bantwalnews.com report
ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಜ.13ರಿಂದ 15ರವರೆಗೆ ಪುತ್ತಿಗೆಯ ವಿವೇಕಾನಂದ ನಗರದಲ್ಲಿರುವ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ಆಳ್ವಾಸ್ ವಿರಾಸತ್ 2017 ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಕ್ಷಣಗಣನೆ ಆರಂಭ.
150 ಅಡಿ ಉದ್ದ 60 ಅಡಿ ಅಗಲದ ಬೃಹತ್ ವೇದಿಕೆಯು ಆಳ್ವಾಸ್ ಸಾಂಸ್ಕೃತಿಕ ಶೈಲಿಯಲ್ಲಿ ಸಜ್ಜುಗೊಳ್ಳುತ್ತಿದೆ. ವೇದಿಕೆಯ ಇಕ್ಕೆಲಗಳಲ್ಲಿ ವಿದ್ಯುತ್ ದೀಪಾಲಂಕರದ ಪೂಕರೆ, ಎತ್ತಿನಗಾಡಿಯ ಚಕ್ರ, ಗುತ್ತಿನ ಮನೆಯ ಛಾವಣಿ ಮಾದರಿಯಲ್ಲಿ ರೂಪುಗೊಳ್ಳುತ್ತಿರುವ ಪ್ರವೇಶಧ್ವಾರಗಳ ನಡೆದಿವೆ. ಶ್ರೀಲಂಕಾದ ಸಂಪ್ರದಾಯಿಕ ಮುಖವಾಡವನ್ನು ಅಲಂಕಾರಕ್ಕೆ ಬಳಸುತ್ತಿರುವ ಈ ಬಾರಿಯ ವಿಶೇಷ. ವೇದಿಕೆಯ ಎದುರಿಗೆ 40000 ಪ್ರೇಕ್ಷಕರಿಗೆ ಆಸನದ ವ್ಯವಸ್ಥೆಗಳನ್ನು ಮಾಡಲಾಗಿದೆ.
Be the first to comment on "ಇಂದಿನಿಂದ ಆಳ್ವಾಸ್ ವಿರಾಸತ್, ಭಾನುವಾರ ಸಮಾರೋಪ"