ಮಹಿಷಮರ್ದಿನಿ ಪ್ರಸಂಗಕ್ಕೆ ಗೆಜ್ಜೆಕಟ್ಟಿ ಕುಣಿಯಲಿದ್ದಾರೆ ಮಂಗಳೂರಿನ ಪತ್ರಕರ್ತರು
ನೋಡಲು ಮರೆಯದಿರಿ.
ಇಂದು (ಡಿಸೆಂಬರ್ 29, ಗುರುವಾರ) ರಾತ್ರಿ 8.30ಕ್ಕೆ ಸರಿಯಾಗಿ. ಮಂಗಳೂರಿನ ಕದ್ರಿ ಪಾರ್ಕ್ ನಲ್ಲಿ ಸ್ಥಾಪಿಸಲಾದ ಭವ್ಯ ವೇದಿಕೆಯಲ್ಲಿ ಮಂಗಳೂರು ಪತ್ರಕರ್ತರ ತಂಡ ಯಕ್ಷಮಾಧ್ಯಮದ ಯಕ್ಷಗಾನ ಮಹಿಷಮರ್ದಿನಿ.
ಹಿಮ್ಮೇಳದಲ್ಲಿ ಭಾಗವತರಾಗಿರುವವರು ಭವ್ಯಶ್ರೀ ಮಂಡೆಕೋಲು (ಇವರು ವಿಜಯವಾಣಿ ವರದಿಗಾರ ಹರೀಶ ಕುಲ್ಕುಂದ ಅವರ ಪತ್ನಿ) ಚೆಂಡೆ ಮುರಾರಿ ಕಡಂಬಳಿತ್ತಾಯ, ಮದ್ದಳೆ ಗಣೇಶ ಭಟ್ ನೆಕ್ಕರೆಮೂಲೆ. ಧೀರಜ್ ಕೊಟ್ಟಾರಿ ನಿರ್ದೇಶನದಲ್ಲಿ ರವಿ ಅಲೆವೂರಾಯ ಮಾರ್ಗದರ್ಶನ ನೀಡುವರು.
ಪ್ರೆಸ್ ಕ್ಲಬ್ ಡೇಯಂದು ವೃತ್ತಿಪರ ಕಲಾವಿದರಂತೆ ಕುಣಿದು ಅರ್ಥ ಹೇಳಿದ ಪತ್ರಕರ್ತರಿಗೆ ಇದು ಎರಡನೇ ಪ್ರದರ್ಶನ.
ಕರಾವಳಿ ಉತ್ಸವದಲ್ಲಿ ಭಾಗವಹಿಸುವ ಕಲಾವಿದರಿಗೆ ಸಂಭಾವನೆ ಇದ್ದರೂ ಪತ್ರಕರ್ತರು ಮಾತ್ರ ಯಾವುದೇ ಸಂಭಾವನೆ ಪಡೆಯದಿರುವ ನಿರ್ಧಾರ ಮಾಡಿದ್ದಾರೆ. ಕೇವಲ ವೇಷಭೂಷಣ, ಹಾಗೂ ಹಿಮ್ಮೇಳ ಕಲಾವಿದರಷ್ಟೇ ಸಂಭಾವನೆ ಪಡೆಯುವರು. ಈ ಮೂಲಕ ಕಲಾ ಸೇವೆಯ ಜತೆ ಕಲಾ ಪೋಷಣೆಯ ಹೊಣೆ ಕೂಡಾ ಪತ್ರಕರ್ತರ ಯಕ್ಷಮಾಧ್ಯಮ ತಂಡ ಹೊತ್ತುಕೊಂಡಿದೆ.
ಪಾತ್ರವರ್ಗ ಹೀಗಿದೆ: ವಿಶ್ವವಾಣಿಯ ಕಿಶೋರ್ ಭಟ್ ಕೊಮ್ಮೆ ಮಹಿಷಾಸುರ, ವಿಶ್ವವಾಣಿಯ ವಿಶೇಷ ವರದಿಗಾರ ಜಿತೇಂದ್ರ ಕುಂದೇಶ್ವರ ಅವರ ಶ್ರೀದೇವಿ, ಹೊಸದಿಗಂತ ಹಿರಿಯ ವರದಿಗಾರ ಸುರೇಶ್ ಡಿ. ಪಳ್ಳಿ ಅವರ ಸುಪಾರ್ಶ್ವಕ, ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಹಿರಿಯ ವರದಿಗಾರ ಗಣೇಶ್ ಮಾವಂಜಿ ಅವರ ಮಾಲಿನಿ. ವಿಶ್ವವಾಣಿಯ ಅಜಿತ ಆರಾಡಿ ಅವರ ರಕ್ಕಸ ದೂತ, ದಿಗ್ವಿಜಯ ಸುದ್ದಿವಾಹಿನಿಯ ದಿವಾಕರ ಪದ್ಮುಂಜ ಅವರ ದೇವೇಂದ್ರ, ಉದಯವಾಣಿಯ ಭರತ್‌ರಾಜ್ ಕಲ್ಲಡ್ಕ, ದಾಯ್ಜಿವರ್ಲ್ಡ್ ಸುದ್ದಿವಾಹಿನಿಯ ಆಂಕರ್ ಚೇತನ್ ಪಿಲಿಕುಳ ಮತ್ತು ಪ್ರಜಾವಣಿಯ ಹಿರಿಯ ಉಪಸಂಪಾದಕ ರಾಜೇಶ್ ಶ್ರೀವನ, ವಿಜಯವಾಣಿಯ ದೇವಿಪ್ರಸಾದ್ ಅವರ ದೇವಬಲ. ವಿಜಯವಾಣಿ ವರದಿಗಾರ ಹರೀಶ್ ಮೋಟುಕಾನ ಅವರ ಶಂಖಾಸುರ, ವರದಿಗಾರ ಕಿಶನ್ ಶೆಟ್ಟಿ ಅವರ ದುರ್ಗಾಸುರ, ದ ಹಿಂದು ವರದಿಗಾರ ರಾಘವ ಎಂ. ಮತ್ತು ಇಂಡಿಯನ್ ಎಕ್ಸ್‌ಪ್ರೆಸ್ ವಿಶೇಷ ವರದಿಗಾರ ಹರ್ಷ ಆವರ ರಾಕ್ಷಸ ಬಲ, ಉದಯವಾಣಿ ವರದಿಗಾರ್ತಿ ಪ್ರಜ್ಞಾ ಶೆಟ್ಟಿ ಅವರ ವಿಷ್ಣು, ಕೋಸ್ಟಲ್ ಡೈಜೆಸ್ಟ್‌ನ ಸುರೇಶ್ ವಾಮಂಜೂರು ಅವರ ಈಶ್ವರ.
ಇಡೀ ತಂಡಕ್ಕೆ ಸ್ಫೂರ್ತಿಯ ಚಿಲುಮೆಯಾಗಿ ನಿಂತವರು ಹಿರಿಯ ಪತ್ರಕರ್ತರೂ ಪ್ರೆಸ್ ಕ್ಲಬ್ ಅಧ್ಯಕ್ಷರೂ ಆಗಿರುವ ರೆನಾಲ್ಡ್ ಅನಿಲ್ ಫರ್ನಾಂಡಿಸ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ ವಾರ್ತಾ ಇಲಾಖೆಯ ವಾರ್ತಾಧಿಕಾರಿ ಖಾದರ್ ಷಾ.
Be the first to comment on "ಇಂದು ಕರಾವಳಿ ಉತ್ಸವದಲ್ಲಿ ಪತ್ರಕರ್ತರ ಯಕ್ಷಗಾನ"