2016

ಅರುವತ್ತು ವರ್ಷಗಳ ಹಿಂದೆಯೇ ತುಳು ನಿರ್ಲಕ್ಷ್ಯ

ತುಳುನಾಡಿನಲ್ಲಿರುವವರು ಎಲ್ಲರೂ ತುಳುವರು. ಅದರಲ್ಲೂ ತುಳು ಭಾಷೆಗೆ ತನ್ನದೇ ಆದ ಹಿರಿಮೆ ಇದೆ. ನಮ್ಮ ಭಾಷೆ ಉಳಿವಿಗೆ ಪಣ ತೊಡದಿದ್ದರೆ ತುಳು ಇತಿಹಾಸ ಪುಟ ಸೇರಬಹುದು. ಹಾಗಾಗಬಾರದು.


ಮರಳು ಅಕ್ರಮ ಸಾಗಾಟಕ್ಕೆ ಬಳಸಿದ ಲಾರಿ ವಶಕ್ಕೆ

ನೇತ್ರಾವತಿ ಒಡಲಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಸುತ್ತಿರುವ ಆರೋಪ ಕೇಳಿಬರುತ್ತಿರುವುದು ಇಂದುನಿನ್ನೆಯ ವಿಷಯವಲ್ಲ. ಆಗಾಗ್ಗೆ ಇಲ್ಲಿಗೆ ದಾಳಿ ನಡೆಸುವುದು ಹಾಗೂ ಮತ್ತೆ ಅಂಥದ್ದೇ ಕೆಲಸ ಮುಂದುವರಿಯುತ್ತಿರುವುದು ಈಗ ಸಾಮಾನ್ಯ ವಿಷಯವಾಗಿ ಪರಿವರ್ತಿತವಾಗಿದೆ. ಆದರೆ ಕೆಲ ಗ್ರಾಮಗಳಲ್ಲಿ ಸ್ಥಳೀಯರೇ…


ಪ್ರಥಮ ದರ್ಜೆ ಕಾಲೇಜು ರಾಸೇಯೋ ಶಿಬಿರ ಆರಂಭ

ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ವಾರ್ಷಿಕ ಶಿಬಿರ ನಗ್ರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆರಂಭಗೊಂಡಿತು. ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಪಂಚಾಯಿತಿ…


ವಿಟ್ಲ ಬೊಬ್ಬೆಕೇರಿಯಲ್ಲಿ ಮಾರುಕಟ್ಟೆ ಜಮೀನು ಒತ್ತುವರಿ ತೆರವು

ಮಾರುಕಟ್ಟೆಗೆ ಎಂದು ಕಾದಿರಿಸಿದ್ದ ಜಮೀನು ಒತ್ತುವರಿ ತೆರವು ಕಾರ್ಯಾಚರಣೆ ವಿಟ್ಲ ಬೊಬ್ಬೆಕೇರಿಯಲ್ಲಿ ಮಂಗಳವಾರ ನಡೆಯಿತು. ಒತ್ತುವರಿ ತೆರವು ಕಾರ್ಯ ಆರಂಭವಾಗುತ್ತಿದ್ದಂತೆ ಒತ್ತುವರಿ ಸ್ಥಳದಲ್ಲಿ ವಾಸವಾಗಿರುವ ಇಬ್ಬರು ತೆರವು ವಾಹನಕ್ಕೆ ಅಡ್ಡಿ ಪಡಿಸಿದರು. ತಹಸೀಲ್ದಾರ್ ಪುರಂದರ ಹೆಗ್ಡೆ ಅವರು…


ವಾರ್ಷಿಕ ಸ್ವಲಾತ್ ಮಜ್ಲಿಸ್ ಹಾಗೂ ಧಾರ್ಮಿಕ ಮತ ಪ್ರವಚನ

ಬಿ.ಸಿ.ರೋಡು ಸಮೀಪದ ಪಲ್ಲಮಜಲು ಹಯಾತುಲ್ ಇಸ್ಲಾಂ ಜುಮಾ ಮಸೀದಿ ವತಿಯಿಂದ ವಾರ್ಷಿಕ ಸ್ವಲಾತ್ ಮಜ್ಲಿಸ್ ಹಾಗೂ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮವು ಡಿಸೆಂಬರ್ 29 ರಿಂದ ಜನವರಿ 1 ರವರೆಗೆ ಇಲ್ಲಿನ ಮಸೀದಿ ವಠಾರದಲ್ಲಿ ನಡೆಯಲಿದೆ. ಸಮಸ್ತ…


