ಕಪ್ಪು ಬಿಳಿ ಮಾಡಲು ಮಾರ್ಚ್ ಕೊನೇವರೆಗೆ ಅವಕಾಶ

ನಿಮ್ಮಲ್ಲಿ ತೆರಿಗೆ ಪಾವತಿಸದೇ ಬಾಕಿ ಇಟ್ಟ ಹಣ ಇದ್ದರೆ ಟೆನ್ಶನ್ ಬೇಡ. ಕಪ್ಪು ಬಿಳಿ ಮಾಡಿಕೊಳ್ಳಲು ಇದೆ ಮಾರ್ಚ್ 31, 2017ರವರೆಗೆ ಅವಕಾಶ!

ಕೇಂದ್ರ ಸರ್ಕಾರ ಕಳೆದ ತಿಂಗಳು ಶೇ.50 ತೆರಿಗೆ ಕಟ್ಟಿ ಕಪ್ಪು ಬಿಳಿ ಮಾಡಿಕೊಳ್ಳಲು ರೂಪಿಸಿದ್ದ ಹೊಸ ಕಾನೂನು ಪ್ರಕಾರ ಕಪ್ಪು ಬಿಳಿ ಮಾಡಿಕೊಳ್ಳಲು ಕಪ್ಪು ಕುಳಗಳಿಗೆ ಮಾರ್ಚ್ 31, 2017ರವರೆಗೆ ಅವಕಾಶ ನೀಡಿದೆ.

ಜಾಹೀರಾತು

ಕಪ್ಪು ಹಣ ಘೋಷಣೆ ಯೋಜನೆಯಡಿ ಕನಿಷ್ಠ ಶೇ.50 ರಷ್ಟು ತೆರಿಗೆ ಹಾಗೂ ದಂಡ ಕಟ್ಟಿ ತಮ್ಮ ಕಪ್ಪು ಹಣವನ್ನು ಘೋಷಿಸಿಕೊಳ್ಳಬಹುದು. ಈ ಯೋಜನೆಯಡಿ ಕಪ್ಪು ಹಣ ಘೋಷಿಸಿಕೊಳ್ಳುವವರ ವಿವರವನ್ನು ಗೌಪ್ಯವಾಗಿಡಲಾಗುವುದು. ಮತ್ತು ಈ ಮಾಹಿತಿಯನ್ನು ಪ್ರಾಸಿಕ್ಯೂಷನ್ ಗಾಗಿ ಬಳಿಸಿಕೊಳ್ಳುವುದಿಲ್ಲ.

ಜನರೂ ಕಪ್ಪು ಹಣದ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಬಹುದು ಎಂದ ಅವರು, ಈ ಸಂಬಂಧ ಇ-ಮೇಲ್ ಐಡಿ ನೀಡಲಾಗಿದ್ದು, blackmoneyinfo@incometax.gov.in ಗೆ ಮಾಹಿತಿ ನೀಡಬಹುದು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿ ಮೂರು ವಾರಗಳ ನಂತರ ವಿತ್ತ ಸಚಿವ ಅರುಣ್‌ ಜೇತ್ಲಿ ಅವರ ಆದಾಯ ತೆರಿಗೆ ಕಾಯಿದೆಯ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ  ಮಂಡಿಸಿದ್ದರು.

ಜಾಹೀರಾತು

 

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಕಪ್ಪು ಬಿಳಿ ಮಾಡಲು ಮಾರ್ಚ್ ಕೊನೇವರೆಗೆ ಅವಕಾಶ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*