶಾಂತಿದುರ್ಗಾ ಹೋಮ, ಗಣಹೋಮ, ಕಲಶಾಭಿಶೇಕ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ರಾತ್ರಿ ಉಗ್ಗೆದಲ್ತಾಯ ದೈವದ ನೇಮೋತ್ಸವ, 12ರಂದು ಭಾನುವಾರ ರಾತ್ರಿ ಉಗ್ಗೆದಲ್ತಾಯ ಮತ್ತು ಪಂಜುರ್ಲಿ ದೈವದ ನೇಮೋತ್ಸವ ನಡೆಯಲಿದೆ ಎಂದು ಪ್ರಮುಖರಾದ ಸೀತಾರಾಮ ಸಾಮಾನಿ, ಗಣನಾಥ ಶೆಟ್ಟಿ ಪೂಕರೆಮಾರು, ಅನೂಪ್ ಆರ್. ಶೆಟ್ಟಿ ಮತ್ತು ಜೀರ್ಣೋದ್ಧಾರ ಸಮಿತಿ ಪ್ರಕಟಣೆ ತಿಳಿಸಿದೆ.
Be the first to comment on "ಉಗ್ಗೆದಲ್ತಾಯ, ಪಂಜುರ್ಲಿ ದೈವ ಕ್ಷೇತ್ರದಲ್ಲಿ ದೊಂಪದ ಬಲಿ ಉತ್ಸವ"