ಪೌಷ್ಟಿಕಾಂಶ ಆಹಾರೋತ್ಸವ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ಆಶ್ರಯದಲ್ಲಿ ಕಣಂತೂರಿನ ಶ್ರೀ ವೈದ್ಯನಾಥೇಶ್ವರ ಕಲಾ ಮಂಟಪದಲ್ಲಿ ಶ್ರೀ ವೈದ್ಯನಾಥೇಶ್ವರ ಜ್ಞಾನವಿಕಾಸ ಕೇಂದ್ರ ಬಾಳೆಪುಣಿಯ ಕೇಂದ್ರ ಸಭೆ ನಡೆಯಿತು. ಈ ಸಂದರ್ಭ ಸದಸ್ಯರಿಗೆ ಪೌಷ್ಟಿಕ ಆಹಾರದ ಮಾಹಿತಿ ಮತ್ತು…


ಕರಾಟೆಯಲ್ಲಿ ಪ್ರಥಮ ಸ್ಥಾನ

ವೆಸ್ಟರ್ನ್ ಮಾರ್ಷಲ್ ಆರ್ಟ್ಸ್ ನಡೆಸಿದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ದೆಯಲ್ಲಿ ಗ್ರೂಪ್ ಕಟಾ ಹಾಗೂ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾನಗರ – ಕೈರಂಗಳ ಅಂಬರ್‌ವ್ಯಾಲಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಫಾತಿಮಾ ಶಹನ, ಸೆಫಿಯತ್ತುಲ್…


ಏಡ್ಸ್ ಅರಿವು ಜಾಗೃತಿ ಕಾರ್ಯಕ್ರಮ

ದೇಶದ ಯುವಜನತೆ ದಾರಿ ತಪ್ಪಿದರೆ ಇಡೀ ರಾಷ್ಟ್ರ ಅಧಃಪತನದ ಕಡೆಗೆ ಸರಿಯುತ್ತದೆ ಎಂದು ಕಲಾವಿದ  ಉದಯ ಕುಮಾರ್ ಜ್ಯೋತಿಗುಡ್ಡೆ ಅಭಿಪ್ರಾಯ ಪಟ್ಟರು. ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನಲ್ಲಿ ರೆಡ್ ರಿಬ್ಬನ್ ಕ್ಲಬ್ ವತಿಯಿಂದ…


ಫರಂಗಿಪೇಟೆಯಲ್ಲಿ 85ನೇ ರಕ್ತದಾನ ಶಿಬಿರ

ಅಂಗಾಗಗಳ ಮೌಲ್ಯವನ್ನು ಪ್ರತಿಯೊಬ್ಬ ವ್ಯಕ್ತಿ ಅರಿತುಕೊಂಡಾಗ ಆತ ಶ್ರೇಷ್ಟತೆಯನ್ನು ಕಂಡು ಕೊಳ್ಳಲು ಸಾಧ್ಯವಾಗುತ್ತದೆ ಎಂದು ದ.ಕ.ಜಿಲ್ಲಾ ಧಾರ್ಮಿಕ ಪರಿಷತ್‌ನ ಸದಸ್ಯ ಬಿ.ಜಗನ್ನಾಥ ಚೌಟ ಹೇಳಿದರು.   ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಜನಜಾಗೃತಿ ವೇದಿಕೆ ಬಂಟ್ವಾಳ ಇವರ ಆಶ್ರಯದಲ್ಲಿ…


ಎನ್ ಎಸ್ ಎಸ್ ವಿದ್ಯಾರ್ಥಿಗಳ ಶ್ರಮ ಸೇವೆ

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಒಳಾಂಗಣಕ್ಕೆ ಕೆಂಪು ಕಲ್ಲು ಹಾಸುವ ಕೆಲಸದಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಪದವಿ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳು ಶ್ರಮ ಸೇವೆ ಮಾಡಿದರು.