ತುಂಬೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ವೆಂಟೆಡ್ಡ ಡ್ಯಾಂನಿಂದಾಗಿ ಮುಳುಗಡೆಯಾಗುವ ಸಂತ್ರಸ್ಥ ರೈತರಿಗೆ ಸೂಕ್ತ ಪರಿಹಾರ ನೀಡದೆ ನೀರು ಶೇಖರಿಸಿರುವುದನ್ನು ಖಂಡಿಸಿ, ಕರಾವಳಿ ಭಾಗದ ರೈತರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವನ್ನು ಎಚ್ಚರಿಸುವಂತೆ ಒತ್ತಾಯಿಸಿ ರೈತ ನಾಯಕ,ಮಾಜಿ ಮುಖ್ಯಮಂತ್ರಿ ,ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ಎಸ್ ಯಡಿಯೂರಪ್ಪರವರನ್ನು ಭೇಟಿಯಾದ ಬಂಟ್ವಾಳ ಬಿಜೆಪಿ ಕ್ಷೇತ್ರ ಸಮಿತಿ ಮನವಿ ಸಲ್ಲಿಸಿತು.
ತುಂಬೆ ಡ್ಯಾಮ್‍ನಲ್ಲಿ ನೀರು ಶೇಖರಿಸುತ್ತಿರುವುದರಿಂದ ಅಕ್ಕಪಕ್ಕದ ಕೃಷಿಕರ ನೂರಾರು ಎಕರೆ ಭೂಮಿ ಮುಳುಗಡೆಯಾಗುತ್ತಿದೆ. ಆದರೆ ಕೃಷಿಕರ ಮಾತಿಗೆ ಯಾವುದೇ ಬೆಲೆ ಕೊಡದೆ ಸತಾಯಿಸಲಾಗುತ್ತಿದ್ದು, ನಿದ್ದೆಯಲ್ಲಿರುವ ರಾಜ್ಯ ಸರಕಾರವನ್ನು ಎಚ್ಚರಿಸುವಂತೆ, ಈ ಸಂದರ್ಭದಲ್ಲಿ ನಿಯೋಗ ಅವರನ್ನು ಒತ್ತಾಯಿಸಿದೆ. ಯಡಿಂಯೂರಪ್ಪರವರ ಭೇಟಿಯಾದ ನಿಯೋಗದಲ್ಲಿ ಬಿಜೆಪಿ ಪ್ರಮುಖ ರಾಜೇಶ್ ನಾೈಕ್ ಉಳಿಪ್ಪಾಡಿ, ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ,ಮಾಜಿ ಶಾಸಕರುಗಳಾದÀ ಎ ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ,ಬಿಜೆಪಿ ಪ್ರಮುಖರಾದ ಉದಯ ಕುಮಾರ್ ರಾವ್, ಜಿ.ಆನಂದ, ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಪ್ರಕಾಶ್ ಅಂಚನ್, ಮಹಾಬಲ ಶೆಟ್ಟಿ, ಗೋವಿಂದ ಪ್ರಭು, ನಂದರಾಮ ರೈ, ರಮಾನಾಥ ರಾಯಿ, ಗಣೇಶ್ ರೈ ಮಾಣಿ, ಅಬ್ದುಲ್ ರಝಾಕ್, ವಸಂತ ಅಣ್ಣಳಿಕೆ, ಪುಷ್ಪರಾಜ ಚೌಟ ಮಾಣಿ, ವಜ್ರನಾಥ ಕಲ್ಲಡ್ಕ, ಸಂತೋಷ್ ಕುಮಾರ್ ರಾಯಿ, ಪುರುಷೋತ್ತಮ ಶೆಟ್ಟಿ , ಗುರುದತ್ ನಾಯಕ್, ಮನೋಜ್ ಕಳ್ಳಿಗೆ ಉಪಸ್ಥಿತರಿದ್ದರು
Be the first to comment on "ತುಂಬೆ ಡ್ಯಾಮ್: ಬಂಟ್ವಾಳ ಬಿಜೆಪಿ ಮನವಿ"