ಬಂಟ್ವಾಳ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶ್ರೀ ಕ್ಷೇತ್ರ ಧರ್ಮಸ್ಥಳ, ಶ್ರೀ ವಿವೇಕಾನಂದ ಸಂಸ್ಥೆ ಬೆಂಗಳೂರು, ಆಯುಷ್ ಇಲಾಖೆ ದೆಹಲಿ ಮತ್ತು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಮಧುಮೇಹ ನಿಯಂತ್ರಣ ಮತ್ತು ಮಧುಮೇಹ ಮುಕ್ತ ಭಾರತ ಯೋಗ ಶಿಕ್ಷಕರ ಕಾರ್ಯಾಗಾರವನ್ನು ವೈದ್ಯ ಡಾ.ನಿರಂಜನ ಆಚಾರ್ಯ ಉದ್ಘಾಟಿಸಿದರು.
ಕಾಯಿಲೆಗಳು ಹೇಳದೆ ಕೇಳದೆ ಬರುತ್ತದೆ. ರೋಗಿಗಳು ಬೇರೆ ರೋಗಗಳ ಪತ್ತೆಗೆ ಹೋದಾಗ ಮಧುಮೇಹ ಇರುವುದು ಅರಿವಿಗೆ ಬರುತ್ತದೆ.ಇಂದಿನ ಸಮಾಜದಲ್ಲಿ ಮಧುಮೇಹಿಗಳ ಸಂಖ್ಯೆ ಜಾಸ್ತಿಯಾಗುತ್ತಾ ಇದೆ.ಇದಕ್ಕೆ ಮುಖ್ಯ ಕಾರಣ ಬದಲಾದ ಜೀವನ ಶೈಲಿ ಎಂದು ತಿಳಿಸಿದರು.
ಶಾಂತಿವನ ಟ್ರಸ್ಟ್ ನ ಯೋಗ ನಿರ್ದೇಶಕರಾದ ಡಾ. ಶಶಿಕಾಂತ್ ಜೈನ್ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ 20 ತರಭೇತುದಾರರನ್ನು ಆಯ್ಕೆಗೊಳಿಸಿ ಮೂರು ದಿನಗಳ ಕಾಲ ತರಭೇತಿ ನೀಡಲಾಗುತ್ತದೆ. ತರಬೇತುದಾದರು ತಮ್ಮಗ್ರಾಮದಲ್ಲಿರುವ ಮಧುಮೇಹಿಗಳನ್ನು ಗುರುತಿಸಿ ಅವರಿಗೆ 9 ದಿನಗಳ ತರಬೇತಿ ನೀಡುತ್ತಾರೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ತಾಲೂಕು ಯೋಜನಾಧಿಕಾರಿ ಸುನೀತಾ ನಾಯಕ್ 3 ದಿನಗಳಲ್ಲಿ ಸಿಗುವ ತರಬೇತಿಯಿಂದ ಇಡೀ ಗ್ರಾಮಕ್ಕೆ ಕೊಡುಗೆ ನೀಡಿದಂತಾಗುವುದು ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ವಿವೇಕಾನಂದ ಸಂಸ್ಥೆಯ ಸಂಜಯ್ ಹಾಗೂ ಗೀತಾರಾಣಿ ತರಬೇತಿದಾರರಾಗಿ ಆಗಮಿಸಿದ್ದರು. ಹೇಮಲತಾ ಪ್ರಾರ್ಥಿಸಿದರು. ಜಯಂತಿ ಕಾರ್ಯಕ್ರಮ ನಿರೂಪಿಸಿ, ಸರಿತಾ ವಂದಿಸಿದರು.
Be the first to comment on "ಯೋಗ ಶಿಕ್ಷಕರ ಕಾರ್ಯಾಗಾರ"