ಬಂಟ್ವಾಳ: ಎತ್ತಿನಹಳ್ಳ ಎಂಬ ಪ್ರದೇಶವನ್ನು ಎತ್ತಿನಹೊಳೆ ಎಂದು ನಾಮಾಂಕಿತಗೊಳಿಸಿ ದ.ಕ ಜಿಲ್ಲೆಯನ್ನು ಬರಡು ಭೂಮಿಯಾನ್ನಾಗಿಸಲು, ನೇತ್ರಾವತಿ ತಿರುವು ಯೋಜನೆಗೆ ಚಾಲನೆ ನೀಡಿ ಈ ರಾಜ್ಯದ ಜನತೆಯ ಕೋಟಿ ಕೋಟ್ಯಾಂತರ ರೂಪಾ ತೆರಿಗೆ ಹಣವನ್ನು ಕೊಳ್ಳೆ ಹೊಡೆಯಲು ಕರ್ನಾಟಕದ ಜನ ವಿರೋಧಿ ಕಾಂಗ್ರೆಸ್ ಸರಕಾರದ ಈ ಯೋಜನೆಯ ವಿರುದ್ಧ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದ ಪಕ್ಷಾತೀತ ಹೋರಾಟದ ಪಂಚ ತೀರ್ಥ- ಸಪ್ತ ಕ್ಷೇತ್ರ ರಥ ಯಾತ್ರೆಯು ತಾ.11 ಮಧ್ಯಾಹ್ನ 2.30 ಕ್ಕೆ ಕಲ್ಲಡ್ಕ ಹಾಗೂ 3.30ಕ್ಕೆ ಬಿ.ಸಿ.ರೋಡ್ ಆಗಮಿಸಲಿದೆ.
ಯೋಜನೆಯಿಂದ ದ.ಕ ಜಿಲ್ಲೆಯ ಜನ ಕುಡಿಯಲು ಕೂಡ ನೀರಿಗಾಗಿ ಪರದಾಡುವ ಸಂಭವ ಸೃಷ್ಟಿಯಾಗುತ್ತದೆ. ತುಳುನಾಡಿನ ಧಾರ್ಮಿಕ, ಸಾಂಸ್ಕೃತಿಕ ವೈಭವವು ಸಂಪೂರ್ಣ ನಶಿಸಿ ಹೋಗುವ ಭೀತಿ ಎದುರಾಗುತ್ತದೆ. ಭತ್ತ, ತೆಂಗು, ಅಡಿಕೆ ಬೆಳೆಯನ್ನು ನಂಬಿರುವ ರೈತಾಪಿ ವರ್ಗ ,ಯಕ್ಷಗಾನ, ನಾಗಾರಾಧನೆ, ಭೂತಾರಾಧನೆಯಿಂದ ಭಾವನಾತ್ಮಕ ಜೀವನವನ್ನು ನಡೆಸುತ್ತಿರುವ ತುಳುನಾಡಿನ ಈ ಜನ ಮುಂದೊಂದು ದಿನ ಈ ಜಿಲ್ಲೆಯನ್ನು ತೊರೆದು ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಕುಮಾರಧಾರಾ, ನೇತ್ರಾವತಿ ,ಪಾಲ್ಗುಣಿ, ಶಾಂಭವಿ, ನಂದಿನಿ ಪರಮ ಪವಿತ್ರ ಪಂಚ ನದಿಗಳ ಜಲದೊಂದಿಗೆ ಸುಬ್ರಹ್ಮಣ್ಯ, ಧರ್ಮಸ್ಥಳ, ಉಪ್ಪಿನಂಗಡಿ, ಪೊಳಲಿ, ಕದ್ರಿ, ಬಪ್ಪನಾಡು, ಕಟೀಲು ಪುಣ್ಯ ಸಾನಿಧ್ಯಗಳನ್ನು ಸಂಪರ್ಕಿಸುವ ಈ ರಥವು ಬಂಟ್ವಾಳ ತಾಲೂಕಿನ ಕಲ್ಲಡ್ಕ ಹಾಗೂ ಬಿ,ಸಿ.ರೋಡಿಗೆ ಆಗಮಿಸುವ ಸಂದರ್ಭ ಜಾತಿ, ಮತ, ಪಕ್ಷಭೇದ ಮರೆತು ಹೋರಾಟದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪಾಲ್ಗೋಳುವ ಮೂಲಕ ಕರ್ನಾಟಕ ಸರಕಾರಕ್ಕೆ ಎಚ್ಚರಿಕೆ ಸಂದೇಶವನ್ನು ರವಾನಿಸೋಣ ಎಂದು ರಾಜೇಶ್ ನಾಯ್ಕ್ ಉಳೇಪಾಡಿ ವಿನಂತಿಸಿದ್ದಾರೆ.
Be the first to comment on "ನಳಿನ್ ರಥಯಾತ್ರೆ ಯಶಸ್ಸಿಗೆ ರಾಜೇಶ್ ನಾಯ್ಕ್ ಮನವಿ"