ಬಿಎಸ್‌ಎನ್‌ಎಲ್‌ನಲ್ಲಿ ನಾಲ್ಕು ದಶಕಗಳ ಕಾಲ ಕರ್ತವ್ಯ ಸಲ್ಲಿಸಿ ನಿವೃತ್ತಿ ಹೊಂದಿದ ಕಚೇರಿ ಅಧೀಕ್ಷಕಿ ಉಷಾ ಪ್ರಭಾಕರ್ ಅವರ ಬೀಳ್ಕೊಡುಗೆ ಸಮಾರಂಭ ಇತ್ತೀಚೆಗೆ ಬಿ.ಸಿ.ರೋಡಿನ ಲಯನ್ಸ್ ಸೇವಾ ಭವನದಲ್ಲಿ ನಡೆಯಿತು.
ಸಹಾಯಕ ಮುಖ್ಯ ವ್ಯವಸ್ಥಾಪಕ ವಿಠಲ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಾಸನದ ನಿವೃತ್ತ ಮುಖ್ಯ ವ್ಯವಸ್ಥಾಪಕ ಮಹಾಬಲ ಶೆಟ್ಟಿ ಭಾಗವಹಿಸಿದ್ದರು. ಕೆ.ಎಸ್. ಆಳ್ವ, ಶೀನಪ್ಪ ನಾಯಕ, ಶಂಕರಿ ಮೊದಲಾದವರು ಸಭಿಕರ ಪರವಾಗಿ ಮಾತನಾಡಿದರು. ದೇವದಾಸ ಸ್ವಾಗತಿಸಿದರು, ಜಯರಾಂ ಪ್ರಸ್ತಾವಿಸಿದರು. ಈಶ್ವರ ಭಟ್ ವಂದಿಸಿದರು, ಯಶೋಧ ಕಾರ್ಯಕ್ರಮ ನಿರೂಪಿಸಿದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಕರ್ತವ್ಯ ಸಲ್ಲಿಸಿ ನಿವೃತ್ತರಿಗೆ ಬೀಳ್ಕೊಡುಗೆ"