ಶ್ರೀ ಕನಪಾಡಿತ್ತಾಯ ಹಾಗೂ ಪರಿವಾರ ದೈವಗಳ ಧರ್ಮನೇಮ ಸಮಿತಿ ಮಜಿಲ ಗುತ್ತು ತುಂಬೆ ಇದರ ಆಶ್ರಯದಲ್ಲಿ ಜ.18 ರಿಂದ ಜ. 22ರವರೆಗೆ ಮಜಿಲಗುತ್ತು ಧರ್ಮಚಾವಡಿಯಲ್ಲಿ ನಡೆಯಲಿರುವ ಧರ್ಮನೇಮ ಹಾಗೂ ಕುಟುಂಬ ದೈವಗಳ ಗಗ್ಗರ ಸೇವೆಯ ಆಮಂತ್ರಣ ಪತ್ರ ಬಿಡುಗಡೆ ಬುಧವಾರ ಬೆಳಿಗ್ಗೆ ಮಜಿಲಗುತ್ತುವಿನಲ್ಲಿ ನಡೆಯಿತು.
ಸಮಿತಿಯ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಸಭಾ ಕಾರ್ಯಕ್ರಮ ಉದ್ಘಾಟಿಸಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಸಮಿತಿಯ ಪ್ರಧಾನ ಸಂಚಾಲಕ ಪ್ರಕಾಶ್ ಅಂಚನ್ ಮಾತನಾಡಿ ದೈವ ಕಾರ್ಯದಲ್ಲಿ ಭಾಗವಹಿಸಲು ನಮಗೆಲ್ಲರಿಗೂ ಅವಕಾಶ ಸಿಕ್ಕಿರುವುದು ಪೂರ್ವ ಜನ್ಮದ ಫಲ ಎಂದರು.
ಮಾಜಿ ಶಾಸಕ ರುಕ್ಮಯ ಪೂಜಾರಿ ಮಾತನಾಡಿ ಇದು ಒಂದು ಕುಟುಂಬಕ್ಕೆ ಸಂಬಂಧಪಟ್ಟ ಧರ್ಮನೇಮವಾಗಿದ್ದರೂ ಎಲ್ಲಾ ವರ್ಗದವರು ಸೇರಿಕೊಂಡು ಕಾಯೋನ್ಮುಖರಾಗಿರುವುದು ವಿಶೇಷ ಎಂದರು. ಕಾರ್ಯಧ್ಯಕ್ಷ ಕೆ. ಸಂಜೀವ ಪೂಜಾರಿ, ಜಿ.ಪಂ.ಸದಸ್ಯ ರವೀಂದ್ರ ಕಂಬಳಿ, ಕಳ್ಳಿಗೆ ಗ್ರಾ.ಪಂ.ಉಪಾಧ್ಯಕ್ಷ ಪರುಷ ಎನ್. ಸಾಲ್ಯಾನ್, ಪ್ರಕಾಶ್ ಚಂದ್ರ ರೈ ದೇವಸ್ಯ, ಪತ್ರಕರ್ತ ಗೋಪಾಲ ಅಂಚನ್, ಕೃಷ್ಣಪ್ಪ ಪೂಜಾರಿ ದೋಟ ಮಾತನಾಡಿದರು. ಸಮಿತಿ ಕೋಶಾಧಿಕಾರಿ ಗಣೇಶ್ ಸುವರ್ಣ, ಮಜಿಲಗುತ್ತು ಮನೆಯ ಯಜಮಾನ ರಾಮದಾಸ ಕೋಟ್ಯಾನ್, ತುಂಬೆ ಗ್ರಾ.ಪಂ.ಅಧ್ಯಕ್ಷೆ ಹೇಮಲತಾ ಪೂಜಾರಿ, ಚಂದ್ರಶೇಖರ ಗಾಂಭೀರ್, ಬಾಬು ಕೆ.ವಿ., ದಿವಾಕರ ಪಂಬದಬೆಟ್ಟು, ಪ್ರಕಾಶ್ ಶೆಟ್ಟಿ ತುಂಬೆ ಹಾಜರಿದ್ದರು.ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಕೋಟ್ಯಾನ್ ಸ್ವಾಗತಿಸಿ, ಚಂದಪ್ಪ ಅಂಚನ್ ಪ್ರಾಸ್ತವಿಕವಾಗಿ ಮಾತನಾಡಿದರು. ಯೋಗೀಶ್ ವಂದಿಸಿದರು.
Be the first to comment on "ಧರ್ಮನೇಮ ಹಾಗೂ ಕುಟುಂಬ ದೈವಗಳ ಗಗ್ಗರ ಸೇವೆಯ ಆಮಂತ್ರಣ ಪತ್ರ ಬಿಡುಗಡೆ"