ಬಿ.ಸಿ.ರೋಡಿನ ರಂಗೋಲಿ ಹೋಟೆಲ್ ಹೊರಾಂಗಣದಲ್ಲಿ ಎಡನೀರು ಶ್ರೀ ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿ ವತಿಯಿಂದ ಪದ್ಯಾಣ ಗಣಪತಿ ಭಟ್, ರವಿಚಂದ್ರ ಕನ್ನಡಿಕಟ್ಟೆ ಭಾಗವತಿಕೆಯಲ್ಲಿ ಹಿಡಿಂಬ – ಕೀಚಕ- ಉತ್ತರ ಎಂಬ ಬಯಲಾಟ ಸಂಜೆ 6ರಿಂದ ರಾತ್ರಿ 11ವರೆಗೆ ನಡೆಯಲಿದೆ.
www.bantwalnews.com report
ಜಾಹೀರಾತು
ಯಕ್ಷಮಿತ್ರರು ಕೈಕಂಬ, ಬಿ.ಸಿ.ರೋಡ್ ಆಶ್ರಯದಲ್ಲಿ ನಡೆಯುವ ಈ ಯಕ್ಷಗಾನದಲ್ಲಿ ಸನ್ಮಾನ ಸಮಾರಂಭವೂ ನಡೆಯಲಿದ್ದು, ಹಾಸ್ಯ ಕಲಾವಿದ ಸೀತಾರಾಮ ಕುಮಾರ್ ಕಟೀಲು ಅವರನ್ನು ಸನ್ಮಾನಿಸಲಾಗುವುದು. ಈ ಸಂದರ್ಭ ಉದ್ಯಮಿ ಸತೀಶ್ ಭಂಡಾರಿ ಕಳತ್ತಬೆಟ್ಟು, ಕಸಾಪ ತಾಲೂಕು ಅಧ್ಯಕ್ಷ ಕೆ.ಮೋಹನ ರಾವ್ ಉಪಸ್ಥಿತರಿರುವರು ಎಂದು ಯಕ್ಷಮಿತ್ರರು ಕೈಕಂಬ ಪರವಾಗಿ ಸದಾಶಿವ ಕೈಕಂಬ ತಿಳಿಸಿದ್ದಾರೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಯಕ್ಷಮಿತ್ರರು ವತಿಯಿಂದ ಬಿ.ಸಿ.ರೋಡ್ ನಲ್ಲಿ 25ರಂದು ಯಕ್ಷಗಾನ, ಸನ್ಮಾನ ಸಮಾರಂಭ"