ವಿಟ್ಲ: ಖಾಸಗಿ ಬಸ್ಸೊಂದು ರಸ್ತೆ ಬದಿಯ ತಟ್ಟಿ ಅಂಗಡಿಗೆ ಡಿಕ್ಕಿ ಹೊಡೆದು, ಬಳಿಕ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿಯಾಗಿ ಓರ್ವ ಗಾಯಗೊಂಡ ಘಟನೆ ಮಂಗಳವಾರ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಜಂಕ್ಷನ್‌ನಲ್ಲಿ ನಡೆದಿದೆ.
ಉಪ್ಪಿನಂಗಡಿ ಸಮೀಪದ ಇಳಂತಿಲ ನಿವಾಸಿ ರಾಮಕೃಷ್ಣ (34) ಗಾಯಗೊಂಡ ವ್ಯಕ್ತಿ.
ತಳ್ಳು ಗಾಡಿಯ ತಟ್ಟಿ ಅಂಗಡಿ ಯಾಕುಬು ಎಂಬವರಿಗೆ ಸೇರಿದ್ದಾಗಿದ್ದು, ಅವರು ರಾತ್ರಿ 2 ಗಂಟೆಯಿಂದ ಬೆಳಿಗ್ಗೆ 7 ಗಂಟೆ ವರೆಗೆ ಇಲ್ಲಿ ಚಹ ಮಾರಾಟ ಮಾಡುತ್ತಿರುತ್ತಾರೆ. ಘಟನೆ ನಡೆಯುವುದಕ್ಕಿಂತ 10 ನಿಮಿಷ ಮೊದಲು ಇಲ್ಲಿಂದ ತೆರಳಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಯಾವಾಗಲೂ 9 ಗಂಟೆಗೆ ಸುಮಾರಿಗೆ ಈ ಅಂಗಡಿ ಸಮೀಪ ಪ್ರಯಾಣಿಕರು ಬಸ್ಸಿಗಾಗಿ ಕಾಯುತ್ತಿರುತ್ತಾರೆ. ಮೊದಲೇ ಈ ಘಟನೆ ನಡೆದಿದ್ದರಿಂದ ಸಂಭವಿಸಲಿದ್ದ ಬಾರೀ ದುರಂತವೊಂದು ತಪ್ಪಿತು.
ಏನಾಯಿತು:
ಮಾಣಿ ಜಂಕ್ಷನ್‌ನಲ್ಲಿ ನಿಂತಿದ್ದ ಲಾರಿ ಏಕಾಏಕಿಯಾಗಿ ಸೂಚನೆ ಇಲ್ಲದೆ ಹಿಂದೆ ಸಂಚರಿಸಿದ ಸಮಯಕ್ಕ ಉಪ್ಪಿನಂಗಡಿ ಕಡೆಯಿಂದ ಮಂಗಳೂರಿಗೆ ಹೋಗುತ್ತಿದ್ದ ಖಾಸಗ ಬಸ್ ಹಿಂದಿನಿಂದ ಆಗಮಿಸಿದೆ. ಲಾರಿ ಹಿಂದೆ ಚಲಿಸುವುದು ಹತ್ತಿರ ತಲುಪಿದಾಗ ತಪ್ಪಿಸಲು ಯತ್ನಿಸಿದರೂ ಬಸ್ಸಿ ಮುಖ ಲಾರಿಯ ಹಿಂಬಾಗಕ್ಕೆ ತಗುಲಿದೆ. ಹೆಚ್ಚಿನ ಅವಘಡ ತಪ್ಪಿಸಲು ಬಸ್ ಚಾಲಕ ಪ್ರಯತ್ನಿಸಿದಾಗ ನಿಯಂತ್ರಣ ಕಳೆದುಕೊಂಡಿತು. ಈ ಸಂದರ್ಭ ರಸ್ತೆಯ ಬಲಬಾಗದಲ್ಲಿದ್ದ ತಳ್ಳುಗಾಡಿಯ ತಟ್ಟಿ ಅಂಗಡಿಗೆ ಡಿಕ್ಕಿಯಾದ ಬಸ್ಸು ಮುಂಭಾಗಕ್ಕೆ ಚಲಿಸಿ ಮರವೊಂದಕ್ಕೆ ಡಿಕ್ಕಿಯಾಗಿದೆ. ಇದರಿಂದ ಬಸ್ಸಿನ ಮುಂಭಾಗ ಸಂಪೂರ್ಣ ಜಖಂ ಗೊಂಡಿದ್ದು, ತಟ್ಟಿ ಅಂಗಡಿಯೂ ಸಂಪೂರ್ಣ ಹಾನಿಯಾಗಿದೆ.
Be the first to comment on "ತಟ್ಟಿ ಅಂಗಡಿಗೆ ಬಸ್ ಡಿಕ್ಕಿ, ಓರ್ವನಿಗೆ ಗಾಯ"