ಬಂಟ್ವಾಳ: ಕೆಲಸದ ಒತ್ತಡದ ನಡುವೆಯೂ ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಪೊಲೀಸರು ಮತ್ತು ಪತ್ರಕರ್ತರು ಒಂದು ನಾಣ್ಯದ ಎರಡು ಮುಖಗಳಂತೆ ಒತ್ತಡದ ನಡುವೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಮಾಜ ಪ್ರೋತ್ಸಾಹ ನೀಡಿದಾಗ ಮಾತ್ರ ಮತ್ತಷ್ಟು ಜನಸ್ನೇಹಿಯಾಗಿ ಅವರು ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಬಂಟ್ವಾಳ ಡಿವೈಎಸ್ಪಿ ರವೀಶ್ ಸಿ.ಆರ್. ಹೇಳಿದ್ದಾರೆ.
ಭಾರತೀಯ ವೈದ್ಯಕೀಯ ಸಂಘ (ಐಎಂಎ) ತಾಲೂಕು ಘಟಕ ವತಿಯಿಂದ ಲಯನ್ಸ್ ಮತ್ತು ಲಯನೆಸ್ ಕ್ಲಬ್ ಹಾಗೂ ಲಯನ್ಸ್ ಸೇವಾ ಟ್ರಸ್ಟಿನ ಸಹಭಾಗಿತ್ವದಲ್ಲಿ ಪೊಲೀಸ್ ಮತ್ತು ಪತ್ರಕರ್ತರಿಗಾಗಿ ಬಿ.ಸಿ.ರೋಡ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಐಎಂಎ ತಾಲೂಕು ಘಟಕ ಅಧ್ಯಕ್ಷ ಡಾ.ಅಶ್ವಿನ್ ಬಾಳಿಗಾ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಮಾನಸಿಕ ತಜ್ಞೆ ಡಾ.ಕ್ಯಾರೊಲಿನ್ ಪಿ.ಡಿಸೋಜ, ಯೋಗಗುರು ಡಾ.ರಘುವೀರ್ ಅವಧಾನಿ, ಹೃದ್ರೋಗ ತಜ್ಞ ವೈದ್ಯ ಡಾ.ನರಸಿಂಹ ಪೈ, ಡಾ.ಅಭಿಷೇಕ್ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆ ಸಹಿತ ಮಾಹಿತಿ ನೀಡಿದರು.
ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಜಯಂತ ಶೆಟ್ಟಿ, ಜಿಲ್ಲಾ ಸಂಯೋಜಕ ದಾಮೋದರ ಬಿ.ಎಂ., ಅಧ್ಯಕ್ಷ ಲಕ್ಷ್ಮಣ ಕುಲಾಲ್, ವೈದ್ಯಕೀಯ ಸಂಘದ ಕೋಶಾಧಿಕಾರಿ ಡಾ.ಕೃಷ್ಣಮೂರ್ತಿ ಭಟ್, ಪ್ರಮುಖರಾದ ಡಾ.ವಸಂತ ಬಾಳಿಗಾ, ಡಾ.ಬಿ.ವಿ.ಕಾಮತ್, ಬಂಟ್ವಾಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್, ನಗರ ಠಾಣಾಧಿಕಾರಿ ನಂದ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಐಎಂಎ ತಾಲೂಕು ಘಟಕ ಅಧ್ಯಕ್ಷ ಡಾ.ಅಶ್ವಿನ್ ಬಾಳಿಗಾ ಸ್ವಾಗತಿಸಿದರು, ಕಾರ್ಯದರ್ಶಿ ಡಾ. ಎಂ.ಎಸ್. ಮಹೇಶ್ ವಂದಿಸಿದರು.
Be the first to comment on "ಪೊಲೀಸ್, ಪತ್ರಕರ್ತರಿಗೆ ಐಎಂಎ ಉಚಿತ ವೈದ್ಯಕೀಯ ಶಿಬಿರ"