ಖಿದ್ ಮತುಲ್ ಇಸ್ಲಾಮ್ ಅಸೋಸಿಯೇಶನ್ ಫರಂಗಿಪೇಟೆ ಮತ್ತು ಮುಹಿಯುದ್ದೀನ್ ಜುಮಾ ಮಸೀದಿ ಫರಂಗಿಪೇಟೆ ಆಶ್ರಯದಲ್ಲಿ 10 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ 2017ರ ಫೆಬ್ರವರಿ 26ರಂದು ಫರಂಗಿಪೇಟೆಯಲ್ಲಿ ನಡೆಯಲಿದ್ದು ಅರ್ಹ ಫಲಾನುಭವಿಗಳಿಂದ ಅರ್ಜಿ ಅಹ್ವಾನಿಸಿದೆ.
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾಗುವ ವಧುವಿಗೆ 5 ಪವನ್ ಚಿನ್ನಾಭರಣ, 20 ಸಾವಿರ ರೂಪಾಯಿ ನಗದು, ಬುರ್ಖಾ, ಕೈ ಗಡಿಯಾರ ಹಾಗೂ ವರನಿಗೆ ವಸ್ತ್ರ, ಕೈಗಡಿಯಾರವನ್ನು ಉಚಿತವಾಗಿ ನೀಡಲಾಗುವುದು.
ಈ ಕಾರ್ಯಕ್ರಮದಲ್ಲಿ ವಿವಾಹವಾಗಳು ಇಚ್ಚಿಸುವವರು 2017ರ ಜನವರಿ 31ರ ಒಳಗೆ ಖಿದ್ ಮತುಲ್ ಇಸ್ಲಾಮ್ ಅಸೋಸಿಯೇಶನ್ ಫರಂಗಿಪೇಟೆ ಅಥವಾ ಮುಹಿಯುದ್ದೀನ್ ಜುಮಾ ಮಸೀದಿ ಫರಂಗಿಪೇಟೆ ಇದರ ಸಂಬಂಧಿಸಿದ ಪದಾಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ. ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲನೆ ನಡೆಸಿದ ಬಳಿಕ ಅರ್ಹ 10 ಜೋಡಿ ಫಲಾನುಭವಿಗಳನ್ನು ಸಂಘಟಕರು ಆಯ್ಕೆ ಮಾಡಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9845815033, 9916072059 ಸಂಪರ್ಕಿಸುವಂತೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಫ್.ಉಮರ್ ಫಾರೂಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Be the first to comment on "ಫರಂಗಿಪೇಟೆ: ಸಾಮೂಹಿಕ ವಿವಾಹಕ್ಕೆ ಅರ್ಜಿ ಅಹ್ವಾನ"