ಭಜನೆ ಮತ್ತು ಯಕ್ಷಗಾನದಿಂದ ದೇಹ ಮತ್ತು ಮನಸ್ಸಿನ ನಡುವೆ ಅನುಸಂಧಾನವಾಗಿ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಯವರು ನುಡಿದರು.
ಗೋಪಾಲಕೃಷ್ಣ ವಿಶ್ವಸ್ಥ ಸೇವಾ ಮಂಡಳಿ ಕನಕಗಿರಿ ಮಂಚಿ ಧಾರ್ಮಿಕ ಮಹೋತ್ಸವದ ಮೂರು ದಿನದ ಯಕ್ಷಗಾನದ ಸಮಾರಂಭ ಉದ್ಘಾಟಿಸಿ ಆಶೀರ್ವಚನವಿತ್ತರು.
ಯಕ್ಷಗಾನದಿಂದ ವೈಚಾರಿಕ ಮನೋಭಾವ ವಿಮರ್ಶಾತ್ಮಕ ಚಿಂತನೆಗಳು ಅಭಿವೃದ್ದಿಯಾಗುತ್ತದೆ. ಯಕ್ಷಗಾನವನ್ನು ಪ್ರೀತಿಸುವುದರಿಂದ ನಮ್ಮನ್ನು ನಾವೇ ಪ್ರೀತಿಸುವಂತಾಗುತ್ತದೆ ಎಂದು ಶ್ರೀ ಕ್ಷೇತ್ರ ಕಟೀಲಿನ ಅನುವಂಶಕ ಅರ್ಚಕ ವೇದಮೂರ್ತಿ ಕಮಾಲಾದೇವಿ ಪ್ರಸಾದ ಅಸ್ರಣ್ಣ ನುಡಿದರು.
ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ವೇದವ್ಯಾಸ ರಾಮಕುಂಜ , ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್ ಉಪಸ್ಥಿತರಿದ್ದರು. ಸಂಚಾಲಕ ಕೈಯೂರು ನಾರಾಯಣ ಭಟ್ ಸ್ವಾಗತಿಸಿದರು.ಅಧ್ಯಕ್ಷ ಸಿ.ಎಚ್.ಸೀತಾರಾಮ ಶೆಟ್ಟಿ ವಂದಿಸಿ, ತಿರುಮಲೇಶ್ ಭಟ್ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಯಕ್ಷಗಾನದಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ"