ಕ್ರೆಸೆಂಟ್ ಯಂಗ್‌ಮೆನ್ಸ್ ಅಸೋಸಿಯೇಶನ್ ತುಂಬೆ ಡಿಸೆಂಬರ್ 31ರಿಂದ ಜನವರಿ 8ರವರೆಗೆ ಹಮ್ಮಿಕೊಂಡಿರುವ ‘ಮಾದಕ ಬದುಕು ಭಯಾನಕ’ ಅಭಿಯಾನದ ಪ್ರಯುಕ್ತ ತುಂಬೆ ವ್ಯಾಪ್ತಿಯ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಸಭೆ ಗುರುವಾರ ರಾತ್ರಿ ಕ್ರೆಸೆಂಟ್ ಕಚೇರಿಯಲ್ಲಿ ನಡೆಯಿತು.
ತುಂಬೆ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಅಬ್ದುಲ್ ಲತೀಫ್ ಫೈಝಿ ದುಅ ಮೂಲಕ ಸಭೆಯನ್ನು ಉದ್ಘಾಟಿಸಿದರು. ಬಳಿಕ ಅವರು ಅಭಿಯಾನದ ಮಾಹಿತಿಗಳನ್ನೊಳಗೊಂಡ ನೋಟಿಸ್ ಬಿಡುಗಡೆಗೊಳಿಸಿ, ಮಾದಕ ದ್ರವ್ಯಗಳ ವ್ಯಸನದ ವಿರುದ್ಧ ಯುವ ಜನರಲ್ಲಿ ಸಂಘ-ಸಂಸ್ಥೆಗಳು ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆಯ ಬಗ್ಗೆ ಮಾತನಾಡಿದರು.
ಅಭಿಯಾನದ ಸಂಚಾಲಕ ಮುಹಮ್ಮದ್ ಇರ್ಫಾನ್ ಟಿ. ಕಾರ್ಯಕ್ರಮದ ಕಾರ್ಯಸೂಚಿಯ ಬಗ್ಗೆ ಹಾಗೂ ಕ್ರೆಸೆಂಟ್‌ನ ಮಾಜಿ ಅಧ್ಯಕ್ಷ ಇಮ್ತಿಯಾಝ್ ಎ.ಕೆ. ಮಾದಕ ದ್ರವ್ಯಗಳ ವ್ಯಸನದಿಂದ ಸಮಾಜವನ್ನು ಮುಕ್ತಗೊಳಿಸುವಲ್ಲಿ ಎಲ್ಲ ಸಂಘ-ಸಂಸ್ಥೆಗಳು ವಹಿಸಬೇಕಾದ ಪಾತ್ರದ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ತುಂಬೆ ಜುಮಾ ಮಸೀದಿ, ಶಂಸುಲ್ ಉಲೆಮಾ ಇಸ್ಲಾಮಿಕ್ ಸೆಂಟರ್ ತುಂಬೆ, ಸುನ್ನಿ ಕಲ್ಚರಲ್ ಸೆಂಟರ್ ತುಂಬೆ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತುಂಬೆ, ರೆಡ್ ರೋಸ್ ಅಸೋಸಿಯೇಶನ್ ತುಂಬೆ, ಬಗ್ದಾದ್ ಫ್ರೆಂಡ್ಸ್ ಗ್ರೂಪ್ ತುಂಬೆ, ಡೈಮಾಂಡ್ ಹೈಟ್ಸ್ ಅಸೋಸಿಯೇಶನ್ ತುಂಬೆಯ ಪದಾಧಿಕಾರಿಗಳು, ಊರಿನ ಪ್ರಮುಖರು, ಹಿರಿಯರು ಉಪಸ್ಥಿತರಿದ್ದರು.
ಕ್ರೆಸೆಂಟ್ ಯಂಗ್ ಮೆನ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಸಿರಾಜುದ್ದೀನ್ ತುಂಬೆ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಆರೀಫ್ ತುಂಬೆ ಸಹಕರಿಸಿದರು.
Be the first to comment on "ತುಂಬೆ: ‘ಮಾದಕ ಬದುಕು ಭಯಾನಕ’ ಅಭಿಯಾನದ ನೋಟಿಸ್ ಬಿಡುಗಡೆ"