ಬಂಟ್ವಾಳ:ಸಾಲೆತ್ತೂರು ಜಮಾಅತ್ತ್ ಗಲ್ಫ್ ಕೋಪರೇಷನ್ ಕೌನ್ಸಿಲ್ ಇದರ ವತಿಯಿಂದ ನೆಬಿ ಜನ್ಮದಿನ ಪ್ರಯುಕ್ತ ಅಂತರಾಷ್ಟ್ರೀಯ ಮಟ್ಟದ ಕ್ವಿಜ್ ಸ್ವರ್ಧೆಯನ್ನು ಆಯೋಜಿಸಲಾಗಿತ್ತು.
ನಂತರ ಈ ಸ್ವರ್ಧೆಯಲ್ಲಿ 3 ಜನ ಸದಸ್ಯರಾದ ಹನೀಫ್ ಸಖಾಫಿ ಸಾಲೆತ್ತೂರು, ಸುಲೈಮಾನ್ ಕಟ್ಟೆ, ಅಬ್ದುಲ್ ಖುದ್ದೂಸ್ ಎ.ಕೆ ಸಮಾನ ಅಂಕ ಪಡೆದು ಸಮವಾದರು. ಈ ರೀತಿಯಲ್ಲಿ ಮುಂದುವರಿದಾಗ ಭಾಗ್ಯ ಶಾಲಿಯನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು. ಸಾಲೆತ್ತೂರು ಜಮಾಅತ್ತ್ ಗಲ್ಫ್ ಕೋಪರೇಷನ್ ಕೌನ್ಸಿಲ್ ಇದರ ಕ್ವಿಜ್ ಸ್ವರ್ಧೆಯ ಭಾಗ್ಯಶಾಲಿಯಾಗಿ ಅಬ್ದುಲ್ ಖುದ್ದೂಸ್ ಎ.ಕೆ ಯವರು ಹೊರ ಹೊಮ್ಮಿದರು. ಬಹುಮಾನವನ್ನು ಅವರ ಕುಟುಂಬ ಸದಸ್ಯರಿಗೆ ಬದ್ರಿಯಾ ಜುಮಾ ಮಸೀದಿ ಸಾಲೆತ್ತೂರು ಇದರ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಸ್ತಾಂತರಿಸಲಾಯಿತು.
ಬಹುಮಾನ ವಿತರಣೆಯನ್ನು ಸಾಲೆತ್ತೂರು ಜಮಾಹತ್ತ್ ಖತೀಬರಾದ ಅಬೂಬಕ್ಕರ್ ಮದನಿ, ಇಬ್ರಾಹಿಂ ಕಟ್ಟೆ, ಅಸ್ರಫ್ ಎಸ್.ಟಿ, ಮಹಮ್ಮದ್ ಕಟ್ಟೆಯವರು ಜೊತೆಗೂಡಿ ಹೈದರ್ ಎ.ಕೆ ಅವರ ಮೂಲಕ ಅಬ್ದುಲ್ ಖುದ್ದೂಸ್ ಅವರ ಕುಟುಂಬಕ್ಕೆ ಅಸ್ತಾಂತರಿಸಲಾಯಿತು.
Be the first to comment on "ಅಂತರಾಷ್ಟ್ರೀಯ ಮಟ್ಟದ ಕ್ವಿಝ್ ಸ್ವರ್ಧೆ"