- ಬಂಟ್ವಾಳ ಎಪಿಎಂಸಿ ಚುನಾವಣೆ
- ಬಿಜೆಪಿ ಬೆಂಬಲಿತ 7, ಕಾಂಗ್ರೆಸ್ ಬೆಂಬಲಿತ 6
- ಅಧಿಕಾರ ಹಿಡಿಯಬೇಕಾದರೆ ನಾಮನಿರ್ದೇಶಿತರ ಬೆಂಬಲ ಬೇಕುbantwalnews.com report
ಬಂಟ್ವಾಳ ಎಪಿಎಂಸಿಯ 13 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ 7 ಮಂದಿ ಜಯಗಳಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತರು ಆರು ಸ್ಥಾನಗಳಲ್ಲಿ ವಿಜಯ ಸಾಧಿಸಿದ್ದಾರೆ. ನಾಮನಿರ್ದೇಶಿತ ಸದಸ್ಯರನ್ನು ಸರಕಾರವೇ ನೇಮಿಸುವ ಕಾರಣ ಅಧಿಕಾರ ಕಾಂಗ್ರೆಸ್ ಪಾಲಾಗಲಿರುವುದು ನಿಶ್ಚಿತ. ಒಟ್ಟು 12 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಒಂದು ಸ್ಥಾನಕ್ಕೆ ಚುನಾವಣೆ ನಡೆದಿರಲಿಲ್ಲ. ಕಳೆದ ಬಾರಿ ಬಿಜೆಪಿ 8 ಸದಸ್ಯರನ್ನು ಹೊಂದಿತ್ತು.
ಜಿಲ್ಲೆಯ ಮೂರು ಎಪಿಎಂಸಿಗಳೂ ಕಾಂಗ್ರೆಸ್ ಪಾಲಾಗಿವೆ. ಬೆಳ್ತಂಗಡಿ ಕಾಂಗ್ರೆಸ್ – 13ರಲ್ಲಿ 8 ಕಾಂಗ್ರೆಸ್ 5 ಬಿಜೆಪಿ, ಮಂಗಳೂರು ಕಾಂಗ್ರೆಸ್ 7 ಬಿಜೆಪಿ 7, ಬಂಟ್ವಾಳ ಬಿಜೆಪಿ 7, ಕಾಂಗ್ರೆಸ್ 6 ಸ್ಥಾನಗಳನ್ನು ಗಳಿಸಿದೆ. ನಾಮನಿರ್ದೇಶಿತ ಸದಸ್ಯರ ನೇಮಿಸುವ ಅಧಿಕಾರ ಆಡಳಿತಾರೂಢ ಸರಕಾರಕ್ಕಿರುವ ಕಾರಣ, ಹೇಗಿದ್ದರೂ ಅಲ್ಲಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗುತ್ತಾರೆ. ಸಹಜವಾಗಿಯೇ ಕಾಂಗ್ರೆಸ್ ಅಧಿಕಾರ ಹಿಡಿದುಕೊಳ್ಳಲಿದೆ.
ಬಂಟ್ವಾಳ ಎಪಿಎಂಸಿ ಚುನಾವಣೆಯಲ್ಲಿ ಇದುವರೆಗೆ ದೊರೆತ ಮಾಹಿತಿಯಂತೆ ಗೆದ್ದವರು ಇವರು.
- ಸಂಗಬೆಟ್ಟು (ಸಾಮಾನ್ಯ ಕ್ಷೇತ್ರ) ಪದ್ಮರಾಜ ಬಲ್ಲಾಳ ಮಾವಂತೂರು (ಕಾಂಗ್ರೆಸ್ ಬೆಂಬಲಿತರು)
- ಚನ್ನೈತೋಡಿ (ಸಾಮಾನ್ಯ ಮಹಿಳೆ), ಭಾರತಿ ಎಸ್. ರೈ ಪಡಂತರಕೋಡಿ (ಕಾಂಗ್ರೆಸ್ ಬೆಂಬಲಿತರು)
- ಅಮ್ಟಾಡಿ (ಹಿ.ವ.ಅ) ದಿವಾಕರ ಪಂಬದಬೆಟ್ಟು (ಕಾಂಗ್ರೆಸ್ ಬೆಂಬಲಿತರು)
- ಕಾವಳಮೂಡೂರು (ಸಾಮಾನ್ಯ) ಅಭ್ಯರ್ಥಿಗಳು: ಹರಿಶ್ಚಂದ್ರ ಪೂಜಾರಿ ಕಜೆಕಾರು. (ಬಿಜೆಪಿ ಬೆಂಬಲಿತ)
- ಕೊಳ್ನಾಡು (ಹಿ.ವ.ಬಿ) ಬಿ.ಚಂದ್ರಶೇಖರ ರೈ, (ಕಾಂಗ್ರೆಸ್ ಬೆಂಬಲಿತರು)
- ಅಳಕೆ(ಹಿ.ವ.ಬಿ.ಮಹಿಳೆ) ಗೀತಾಲತಾ ಟಿ.ಶೆಟ್ಟಿ, (ಬಿಜೆಪಿ ಬೆಂಬಲಿತ)
- ಕೆದಿಲ(ಅನುಸೂಚಿತ ಪಂಗಡ) ಜಗದೀಶ ಡಿ, (ಬಿಜೆಪಿ ಬೆಂಬಲಿತ)
- ಮಾಣಿ(ಸಾಮಾನ್ಯ) ಬಿ.ನೇಮಿರಾಜ ರೈ, (ಬಿಜೆಪಿ ಬೆಂಬಲಿತ)
- ಕಡೇಶ್ವಾಲ್ಯ (ಸಾಮಾನ್ಯ) ಚಂದ್ರಶೇಖರ ಪೂಜಾರಿ (ಕಾಂಗ್ರೆಸ್ ಬೆಂಬಲಿತರು)
- ಪಾಣೆಮಂಗಳೂರು (ಸಾಮಾನ್ಯ), ಕೆ. ಪದ್ಮನಾಭ ರೈ. (ಕಾಂಗ್ರೆಸ್ ಬೆಂಬಲಿತರು)
- ತುಂಬೆ (ಅನುಸೂಚಿತ ಜಾತಿ, ಅಭ್ಯರ್ಥಿಗಳು: ವಿಠಲ ಸಾಲ್ಯಾನ್. (ಬಿಜೆಪಿ ಬೆಂಬಲಿತ)
- ವರ್ತಕರ ಕ್ಷೇತ್ರ – : ಬಾಲಕೃಷ್ಣ ಆಳ್ವ. (ಬಿಜೆಪಿ ಬೆಂಬಲಿತ)
- ಸಹಕಾರಿ ಕ್ಷೇತ್ರಕ್ಕೆ ಚುನಾವಣೆ ನಡೆದಿರಲಿಲ್ಲ. ನಾಮಪತ್ರ ಸಲ್ಲಿಸಿದ್ದ ಬಿಜೆಪಿ ಬೆಂಬಲಿತ ರವೀಂದ್ರ ಕಂಬಳಿ ಸಹಜವಾಗಿಯೇ ಗೆಲುವು ಸಾಧಿಸಿದ್ದಾರೆ.
Be the first to comment on "ಗೆಲುವು ಬಿಜೆಪಿಗೆ, ಅಧಿಕಾರ ಕಾಂಗ್ರೆಸ್ ಗೆ"