- ವಿಟ್ಲ ಕ್ಷೇತ್ರದಲ್ಲಿ 12ರಂದು ಅಭಿವೃದ್ಧಿ ಕಾರ್ಯಗಳ ಲೋಕಾರ್ಪಣೆ
- ರಾಜಗೋಪುರ, ಆನೆಬಾಗಿಲು, ತೀರ್ಥಮಂಟಪ, ಒಳಾಂಗಣ ಹಾಸುಕಲ್ಲು ಕಾಮಗಾರಿಗಳು
ವಿಟ್ಲ ಸೀಮೆಯ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ರಾಜಗೋಪುರ, ಆನೆಬಾಗಿಲು, ತೀರ್ಥಮಂಟಪ, ಒಳಾಂಗಣ ಹಾಸುಕಲ್ಲು ಮೊದಲಾದ ಕಾಮಗಾರಿಗಳ ಲೋಕಾರ್ಪಣೆ ಮತ್ತು ಶ್ರೀ ಪಂಚಲಿಂಗ ಪುಷ್ಕರಣಿಯಲ್ಲಿ ಶಿವಲಿಂಗ ಪ್ರತಿಷ್ಠೆಯು ಆಲಂಪಾಡಿ ಬ್ರಹ್ಮಶ್ರೀ ವೇದಮೂರ್ತಿ ಪದ್ಮನಾಭ ತಂತ್ರಿ ಹಾಗೂ ಕುಂಟುಕುಡೇಲು ಬ್ರಹ್ಮಶ್ರೀ ವೇದಮೂರ್ತಿ ರಘುರಾಮ ತಂತ್ರಿ ಅವರ ನೇತೃತ್ವದಲ್ಲಿ ಜ.11 ಮತ್ತು ಜ.12ರಂದು ನೆರವೇರಲಿದೆ.
www.bantwalnews.com report
ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸುಮಾರು 1.25 ಕೋಟಿ ರೂ. ವೆಚ್ಚದಲ್ಲಿ ವನಡೆಸಲಾದ ಅಭಿವೃದ್ಧಿ ಕಾರ್ಯಗಳ ಲೋಕಾರ್ಪಣೆ ಮತ್ತು ಶ್ರೀ ಪಂಚಲಿಂಗ ಪುಷ್ಕರಣಿಯಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಜ. 12ರಂದು ನಡೆಯಲಿದೆ.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಲ್.ಎನ್.ಕುಡೂರು ವಿಟ್ಲದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
11ರ ಸಂಜೆ ವಾಸ್ತುಹೋಮ ಇತ್ಯಾದಿ ಧಾರ್ಮಿಕ ಕಾರ್ಯಕ್ರಮ, 12ರಂದು ಪಂಚಲಿಂಗೇಶ್ವರನಿಗೆ ಹಾಗೂ ಪರಿವಾರ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಶಿವಲಿಂಗ ಪ್ರತಿಷ್ಠಾಪನೆ ಸಹಿತ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಅಂಬಲಪಾಡಿ ಪದ್ಮನಾಭ ತಂತ್ರಿ, ಕುಂಟುಕುಡೇಲು ರಘುರಾಮ ತಂತ್ರಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುವುದು ಎಂದು ಅವರು ಹೇಳಿದರು.
ತೀರ್ಥಮಂಟಪಕ್ಕೆ 8 ಲಕ್ಷ ರೂ ವೆಚ್ಚದಲ್ಲಿ 1200 ಚ.ಅಡಿ ಛಾವಣಿ, 35 ಲಕ್ಷ ರೂ ವೆಚ್ಚದಲ್ಲಿ ಪಶ್ಚಿಮ ಭಾಗದಲ್ಲಿ ರಾಜಗೋಪುರ, 15 ಲಕ್ಷ ರೂ ವೆಚ್ಚದಲ್ಲಿ ಮೂಲವಿನ್ಯಾಸದ ಆನೆಬಾಗಿಲು, ಚಂದ್ರಮಂಡಲ ರಥದ ಕೊಟ್ಟಿಗೆ ನಿರ್ಮಿಸಲಾಗಿದೆ. ದೇಗುಲ ಒಳಾಂಗಣದಲ್ಲಿ ಸುಮಾರು 20 ಸಾವಿರ ಕೆಂಪುಕಲ್ಲು ಹಾಸುವ ಜೊತೆಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ದೇಗುಲ ಕೆರೆಯನ್ನು ಸರಕಾರದ 70 ಲಕ್ಷ ರೂ ಅನುದಾನದಲ್ಲಿ ನಿರ್ಮಿಸಲಾಗಿದೆ. ಸುಮಾರು 50 ತಂಡಗಳನ್ನು ಸ್ವಚ್ಛತೆಗಾಗಿ ನಿಯುಕ್ತಿಗೊಳಿಸಲಾಗಿದೆ ಎಂದರು.
ಸಮಿತಿ ಸದಸ್ಯರಾದ ಪಿ.ಸುಬ್ರಾಯ ಪೈ, ಎಂ.ನಿತ್ಯಾನಂದ ನಾಯಕ್, ವಿ.ರಾಮದಾಸ ಶೆಣೈ, ವ್ಯವಸ್ಥಾಪಕ ಅನಂತ ಪ್ರಸಾದ್ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.
Be the first to comment on "ಪಂಚಲಿಂಗೇಶ್ವರ ಪುಷ್ಕರಿಣಿಯಲ್ಲಿ ಶಿವಲಿಂಗ ಪ್ರತಿಷ್ಠೆ"