ಬಂಟ್ವಾಳ ತಾಲೂಕಿನ ಒಡಿಯೂರು ಆಧ್ಯಾತ್ಮ ಸಾಧನಾ ಕೇಂದ್ರವಷ್ಟೇ ಅಲ್ಲ, ಜ್ಞಾನ ಪ್ರಸಾರದ ಜೊತೆಗೆ ಸ್ವಾವಲಂಬಿ , ಸಾತ್ವಿಕ ಬದುಕಿಗೆ ದಾರಿದೀಪ. ಫೆ.5, 6ರಂದು ತುಳುನಾಡ ಜಾತ್ರೆ – ಒಡಿಯೂರು ರಥೋತ್ಸವ. ಇದರ ವಿಶೇಷತೆಗಳೇನು? ಬಂಟ್ವಾಳ ನ್ಯೂಸ್ ನಲ್ಲಿದೆ ವಿವರ
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂ ಶ್ರೀ ದತ್ತಾಂಜನೇಯ ಕ್ಷೇತ್ರವಿಂದು ದಕ್ಷಿಣ ಗಾಣಗಾಪುರ ಎಂದೇ ಹೆಸರುವಾಸಿ. ಪ್ರತಿ ವರ್ಷದಂತೆ ಈ ಬಾರಿ ರಥೋತ್ಸವ ನಡೆಯುತ್ತದೆಯಾದರೂ ಪ್ರತಿ ಉತ್ಸವಕ್ಕೊಂದು ಮಹತ್ವದ ಉದ್ದೇಶವನ್ನು ಸಂಕಲ್ಪಿಸಿ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಈ ಬಾರಿ ಭಾನುವಾರ ತುಳುವೆರೆ ತುಲಿಪು ಎಂಬ ಕಾರ್ಯಕ್ರಮ. ಇದರ ಉದ್ದೇಶ ತುಳು ಬದುಕಿನ ವೈಭವವನ್ನು ಮರುಸ್ಥಾಪಿಸುವುದು ಹಾಗೂ ಯುವ ಜನರನ್ನು ತುಳು ಸಂಸ್ಕೃತಿ, ಭಾಷೆ, ವಿಚಾರಗಳತ್ತ ಆಕರ್ಷಿಸುವುದು.
ಹೀಗಾಗಿ ಭಾನುವಾರ , ಅಂದರೆ ಫೆ.5ರಂದು ಬೆಳಗ್ಗೆ 10ರಿಂದ ತಳುವೆರೆ ತುಲಿಪು ಎಂಬ ವಿಶಿಷ್ಠ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಶ್ರೀ ಗುರುದೇವಾನಂದ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ತಿಂಗಳೆ ಪ್ರತಿಷ್ಠಾನದ ಮುಖ್ಯಸ್ಥ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಎಂ.ಬ್ರಹ್ಮಾವರ ಭಾಗವಹಿಸುವರು.
ಬಳಿಕ 111.15ಕ್ಕೆ ತುಳು ತುಲಿಪು, ತುಳು ನಡಕೆ ಬೊಕ್ಕ ಜವನೆರ್ ಎಂಬ ವಿಚಾರಗೋಷ್ಠಿ ಇದೆ. ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕ ಡಾ.ವಿಶ್ವನಾಥ ಬದಿಕಾನ ತುಳುತ್ತ ಒರಿಪು ಬೊಕ್ಕ ಜವನೆರ್ ವಿಷಯದಲ್ಲಿ ಮಾತನಾಡುವರು. ತುಳು ಸಂಸ್ಕೃತಿ ಬೊಕ್ಕ ಜವನೆರ್ ವಿಷಯದಲ್ಲಿ ಟಿ.ಎ.ಎನ್. ಖಂಡಿಗೆ ಮಾತನಾಡುವರು. ಉಡುಪಿಯ ಉಪನ್ಯಾಸಕರಾದ ಡಾ.ನಿಕೇತನ ಆಧುನಿಕ ಶಿಕ್ಷಣ ಬೊಕ್ಕ ಜವನೆರ್ ವಿಷಯದಲ್ಲಿ ವಿಚಾರ ಮಂಡಿಸುವರು.
ಮಧ್ಯಾಹ್ನ 1.15ಕ್ಕೆ ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಸದಸ್ಯೆಯರಿಂದ ಪರತಿ ಮಂಗಣೆ ಎಂಬ ನಾಟಕ, 2.30ಕ್ಕೆ ಸಮಾರೋಪ ನಡೆಯುವುದು.
ಸಮಾರೋಪದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಾದ ಮಾಡಲಿದ್ದರೆ, ಮುಖ್ಯ ಅತಿಥಿಗಳಾಗಿ ಶಾಸಕಿ ಶಕುಂತಳಾ ಶೆಟ್ಟಿ, ವಿದ್ವಾಂಸ ಡಾ.ವೈ.ಎನ್.ಶೆಟ್ಟಿ ಪಾಲ್ಗೊಳ್ಳುವರು. ಈ ಸಂದರ್ಭ ತುಳು ರಂಗಭೂಮಿ ಸಾಧಕ ವಿ.ಜಿ.ಪಾಲ್, ಸಾಹಿತ್ಯ ಸಾಧಕಿ ಶಕುಂತಳಾ ಭಟ್ ಹಳೆಯಂಗಡಿ, ಪಾಡ್ದನ ಕಲಾವಿದ, ದರ್ಶನ ಪಾತ್ರಿ ಮುತ್ತಪ್ಪ ಮೂಲ್ಯ ಬಂಟ್ವಾಳ ಹಾಗೂ ಕೃಷಿ ಹೈನುಗಾರಿಕೆ ಸಾಧನೆಗಾಗಿ ನೀರ್ಪಾಡಿ ಕಿಟ್ಟಣ್ಣ ರೈ ಅವರನ್ನು ಸನ್ಮಾನಿಸಲಾಗುವುದು. ಬಳಿಕ ಸಂಜೆ 4ಕ್ಕೆ ಆಯನಾ ಪೆರ್ಲ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯುವುದು .
ಧರ್ಮಸಭೆಯಲ್ಲಿ ನಿವೃತ್ತ ಯೋಧರಿಗೆ ಸನ್ಮಾನ
ಸೋಮವಾರ ನಡೆಯುವ ಒಡಿಯೂರು ರಥೋತ್ಸವ, ತುಳುನಾಡ ಜಾತ್ರೆಯ ಪ್ರಯುಕ್ತ ಬೆಳಗ್ಗೆ 10ಕಕೆ ಧರ್ಮಸಭೆ ನಡೆಯುವುದು. ಈ ಸಂದರ್ಭ ವಿಶೇಷ ಸಂಚಿಕೆ ದತ್ತಪ್ರಕಾಶವನ್ನು ಸ್ವಾಮೀಜಿ ಬಿಡುಗಡೆಗೊಳಿಸುವರು. ಸಾಧ್ವಿ ಶ್ರೀ ಮಾತಾನಂದಮಯೀ ಉಪಸ್ಥಿತರಿರುವರು. ವಿಶೇಷ ಆಹ್ವಾನಿತರಾಗಿ ಹಿರಣ್ಯ ವೆಂಕಟೇಶ್ವರ ಭಟ್ಟ, ನ್ಯಾಯಾಧೀಶ ಗೋಪಾಲಕೃಷ್ಣ ರೈ, ವೈದ್ಯ ಡಾ.ಸಿ.ಕೆ.ಬಲ್ಲಾಳ್, ಯುಎಇ ಬಂಟರ ಸಂಘ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಉದ್ಯಮಿ ಕುಸುಮಾಧರ ಶೆಟ್ಟಿ ಚೆಲ್ಲಡ್ಕ, ಪುಣೆ ಬಂಟರ ಸಂಘ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ, ಉಡುಪಿ ಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆ ಅಧ್ಯಕ್ಷ ಕೆ.ಪ್ರಭಾಕರ ಶೆಟ್ಟಿ, ಮುಂಬೈ ಸೇವಾ ಬಳಗ ಉಪಾಧ್ಯಕ್ಷ ದಾಮೋದರ ಎಸ್. ಶೆಟ್ಟಿ ಭಾಗವಹಿಸುವರು.
ಈ ಸಂದರ್ಭ ನಿವೃತ್ತ ಯೋಧರನ್ನು ಸನ್ಮಾನಿಸಲಾಗುವುದು.
ಮಧ್ಯಾಹ್ನ 3ರಿಂದ ಗೀತ ಸಾಹಿತ್ಯ ಸಂಭ್ರಮ (ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದಿಂದ), 5.30ರಿಂದ ಕುದ್ರೋಳಿ ಗಣೇಶ್ ಅವರ ಜಾದೂ ಪ್ರದರ್ಶನ ನಡೆಯಲಿದೆ.
ರಥೋತ್ಸವ
ಶ್ರೀ ದತ್ತಾಂಜನೇಯ ದೇವರ ವೈಭವೋಪೇತ ರಥೋತ್ಸವ ಹಿನ್ನೆಲೆಯಲ್ಲಿ ರಥಯಾತ್ರೆ ಶ್ರೀ ಸಂಸ್ಥಾನದಿಂದ ಗ್ರಾಮ ದೈವಸ್ಥಾನ ಮಿತ್ತನಡ್ಕಕ್ಕೆ ಹೋಗಿ, ಕನ್ಯಾನ ಪೇಟೆ ಸವಾರಿ ಮಾಡಿ, ಬಳಿಕ ಸದ್ಗುರು ನಿತ್ಯಾನಂದ ಮಂದಿರದಲ್ಲಿ ವಿಶೇಷ ಪೂಜೆ ಬಳಿಕ ಶ್ರೀ ಸಂಸ್ಥಾನಕ್ಕೆ ಹಿಂದಿರುಗುವುದು.
ಇದೇ ಸಂದರ್ಭ ಮಿತ್ತನಡ್ಕದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
Be the first to comment on "ನೋಡ ಬನ್ನಿ ಒಡಿಯೂರು ರಥೋತ್ಸವ"