ಕಣ್ಣು ಅಮೂಲ್ಯ ಅಂಗವಾಗಿದ್ದು, ಅದರ ರಕ್ಷಣೆ ಮಾಡುವ ಜವಾಬ್ದಾರಿ ನಮಗಿದೆ ಎಂದು ಪುತ್ತೂರು ಆನಂದಾಶ್ರಮ ಸೇವಾ ಟ್ರಸ್ಟ್ ಕಾರ್ಯದರ್ಶಿ ವೇಣುಗೋಪಾಲ ಶೆಣೈ ಹೇಳಿದರು.
ಶುಕ್ರವಾರ ಎರುಂಬು ಬೊಳ್ನಾಡು ಶ್ರೀ ಭಗವತೀ ತೀಯಾ ಯುವಜನ ಸಂಘದ ಆಶ್ರಯದಲ್ಲಿ ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು ಸಹಯೋಗದೊಂದಿಗೆ ಜಿಲ್ಲಾ ವೆನ್‌ಲಾಕ್ ಸಂಚಾರಿ ನೇತ್ರ ಚಿಕಿತ್ಸಾ ಘಟಕ ಮಂಗಳೂರು ಮತ್ತು ಅಂಧತ್ವ ನಿವಾರಣ ಸಂಸ್ಥೆ ಮಂಗಳೂರು ಇದರ ತಜ್ಞ ವೈದರಿಂದ ನಡೆದ ಕಣ್ಣಿನ ಉಚಿತ ಚಿಕಿತ್ಸಾ ಶಿಬಿರ ದಲ್ಲಿ ಮಾತನಾಡಿದರು.
ಉಪ್ಪಳ ಶ್ರೀ ಭಗವತೀ ಕ್ಷೇತ್ರದ ಆಚಾರಪಟ್ಟವರು ಗೋಪಾಲಕೃಷ್ಣ ಬೆಳ್ಚಪ್ಪಾಡ ಅವರು ಶಿಬಿರವನ್ನು ಉದ್ಘಾಟಿಸಿದರು. ಬೊಳ್ನಾಡು ಶ್ರೀ ಭಗವತೀ ತೀಯಾ ಯುವಜನ ಸಂಘದ ಅಧ್ಯಕ್ಷ ರವೀಂದ್ರ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.
ಎರುಂಬು ಬೊಳ್ನಾಡು ಶ್ರೀ ಭಗವತೀ ಸೇವಾ ಮಹಿಳಾ ಸಂಘದ ವತಿಯಿಂದ ಫೆ.೫ ರಂದು ನಡೆಯಲಿರುವ ಸಾಮೂಹಿಕ ಶ್ರೀ ದುರ್ಗಾ ಪೂಜೆ ಹಾಗೂ ತೀಯಾ ಮಾತೃ ಸಮ್ಮಿಲನದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ವೆನ್‌ಲಾಕ್ ಸಂಚಾರಿ ನೇತ್ರ ಘಟಕದ ನೇತ್ರಾಧಿಕಾರಿ ಸವಿತಾ ಕುಲಕರ್ಣಿ, ಶಿಬಿರದ ನಿರ್ದೇಶಕ ಡಾ. ಮನೋಹರ ರೈ, ಬಂಟ್ವಾಳ ಸರ್ಕಾರಿ ಆಸ್ಪತ್ರೆಯ ನೇತ್ರಾಧಿಕಾರಿ ಶಾಂತರಾಜ್, ಜನಸಮೃದ್ಧಿ ಮಲ್ಟಿ ಸರ್ವೀಸ್ ಕೋ ಸೊಸೈಟಿಯ ಪ್ರದೀಫ್ ಉಕ್ಕುಡ, ವೆನ್‌ಲಾಕ್ ಆಸ್ಪತ್ರೆಯ ಡಾ. ಜಯಂತಿ, ಬೊಳ್ನಾಡು ಶ್ರೀ ಭಗವತೀ ತೀಯಾ ಯುವಜನ ಸಂಘದ ಗೌರವಾಧ್ಯಕ್ಷ ರಾಜೇಶ್ ಕರವೀರ, ಬೊಳ್ನಾಡು ಶ್ರೀ ಭಗವತೀ ದೇವಸ್ಥಾನ ನಿರ್ಮಾಣ ಸಮಿತಿ ಪ್ರಧಾನ ಕಾರ್ಯದರ್ಶಿ ಆನಂದ ಕಲ್ಲಕಟ್ಟ, ಕೋಶಾಧಿಕಾರಿ ಶ್ರೀಧರ ಅಳಿಕೆ ಉಪಸ್ಥಿತರಿದ್ದರು.
ಜತೆ ಕಾರ್ಯದರ್ಶಿ ಸದಾಶಿವ ಅಳಿಕೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಉದಯ ದೂಜಮೂಲೆ ವಂದಿಸಿದರು.
Be the first to comment on "ಕಣ್ಣಿನ ಉಚಿತ ಚಿಕಿತ್ಸಾ ಶಿಬಿರ"