ಬಂಟ್ವಾಳ: ಸಚಿವ ಬಿ.ರಮಾನಾಥ ರೈ ಅವರ ಡಿ.10ರಿಂದ 13ನೇ ತಾರೀಖಿನವರೆಗಿನ ಪ್ರವಾಸ ವಿವರ ಹೀಗಿದೆ.
10ರಂದು ಬೆಳಗ್ಗೆ 10ಕ್ಕೆ ಕುದ್ಮಾರು ದ.ಕ.ಜಿಪಂ ಶಾಲೆಯಲ್ಲಿ ಪುತ್ತೂರು ತಾಲೂಕು ಯುವಜನ ಮೇಳ ಉದ್ಘಾಟನಾ ಸಮಾರಂಭದಲ್ಲಿ ಭಾಗಿ. 11 ಗಂಟೆಗೆ ಸುಳ್ಯ ಗೌಡ ಸಮುದಾಯ ಭವನದಲ್ಲಿ ರಾಜ್ಯ ಮಟ್ಟದ ಅರೆಭಾಷೆ ಹಾಗೂ ಸಾಂಸ್ಕೃತಿಕ ಸಮ್ಮೇಳನ ಗೌಜಿ 2016 ಇದರ ಉದ್ಘಾಟನಾ ಸಮಾರಂಭ, ಸಂಜೆ 4 – ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇದರ ಶಾಲಾ ವಾರ್ಷಿಕೋತ್ಸವ. 5ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಶೇರಾ ಕಡೇಶ್ವಾಲ್ಯ ಇದರ ಶಾಲಾ ವಾರ್ಷಿಕೋತ್ಸವ. 6ಕ್ಕೆ ನಂದಾವರ ನಂದಾದೀಪ ಕಲ್ಯಾಣ ಮಂಟಪದಲ್ಲಿ ನೇತ್ರಾವತಿ ಯುವಕ ಮಂಡಲ ನಂದಾವರ ಇದರ ಶನೀಶ್ವರ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮ
ದಿನಾಂಕ: 11ರಂದು ಬೆಳಗ್ಗೆ – ಪೆರಾಜೆ ದಕ್ಷಿಣ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಯಂಗ್ ಬಾಯ್ಸ್ ಪೆರಾಜೆ ಇದರ ವತಿಯಿಂದ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭ, 10ಕ್ಕೆ – ಮಂಗಳೂರು ಪುರಭವನದಲ್ಲಿ ಹೆಲ್ಪ್ ಇಂಡಿಯಾ ಫೌಂಡೇಶನ್ ಇದರ ವತಿಯಿಂದ ಶ್ರವಣ ಸಾಧನಾ ವಿತರಣಾ ಕಾರ್ಯಕ್ರಮ, 11 ಗಂಟೆಗೆ – ಚಿಕ್ಕಮುಡ್ನೂರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ಉತ್ಸವ – 2016 ಬಾಲಮೇಳ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಸಂಜೆ:5.45 – ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದಲ್ಲಿ ಆಳ್ವಾಸ್ ನುಡಿಸಿರಿ ವಿರಾಸತ್ ಘಟಕ ಮಂಗಳೂರು ಇದರ ಆಳ್ವಾಸ್ ಸಾಂಸ್ಕೃತಿ ವೈಭವ ಕಾರ್ಯಕ್ರಮ.
ದಿನಾಂಕ:12ಕ್ಕೆ – ಬೆಳಿಗ್ಗೆ ಸ್ಥಳೀಯ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು, ಸಂಜೆ:4ಕ್ಕೆ – ಸಮಾನ ಮನಸ್ಕ ಯುವ ವೇದಿಕೆ ಗುಡ್ಡೆಯಂಗಡಿ ಇದರ ವತಿಯಿಂದ ಈದ್‌ಮಿಲಾದ್ ಪ್ರಯುಕ್ತ ಸೌಹಾರ್ದ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸುವುದು.
ದಿನಾಂಕ:13ರಂದು – ಬೆಳಿಗ್ಗೆ:9ಕ್ಕೆ – ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರ ಕಕ್ಯಪದವು ಉಳಿ ಇದರ ಪದಗ್ರಹಣ ಹಾಗೂ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ 10ಕ್ಕೆ – ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸುಳ್ಯ ವಿಭಾಗ ಮಟ್ಟದ ಸವಿತಾ ಸಮಾವೇಶ ಕಾರ್ಯಕ್ರಮ.
Be the first to comment on "ಸಚಿವ ಬಿ.ರಮಾನಾಥ ರೈ ಡಿ.10ರಿಂದ 13ವರೆಗಿನ ಪ್ರವಾಸ"