ಅಳಿಕೆ ಜೆಡ್ಡು ಪದ್ಮಗಿರಿ ಶ್ರೀಆದಿ ಧನ್ವಂತರಿ ಕ್ಷೇತ್ರದ ಶ್ರೀಧನ್ವಂತರಿ ದೇವರ ನಿಧಿಕಲಶ ಡಿ.22ರಂದು ನಡೆಯುವ ಹಿನ್ನಲೆಯಲ್ಲಿ 7 ಗ್ರಾಮಗಳ 41 ಕ್ಷೇತ್ರಗಳಿಗೆ ನಿಧಿಕಲಶ ಮೆರವಣಿಗೆ ಮಂಗಳವಾರ ನಡೆಯಿತು.
ನೆಕ್ಕಿತಪುಣಿ ಅಳಿಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಿಧಿ ಕಲಶ ಪೂಜೆನಡೆದು ಮೆರವಣಿಗೆಗೆ ಚಾಲನೆ ನೀಡಲಾಯಿತು. ಮಾಣಿಲ ಶ್ರೀ ಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು, ಬಾಳೆಕೋಡಿ ಶ್ರೀ ಶಿಲಾಂಜನ ಕ್ಷೇತ್ರದಲ್ಲಿ ಶ್ರೀ ಶಶಿಕಾಂತಮಣಿ ಸ್ವಾಮೀಜಿ ಅವರು, ಕಣಿಯೂರು ಶ್ರೀ ಶ್ರೀ ಚಾಮುಂಡೇಶ್ವರೀದೇವೀ ಕ್ಷೇತ್ರದಲ್ಲಿ ಶ್ರೀ ಮಹಾಬಲ ಸ್ವಾಮೀಜಿ ಅವರು, ವಿಟ್ಲಮಹತೋಭಾರ ಶ್ರೀ ಪಂಚಲಿಂಗೇಶ್ವರ ಕ್ಷೇತ್ರದಲ್ಲಿ ಜನಾರ್ದನ ವರ್ಮ ಅವರು, ಬೈರಿಕಟ್ಟೆ ಶ್ರೀ ಅಶ್ವತ್ಥ ನಾರಾಯಣ ಭಜನಾ ಮಂದಿರದಲ್ಲಿ ಶಿವರಾಮ ರಾವ್ ನಿಧಿ ಕಲಶ ಪೂಜೆಯನ್ನು ನೆರವೇರಿಸಿದರು.
ಪಾದೆಚ್ಚಾರು ಶ್ರೀ ಸ್ಕಂದಗಿರಿ ಸುಬ್ರಹ್ಮಣ್ಯ ಭಜನಾ ಮಂದಿರ, ಆನೆಪದವು ಶ್ರೀ ಮಹಾಮಾಯಿ ಭಜನಾ ಮಂದಿರ, ಉಕ್ಕುಡ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ, ವಿಟ್ಲ ಶ್ರೀ ಭಗವತಿ ದೇವಸ್ಥಾನ, ವಿಟ್ಲ ವಿಠಲ ಭಜನಾ ಮಂದಿರ, ವಿಟ್ಲ ಶ್ರೀ ಕೃಷ್ಣ ಧನ್ವಂತರಿ ಮಂದಿರ, ವಿಟ್ಲ ಶ್ರೀ ಅನಂತೇಶ್ವರ ದೇವಸ್ಥಾನ, ವಿಟ್ಲ ಶ್ರೀ ಅಯ್ಯಪ್ಪ ದೇವಸ್ಥಾನ, ವಿಟ್ಲ ಶ್ರೀ ಚಂದ್ರನಾಥ ಜೈನ ಬಸದಿ ಹಾಗೂ ವಿಟ್ಲ ಪೇಟೆಯಲ್ಲಿ ಮೆರವಣಿಗೆ, ಕನ್ಯಾನ ಕುಟ್ಟಿತ್ತಡ್ಕ ವಿಷ್ಣಮೂರ್ತಿ ದೈವಸ್ಥಾನ, ಕನ್ಯಾನ ಶ್ರೀ ಮಲರಾಯ ದೈವಸ್ಥಾನ, ಕನ್ಯಾನ ಶ್ರೀ ರಾಘವೇಂದ್ರ ಭಜನಾ ಮಂದಿರ, ಮಿತ್ತನಡ್ಕ ಶ್ರೀ ಮಲರಾಯ ದೈವಸ್ಥಾನ, ಪದ್ಯಾಣ ಶ್ರೀ ಕಲ್ಲುರ್ಟಿ ದೈವಸ್ಥಾನ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪದ್ಯಾಣ ಭಜನಾ ಸೇವೆ, ವಗೆನಾಡು ಸುಬ್ರಾಯ ದೇವಸ್ಥಾನ ಭಜನಾ ಸೇವೆ ಹಾಗೂ ಶ್ರೀ ದೇವರಿಗೆ ಮಹಾಮಂಗಳಾರತಿ ನಡೆಯಿತು.
ದೇಗುಲ ನಿರ್ಮಾಣ ಸಮಿತಿ ಸಂಚಾಲಕ ಕೋಡಿಜಾಲು ಗೋವಿಂದ ಭಟ್, ಶ್ರೀ ಧನ್ವಂತರ ಸೇವಾ ಸಮಿತಿಯ ಅಧ್ಯಕ್ಷ ಜೆಡ್ಡು ನಾರಾಯಣ ಭಟ್, ಕೊಡಂದೂರು ಸುಬ್ರಹ್ಮಣ್ಯ ಶಾಸ್ತ್ರಿ, ವಿಶ್ವೇಶ್ವರ ಭಟ್ ಒಳಬೈಲು, ಶಿವಪ್ರಕಾಶ್ ಮುಳಿಯಾಲ, ನೀಲಪ್ಪ ಗೌಡ ರೆಂಜಾಡಿ, ಹರೀಶ್ ಶೆಟ್ಟಿ ರೆಂಜಾಡಿ, ಆನಂದ ನಾಯ್ಕ ಜೆಡ್ಡು, ಸದಾಶಿವ ಶೆಟ್ಟಿ ನೆಕ್ಕಿತ್ತಪುಣಿ, ನಾಗರಾಜ ನಾಯ್ಕ ಜೆಡ್ಡು, ಈಶ್ವರ ಗೌಡ ಬೈರಿಕಟ್ಟೆ, ಚಂದ್ರಶೇಖರ ಕುಡಿಯರಮೂಲೆ, ವೆಂಕಟಕೃಷ್ಣ ಅಟ್ಟೆಪ್ಪಿಲ, ಡಾ. ಜೆಡ್ಡು ಗಣಪತಿ ಭಟ್, ಡಾ. ಮನರೋಮಾ ಜಿ. ಭಟ್ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಧನ್ವಂತರಿ ದೇವರ ನಿಧಿಕಲಶ ಮೆರವಣಿಗೆ"