ಮಂಗಳೂರು ವಿ.ವಿ.ಯ ಹಳೆ ವಿದ್ಯಾರ್ಥಿ ಸಂಘಟನೆ ಮಾ (ಮಂಗಳಾ ಅಲ್ಯೂಮ್ನಿ ಅಸೋಸಿಯೇಶನ್) ಆಶ್ರಯದಲ್ಲಿ ‘ಮಾ ಸಂಗಮ’ ಹೆಸರಿನಲ್ಲಿ ಫೆ. 19 ರಂದು ಭಾನುವಾರ, ಕೊಣಾಜೆ ಮಂಗಳಗಂಗೋತ್ರಿಯ ವಿ.ವಿ. ಕ್ಯಾಂಪಸ್‌ನಲ್ಲಿ, ಮಂಗಳೂರು ವಿ.ವಿ.ಕ್ಯಾಂಪಸ್‌ನಲ್ಲಿ ಕಲಿತ ಹಳೆ ವಿದ್ಯಾರ್ಥಿಗಳ ಸಮಾವೇಶ ನಡೆಯಲಿದೆ.
ಸುಮಾರು 1500ಕ್ಕೂ ಹೆಚ್ಚಿನ ಸಂಖ್ಯೆಯ ವಿ.ವಿ ಯ ಹಳೆ ವಿದ್ಯಾರ್ಥಿಗಳೆಲ್ಲರೂ ಈ ಸಂಭ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅಂದು ಬೆಳಗ್ಗೆ 9 ರಿಂದ ಅಪರಾಹ್ನ 2 ಗಂಟೆ ತನಕ ಹಳೆ ವಿದ್ಯಾರ್ಥಿಗಳ ಸಮ್ಮಿಲನ ನಡೆಯಲಿದೆ ಎಂದು ಮಾ ಅಧ್ಯಕ್ಷ ದಿನೇಶ್ ಕುಮಾರ್ ಆಳ್ವ ತಿಳಿಸಿದ್ದಾರೆ.
ಮಂಗಳೂರು ವಿ.ವಿ.ಯ ಹಳೆ ವಿದ್ಯಾರ್ಥಿಗಳೆಲ್ಲರು ಈ ಬೃಹತ್ ಸಂಗಮಕ್ಕಾಗಿ ಮಾ ಜೊತೆ ಕೈಜೋಡಿಸಲು ಕೋರಿಕೆ. ಈ ಮೂಲಕ ಮಾ ಸಂಘಟನೆಯ ಧ್ಯೇಯೋದ್ದೇಶಗಳಾದ ಅಶಕ್ತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆಗಾಗಿ ಸಹಾಯ ನೀಡಿಕೆ, ಉದ್ಯೋಗಾವಕಾಶ, ಅಂತಾರಾಷ್ಟ್ರೀಯ ವಿದ್ಯಾರ್ಥಿ ನಿಲಯ ಸ್ಥಾಪನೆ, ಶೈಕ್ಷಣಿಕ ವಿನಿಮಯ ಮತ್ತಿತರ ಕಾರ್ಯಕ್ರಮಗಳನ್ನು ಈಡೇರಿಸುವಲ್ಲಿ ನೀವೂ ಕೈಜೋಡಿಸಬೇಕೆಂಬ ವಿನಂತಿ ನಮ್ಮದು. ಈ ಮೊದಲ ಪ್ರಯತ್ನದಲ್ಲಿ ನಾವೆಲ್ಲರೂ ಜೊತೆ ಸೇರಬೇಕಾಗಿದೆ ಎಂದು ಕಾರ್ಯಕ್ರಮದ ಸಂಚಾಲಕರಾದ ವೇಣು ಶರ್ಮ ತಿಳಿಸಿದ್ದಾರೆ.
ಫೆ. 19ರ ಈ ಮಾ ಸಂಗಮ’ ಕಾರ್ಯಕ್ರಮದ ಮಾಹಿತಿ ಪ್ರಸಾರ ಜವಾಬ್ದಾರಿಯನ್ನು ಮಂಗಳೂರು ವಿ.ವಿ.ಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ (ಎಂಸಿಜೆ)ದ ಹಳೆ ವಿದ್ಯಾರ್ಥಿಗಳ ಸಂಘಟನೆ (ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ-ಮಾಮ್ ) ವಹಿಸಿಕೊಂಡಿದೆ.
ಈಗಾಲೇ ಸಾಮಾಜಿಕ ಜಾಲ ತಾಣಗಳ ಗುಂಪುಗಳಲ್ಲಿ, ಹಾಗೂ ಸ್ನೇಹಿತರ ವಲಯದಲ್ಲೂ ಈ ಮಾಹಿತಿಯನ್ನು ಪ್ರಸರಿಸಲಾಗಿದೆ. ಹೆಚ್ಚಿನ ಮಾಹಿತಿಗೆ ತಮ್ಮ ವಿಭಾಗದ ಮುಖ್ಯಸ್ಥರನ್ನು ಅಥವಾ ಈ ಸಂಖ್ಯೆಯನ್ನು ಸಂಪರ್ಕಿಸಬಹುದು: 8618587992 ಸಂಖ್ಯೆಯನ್ನು ಅಥವಾ ಈಮೇಲ್ ವಿಳಾ maasangamaa@gmail.com ಸಂಪರ್ಕಿಸಬಹುದು ಎಂದು ಕಾರ್ಯಕ್ರಮದ ಸಂಚಾಲಕರಾದ ಡಾ.ಪಿ.ಎಲ್.ಧರ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment on "ಫೆ.19 ರಂದು ವಿ.ವಿ. ಕ್ಯಾಂಪಸ್‌ನಲ್ಲಿ ಹಳೆ ವಿದ್ಯಾರ್ಥಿಗಳ ಸಂಗಮ"