ಜಾತಿ ಧರ್ಮಗಳ ಅಂತರವನ್ನು ಮೀರಿ ಮನುಷ್ಯ ಮನುಷ್ಯನನ್ನು ಉಳಿಸುವ ದೇವರು ಅಂದರೆ ಅದು ಅನ್ನ. ಅನ್ನ ಛತ್ರ ಹಾಗೂ ಸಮುದಾಯ ಭವನ ನಿರ್ಮಾಣದಂಥ ಸತ್ಕಾರ್ಯದಲ್ಲಿ ಎಲ್ಲರೂ ಜನರು ಜೊತೆಯಾಗುತ್ತಿರುವುದೇ ಸಂತೋಷ ಎಂದು ಸಚಿವ ರಮಾನಾಥ ರೈ ಅಭಿಪ್ರಾಯಪಟ್ಟರು.
ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನ ಹಾಗೂ ಅನ್ನಛತ್ರದ ಶಿಲಾನ್ಯಾಸ ಸಮಾರಂಭದಲ್ಲಿ ಅವರು ಮಾತಾನಾಡಿ, ಈಗಾಗಲೇ ಅನೇಕ ಸಮಾಜಮುಖಿ ಕೆಲಸಗಳು ಜ್ಯೋತಿಗುಡ್ಡೆ ಕ್ಷೇತ್ರದ ವತಿಯಿಂದ ನಡೆಯುತ್ತಿವೆ. ಯೋಜಿತ ಕಟ್ಟಡ, ಅನ್ನಛತ್ರದ ಮೂಲಕ ಬಹಳಷ್ಟು ಜನರಿಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ಪಟ್ಟರು.
ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಯವರ ವೈದಿಕ ವಿಧಿವಿಧಾನಗಳೊಂದಿಗೆ ಶ್ರೀ ದುರ್ಗಾಪರಮೇಶ್ವರೀ ಸೇವಾ ಟ್ರಸ್ಟ್‍ನ ಗೌರವಾಧ್ಯಕ್ಷರಾದ ಗುಲಾಬಿ ಅಮ್ಮನವರು ಶಿಲಾನ್ಯಾಸ ನೆರವೇರಿಸಿದರು.
ಸಂಸದ ನಳಿನ್‍ಕುಮಾರ್ ಕಟೀಲ್, ಸಚಿವ ಯು.ಟಿ. ಖಾದರ್, ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಜಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಕೆ. ರವೀಂದ್ರ ಕಂಬಳಿ, ಭೂಬ್ಯಾಂಕ್ ನಾಮ ನಿರ್ದೇಶಿತ ಸದಸ್ಯ ಪ್ರಕಾಶ್ ಶೆಟ್ಟಿ, ದೇವಂದಬೆಟ್ಟು ಶ್ರೀ ಲಕ್ಷ್ಮೀವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀಶೈಲ ತುಂಬೆ, ಉದ್ಯಮಿಗಳಾದ ಅಶೋಕ್ ಕುಮಾರ್ ರೈ, ಹರೀಶ್ ಬೊಟ್ಟಾರಿ, ತಾಪಂ ಅಧ್ಯಕ್ಷ ಚಂದ್ರಹಾಸ್ ಕರ್ಕೇರಾ, ಸದಸ್ಯರಾದ ಶಿವಪ್ರಸಾದ್ ಕನಪಾಡಿ, ಗಣೇಶ್ ಸುವರ್ಣ, ತುಂಬೆ ಗ್ರಾಪಂ ಅಧ್ಯಕ್ಷೆ ಹೇಮಲತಾ ಪೂಜಾರಿ, ಬ್ರಹ್ಮರಕೂಟ್ಲು ಶ್ರೀ ಮೂಕಾಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ಶಶಿಧರ, ಸುಕುಮಾರ್ ದೇಮುಂಡೆ, ತಾರಾನಾಥ ಕೊಟ್ಟಾರಿ, ನಾರಾಯಣ ನಾಯ್ಕ, ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಮೇಶ್ ರೆಂಜೋಡಿಯವರ ಸ್ವಾಗತಿಸಿದರು. ಶಂಕರ್ ಸುವರ್ಣರು ನಿರೂಪಿಸಿದರು. ಉದಯ ಕುಮಾರ್ ಜ್ಯೋತಿಗುಡ್ಡೆಯವರ ವಂದಿಸಿದರು.
Be the first to comment on "ಜ್ಯೋತಿಗುಡ್ಡೆ ಸಮುದಾಯ ಭವನ ಅನ್ನಛತ್ರದ ಶಿಲಾನ್ಯಾಸ"