- ಬಂಟ್ವಾಳ ಎಸ್.ವಿ.ಎಸ್. ಕಾಲೇಜು ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಾಗಾಭರಣ ಅಭಿಮತ
ಮನುಷ್ಯತ್ವದ ನಿಜಧಾರೆಗಳನ್ನು ತುಂಬಿಸುವ ಕಾರ್ಯ ವಿದ್ಯಾಸಂಸ್ಥೆಗಳಿಂದ ಆಗಬೇಕಾಗಿದೆ. ಮೌಲ್ಯಾಧಾರಿತ, ನೈತಿಕ ಶಿಕ್ಷಣದಿಂದ ಮಾತ್ರ ಅದು ಸಾಧ್ಯ ಎಂದು ಚಲನ ಚಿತ್ರ ನಿರ್ದೇಶಕ ಟಿ.ಎಸ್.ನಾಗಭರಣ ಹೇಳಿದರು.
ಬಂಟ್ವಾಳದ ಎಸ್‌ವಿಎಸ್ ಕಾಲೇಜಿನ ಸುವರ್ಣ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಟಿವಿ ಎಂಬ ಬ್ರಹ್ಮರಾಕ್ಷಸ ನಾವು ಹೇಳಿದಂತೆ ಕುಣಿಯಬೇಕೇ ಹೊರತು ಬ್ರಹ್ಮರಾಕ್ಷಸ ನ ತಾಳಕ್ಕೆ ನಾವು ಕುಣಿಯುವುದಲ್ಲ ಎಂಬ ವಿವೇಚನೆ ಇದ್ದಲ್ಲಿ ಮಾತ್ರ ನಾವು ತಲೆ ಎತ್ತಬಹುದಾಗಿದೆ ಎಂದರು.
ಶ್ರೀ ವೆಂಕಟರಮಣ ವಿದ್ಯಾವರ್ದಕ ಸಂಘದ ಅಧ್ಯಕ್ಷ ಕೂಡಿಗೆ ರಘುನಾಥ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಕೂಡಿಗೆ ಹೇಮಲತಾ ಶೆಣೈ, ಭಾಮಿ ವಿಠಲದಾಸ ಶೆಣೈ ಉಪಸ್ಥಿತರಿದ್ದರು. ಪದವಿ ತರಗತಿಯಲ್ಲಿ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ ಸ್ವಾಗತಿಸಿ, ಉಪಪ್ರಾಂಶುಪಾಲ ಪ್ರೊ. ತುಕರಾಮ ಪೂಜಾರಿ ವಂದಿಸಿದರು, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ. ವಂದಿಸಿದರು.
Be the first to comment on "ಮೌಲ್ಯಾಧಾರಿತ ನೈತಿಕ ಶಿಕ್ಷಣದಿಂದ ಮನುಷ್ಯತ್ವ"