ಬಂಟ್ವಾಳ: ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈದ್ ಮಿಲಾದ್ ಆಚರಣೆಯಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ಜಾಥಾಕ್ಕೆ ಅವಕಾಶ ಇಲ್ಲ ಎಂದು ಬಂಟ್ವಾಳ ನಗರ ಠಾಣಾಧಿಕಾರಿ ನಂದಕುಮಾರ್ ಹೇಳಿದ್ದಾರೆ.
ಬಂಟ್ವಾಳ ನಗರ ಠಾಣೆಯಲ್ಲಿ ಗುರುವಾರ ಬಂಟ್ವಾಳ ವ್ಯಾಪ್ತಿಯ ವಿವಿಧ ಜಮಾಅತ್ ಗಳ ಪ್ರಮುಖರ, ವಿವಿಧ ಧಾರ್ಮಿಕ ಮುಖಂಡರ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಈ ಸೂಚನೆ ನೀಡಿದ್ದಾರೆ.
ಕಾಲ್ನಡಿಗೆ ಜಾಥಾಕ್ಕೆ ಮಾತ್ರ ಅವಕಾಶವಿದ್ದು ನಿಯಮ ಮೀರಿ ವಾಹನ ಜಾಥ ಮಾಡಿದರೆ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಆಯಕಟ್ಟಿನ ಜಾಗಗಳಲ್ಲಿ ಸಿಸಿ ಕ್ಯಾಮಾರಗಳನ್ನು ಆಳವಡಿಸಲಾಗಿದೆ. ಹಬ್ಬಕ್ಕೆ ಶುಭಕೋರುವ ಬ್ಯಾನರ್ ,ಬಂಟ್ಟಿಗ್ಸ್ ಮತ್ತು ಧ್ವಜಗಳನ್ನು ಹಾಕಲು ಸ್ಥಳೀಯ ಗ್ರಾ.ಪಂ. ಅಥವಾ ಪುರಸಭೆ ಅನುಮತಿ ಪಡೆಯಬೇಕು ಎಂದು ಹೇಳಿದರು.
ಶಾಂತಿಯುತವಾಗಿ ಹಬ್ಬವನ್ನು ಆಚರಣೆ ಮಾಡಲು ನಮಗೆ ಸೂಕ್ತ ಪೋಲೀಸ್ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು.
ಗ್ರಾಮಾಂತರ ಎ.ಎಸ್.ಐ ಭಾಸ್ಕರ, ತರಬೇತಿ ಪಿ.ಎಸ್.ಐ ಈರಯ್ಯ,ನಗರ ಠಾಣಾ ಎ.ಎಸ್.ಐ ಸೇಸಮ್ಮ, ಕರೀಂ, ಕೃಷ್ಣ ಕುಲಾಲ್, ಜಗದೀಶ, ಮುರುಗೇಶ್ ಮತ್ತು ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಹೆದ್ದಾರಿಯಲ್ಲಿ ಜಾಥಾಕ್ಕಿಲ್ಲ ಅವಕಾಶ"